ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರ ಕನಸಿನ ಕೂಸು ವಂದೇ ಭಾರತ್‌ಗೆ ಬೇಡಿಕೆ ಹೆಚ್ಚಿದ್ದು, ಎನ್‌ಡಿಎಯೇತರ 14 ಸಂಸದರೂ ಸೇರಿದಂತೆ 60 ಸಂಸದರು ತಮ್ಮ ಕ್ಷೇತ್ರಗಳಿಗೆ ವಂದೇ ಭಾರತ್ ರೈಲಿನ ಸಂಪರ್ಕ ನೀಡಲು ಭಾರತೀಯ ರೈಲ್ವೆಗೆ ಮನವಿ ಮಾಡಿದ್ದಾರೆ.
ಈಗಾಗಲೇ ದೇಶದಲ್ಲಿ 10 ಮಾರ್ಗದಲ್ಲಿ ವಂದೇ ಭಾರತ್ ಪುರ್ಣ ಪ್ರಮಾಣದ ಕಾರ್ಯಾಚರಣೆ ನಡೆಯುತ್ತಿದೆ. ವಂದೇ ಭಾರತ್ ಸೇವೆಯಿಂದ ಜನರಿಗೆ ಅನುಕೂಲವಾಗುತ್ತಿದೆ. ಈ ಹಿನ್ನೆಲೆ ಸಂಸದರು ತಮ್ಮ ಕ್ಷೇತ್ರಗಳಲ್ಲೂ ವಂದೇ ಭಾರತ್ ಸೇವೆ ಕಲ್ಪಿಸಲು ಮನವಿ ಮಾಡಿದ್ದಾರೆ.
ಮನವಿ ಸಲ್ಲಿಸಿದವರಲ್ಲಿ ಬಿಜೆಪಿ ಸಂಸದರ ಸಂಖ್ಯೆ ಹೆಚ್ಚಿದ್ದು, ಎನ್‌ಡಿಎ ಯೇತರ ಪಕ್ಷಗಳಾದ, ಎನ್‌ಸಿಪಿ, ಡಿಎಂಕೆ, ಎಸ್‌ಪಿ, ಆಪ್, ಜೆಡಿ (ಯು),ಸಿಪಿಐಎಂ, ವೈಎಸ್‌ಆರ್‌ಸಿಪಿ ಪಕ್ಷಗಳ 14 ಸಂಸದರೂ ಕೂಡ ಮನವಿ ಮಾಡಿದ್ದಾರೆ.
ಕರ್ನಾಟಕದಿಂದ ಸಚಿವ ಪ್ರಹ್ಲಾದ್ ಜೋಶಿ ಕೂಡ ಧಾರವಾಡ ಹಾಗೂ ಬೆಂಗಳೂರಿನ ನಡುವೆ ವಂದೇ ಭಾರತ್ ಸೇವೆ ಕಲ್ಪಿಸಿಕೊಡಲು ಕೇಳಿದ್ದಾರೆ.