ನವ ದೆಹಲಿ : ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳ ಮಾತುಗಳಿಗೆ ಅವಕಾಶವನ್ನೇ ನೀಡಿಲ್ಲಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ವಿಜಯ್ ಚೌಕ್ ಬಳಿ ಪ್ರತಿಭಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳ ಮಾತಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾತಾಡುವುದಕ್ಕೆ ಅವಕಾಶ ನೀಡಿಲ್ಲ. ದೇಶದ ಶೇಕಡಾ 60 ರಷ್ಟು ಜನರ ಧ್ವನಿಗಳನ್ನು ಹತ್ತಿಕ್ಕಲಾಗಿದೆ ಎಂದು ಅವರು ಗುಡುಗಿದ್ದಾರೆ.
ಇದನ್ನೂ ಓದಿ : ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ, ಬಹುಮತದೊಂದಿಗೆ ಕೈ ಅಧಿಕಾರಕ್ಕೆ: ಎಸ್.ಆರ್. ಪಾಟೀಲ
ಸಂಸತ್ತಿನ ಮುಂಗಾರು ಅಧಿವೇಶನ ಮುಗಿದಿದೆ. ಜನರ ಸಮಸ್ಯೆಯನ್ನು ಚರ್ಚಿಸದ ಸಂಸತ್ ಅಧಿವೇಶನ ಪ್ರಜಾಪ್ರಭುತ್ವದ ಕೊಲೆ ಮಾಡಿದ ಹಾಗಾಗಿದೆ. ನಿನ್ನೆ(ಆಗಸ್ಟ್ 11) ರಾಜ್ಯ ಸಭೆಯಲ್ಲಿ ಪ್ರತಿಪಕ್ಷಗಳ ಧ್ವನಿ ಮೇಲೆ ದಾಳಿ ಮಾಡಿದರು, ಪ್ರತಿಪಕ್ಷ ನಾಯಕರ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ, ಇದು ಸಹ್ಯವಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ರೈತ ವಿರೋಧಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳು, ಪೆಗಾಸಸ್ ವಿಚಾರಗಳನ್ನು ಸರ್ಕಾರ ಮುನ್ನೆಲೆಗೆ ತರುವುದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ದುರ್ವರ್ತನೆಯನ್ನು ಪ್ರದರ್ಶಿಸಿದೆ ಎಂದು ಸಿಡಿದಿದ್ದಾರೆ.
ಇನ್ನು, ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನೆಯ ಸಂಸದ ಸಂಜಯ್ ರಾವತ್, ನಮಗೆ ನಮ್ಮ ವಿಚಾರಗಳನ್ನು ಮಂಡಿಸುವುದಕ್ಕೆ ಸಂಸತ್ತಿನಲ್ಲಿ ಅವಕಾಶವನ್ನೇ ಮಾಡಿಕೊಡಲಿಲ್ಲ. ಸಂಸದೆಯ ನಡೆದ ಘಟನೆ ಪ್ರಜಾಪ್ರಭುತ್ವದಕ್ಕೆ ವಿರುದ‍್ಧವಾದದ್ದು, ನಾವು ಪಾಕಿಸ್ತಾನದ ಗಡಿಯಲ್ಲಿದ್ದೇವೋ, ಸಂಸತ್ತಿನಲ್ಲಿದ್ದೇವೋ ಎನ್ನುವುದು ಗೊತ್ತಾಗಲಿಲ್ಲ ಎಂದು ಅವರು ಗುಡುಗಿದ್ದಾರೆ.
ಇದನ್ನೂ ಓದಿ : ವಿರಾಟ್ ಕೊಹ್ಲಿಯ ಟಾಸ್ ಸೋಲಿನ ಕಥೆ! ಇಂಗ್ಲೆಂಡ್ ನಲ್ಲಿ ಟಾಸ್ ಸೋತಾಗೆಲ್ಲಾ ತಂಡಕ್ಕೆ ಸೋಲು