ಬಾಲಕೋಟ್ ದಾಳಿಯ ಸಾಕ್ಷ್ಯ ಕೇಳಿ ದ್ದನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳ ವಿರುದ್ಧ ಈ ರೀತಿ ಕಿಡಿಕಾರಿದ್ದು ಪ್ರಧಾನಿ ನರೇಂದ್ರ ಮೋದಿ. ಮಂಗಳವಾರ ಬಿಹಾರ ಹಾಗೂ ಒಡಿಶಾದಲ್ಲಿ ಚುನಾವಣಾ ಪ್ರಚಾರ ರ್ಯಾಲಿ ನಡೆಸಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡುತ್ತಿರುವ ಪಾಕಿಸ್ತಾನದ ಸಹಾಯಕರು ಅಧಿಕಾರಕ್ಕೆ ಬರಬೇಕೋ, ಬೇಡವೋ ಎಂಬುದನ್ನು ನೀವೇ ನಿರ್ಧರಿಸಿ ಎಂದೂ ಹೇಳಿದ್ದಾರೆ.
ಯಾವಾಗೆಲ್ಲ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆಯೋ, ದೇಶದ ಆಡಳಿತವು ರಿವರ್ಸ್ ಗೇರ್‌ನಲ್ಲಿ ಸಾಗಿದೆ. ಭಯೋತ್ಪಾದಕ ಚಟುವಟಿಕೆಗಳು, ಹಿಂಸಾ ಚಾರ, ಕಪ್ಪುಹಣ ಹೆಚ್ಚಾಗಿದೆ. ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ ಎಂದೂ ಮೋದಿ ಆರೋಪಿಸಿದ್ದಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ ನೈಜ ಗೌರವ ಸಲ್ಲಿಸಿದ್ದು ನಾವು. ಲಂಡನ್ ಸೇರಿದಂತೆ ಅಂಬೇಡ್ಕರ್ ಜತೆ ಸಂಬಂಧವಿರುವ 5 ಪ್ರದೇಶಗಳನ್ನು ಪಂಚ ತೀರ್ಥಗಳಾಗಿ ಅಭಿವೃದ್ಧಿಪಡಿಸಿದ್ದು ನಮ್ಮ ಸರ್ಕಾರ ಎಂದೂ ಹೇಳಿದ್ದಾರೆ.
Advertisement
ಚೌಕಿದಾರನಿಂದ ಪ್ರಗತಿಇದಕ್ಕೂ ಮುನ್ನ ಒಡಿಶಾದಲ್ಲಿ ನಡೆದ ರ್ಯಾಲಿಯಲ್ಲಿ ಆಡಳಿತಾರೂಢ ಬಿಜೆಡಿ ಸರ್ಕಾರ ವನ್ನು ತರಾಟೆಗೆ ತೆಗೆದುಕೊಂಡ ಮೋದಿ, “ಒಡಿಶಾವನ್ನು ಅಭಿವೃದ್ಧಿಪಡಿಸಲು ಬಿಜೆಡಿ ಅಡ್ಡಗಾಲು ಹಾಕುತ್ತಲೇ ಬಂತು. ಆದರೂ ಕೇಂದ್ರದ ವಿವಿಧ ಯೋಜನೆಗಳ ಮೂಲಕ ರಾಜ್ಯವನ್ನು ಈ ಚೌಕಿದಾರ ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ’ ಎಂದಿದ್ದಾರೆ.