Advertisement

ಮತ್ತೂಂದು ಸುತ್ತಿನ ಬಲ ಪ್ರದರ್ಶನ

07:00 AM Dec 17, 2018 | Team Udayavani |

ಚೆನ್ನೈ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಮಹಾಮೈತ್ರಿ ರಚನೆಗೆ ಮುಂದಾಗಿರುವ ಪ್ರತಿಪಕ್ಷಗಳು ಭಾನುವಾರ ತಮಿಳುನಾಡಿನಲ್ಲಿ ಮತ್ತೂಂದು ಸುತ್ತಿನ ಒಗ್ಗಟ್ಟು ಪ್ರದರ್ಶಿಸಿವೆ.

Advertisement

ಚೆನ್ನೈನಲ್ಲಿ ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ಭಾನುವಾರ ನಡೆದಿದ್ದು, ವಿಪಕ್ಷಗಳು ಅನೇಕ ನಾಯಕರು ಇದರಲ್ಲಿ ಭಾಗವಹಿಸುವ ಮೂಲಕ ಬಲಪ್ರದರ್ಶನ ಮಾಡಿದ್ದಾರೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌, ಡಿಎಂಕೆ ಕಾರ್ಯಾಧ್ಯಕ್ಷ ಸ್ಟಾಲಿನ್‌, ಕೇರಳ ಸಿಎಂ ಪಿಣರಾಯಿ ವಿಜಯನ್‌, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಕಾರ್ಯಕ್ರಮದಲ್ಲಿ ಉಪ ಸ್ಥಿತ ರಿದ್ದರು. ನಟ ಹಾಗೂ ರಾಜಕಾರಣಿ ರಜನಿಕಾಂತ್‌ ಅವರೂ ಇದರಲ್ಲಿ ಪಾಲ್ಗೊಂಡಿದ್ದದ್ದು ವಿಶೇಷವಾಗಿತ್ತು.

ಸೋಮವಾರ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಿಎಂಗಳ ಪ್ರಮಾಣ ಸ್ವೀಕಾರ ಸಮಾರಂಭದಲ್ಲೂ ಇದೇ ಒಗ್ಗಟ್ಟು ಪುನರಾವರ್ತಿಸಲಿದೆ. ಈ ಹಿಂದೆ ಕರ್ನಾಟಕ ಸಿಎಂ ಕುಮಾರಸ್ವಾಮಿ ಅವರ ಪ್ರಮಾಣ ಸ್ವೀಕಾರ ಕಾರ್ಯಕ್ರಮಕ್ಕೂ ವಿಪಕ್ಷಗಳ ನಾಯಕರು ಆಗಮಿಸುವ ಮೂಲಕ ಮಹಾಮೈತ್ರಿಗೆ ಮುನ್ನುಡಿ ಬರೆಯುವ ಸುಳಿವು ನೀಡಿದ್ದರು.

ಭಾನುವಾರ ಕರುಣಾ ಅವರ ಪ್ರತಿಮೆಯನ್ನು ಸೋನಿಯಾ ಗಾಂಧಿ ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದ ಡಿಎಂಕೆ ಕಾರ್ಯಾಧ್ಯಕ್ಷ ಸ್ಟಾಲಿನ್‌, “ರಾಹುಲ್‌ ಗಾಂಧಿ ಅವರೇ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಬೇಕು’ ಎಂದು ಆಗ್ರಹಿಸಿದರು. ಕಾರ್ಯ ಕ್ರಮದಲ್ಲಿ ಮಾತನಾಡಿದ ರಾಹುಲ್‌, “ಕೇಂದ್ರ ಸರ್ಕಾರವು ಜನರ ಧ್ವನಿ, ಸಂಸ್ಕೃತಿ, ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದೆ. ಕರುಣಾನಿಧಿ ಅವರ ಸ್ಮರಣೆಯಲ್ಲಿ ಭಾರತದ ಎಲ್ಲ ಧ್ವನಿಗಳೂ ಒಗ್ಗಟ್ಟಾಗಿ, ಬಿಜೆಪಿಯನ್ನು ಸೋಲಿಸಲಿದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next