Advertisement

ಕಡ್ಡಾಯ ವರ್ಗಾವಣೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ವಿರೋಧ

12:46 PM Jun 25, 2019 | Suhan S |

ಹುಬ್ಬಳ್ಳಿ: ಸರಕಾರ ಪ್ರಾಥಮಿಕ ಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆಗೊಳಿಸಿರುವುದನ್ನು ವಿರೋಧಿಸಿ ಶಿಕ್ಷಕರು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟ ನಿವಾಸಕ್ಕೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

Advertisement

ನಿಯಮಾನುಸಾರ ಈಗಾಗಲೇ ಶಹರ ಭಾಗದಲ್ಲಿ 10 ವರ್ಷ‌ ಸೇವೆ ಸಲ್ಲಿಸಿದ ಶಿಕ್ಷಕರನ್ನು ನೇರವಾಗಿ ಸಿ ವಲಯಕ್ಕೆ ವರ್ಗಾವಣೆ ಮಾಡುತ್ತಾರೆ. ಸರಕಾರದ ಈ ನೀತಿ ಹಲವು ಲೋಪದೋಷಗಳಿಂದ ಕೂಡಿದೆ. ಶಿಕ್ಷಕರು ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ 10-15 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿಯಮಾನುಸಾರ ಶಹರ ಪ್ರದೇಶಕ್ಕೆ ಬಂದಿದ್ದಾರೆ. ಈಗ ಸಾಮಾನ್ಯವಾಗಿ 50 ವರ್ಷ ಮೇಲ್ಪಟ್ಟವರೇ ಕಡ್ಡಾಯ ವರ್ಗಾವಣೆಗೆ ಒಳಗಾಗುತ್ತಾರೆ. ಅಲ್ಲದೆ ಕಡ್ಡಾಯ ವರ್ಗಾವಣೆ ಮಾರ್ಗಸೂಚಿಯಲ್ಲಿ ಎಲ್ಲಿಯೂ ಸರಕಾರಿ ಸೇವೆಯಲ್ಲಿರುವ ಪತಿ-ಪತ್ನಿಯನ್ನು ಕಡ್ಡಾಯವಾಗಿ ವರ್ಗಾವಣೆಯಿಂದ ವಿನಾಯಿತಿಗೊಳಿಸಬೇಕೆಂದು ತಿಳಿಸಿಲ್ಲ. ಆದರೆ ಕಡ್ಡಾಯ ವರ್ಗಾವಣೆಗೊಳಪಡಿಸುವ ಶಿಕ್ಷಕರ ಯಾದಿಯಲ್ಲಿ ಸರಕಾರಿ ಸೇವೆಯಲ್ಲಿರುವ ಪತಿ-ಪತ್ನಿಯರನ್ನು ಕೈಬಿಡಲಾಗಿದೆ. ಕಡ್ಡಾಯ ವರ್ಗಾವಣೆ ನ್ಯಾಯಸಮ್ಮತವಾಗಿಲ್ಲ. ಸರಕಾರ ಕೂಡಲೇ ನ್ಯಾಯಸಮ್ಮತ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು. ಶಿಕ್ಷಕರ ಮನವಿಗೆ ಸ್ಪಂದಿಸಿದ ಹೊರಟ್ಟಿ, ಸರಕಾರದ ಗಮನಕ್ಕೆ ತಂದು ಮಾರ್ಪಾಡು ಮಾಡಲು ಹೇಳುವೆ ಎಂದರು. ಎ.ವಿ. ಬೂದಿಹಾಳ, ಎನ್‌.ಎಂ. ಭಟ್ಟ, ಜೆ.ಎ. ಉಪಾಧ್ಯಾಯ, ಎಲ್.ಎ. ಹಂಪಿಹೊಳಿ, ಜೆ.ಡಿ. ಪೂಜಾರ, ವೈ.ವಿ. ಮಾದನಶೆಟ್ಟಿ, ವಿ.ಡಿ. ತೊರಗಲ್, ಎಸ್‌.ಎಸ್‌. ನಂದಿಕೇಶ್ವರ, ಕೆ.ಆರ್‌. ಚಕ್ರಸಾಲಿ, ಜಿ.ಎಚ್. ಪೂಜಾರ, ನಾಗಲತಾ, ಎಸ್‌.ಕೆ. ಕಾಡದೇವರ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next