Advertisement

ಕೋಟ ಜನಸ್ನೇಹಿ ಕೇಂದ್ರಕ್ಕೆ  ವಿಪಕ್ಷ ನಾಯಕರ ಭೇಟಿ 

01:00 AM Mar 12, 2019 | Team Udayavani |

ಕೋಟ: ಅಟಲ್‌ ಜೀ ಜನಸ್ನೇಹಿ ಕೇಂದ್ರದಲ್ಲಿ ಸುಮಾರು 15ದಿನಗಳಿಂದ ಸರ್ವರ್‌ನ  ತಾಂತ್ರಿಕ ಸಮಸ್ಯೆಯಿಂದ ನಮೂನೆ 57ರಡಿ ಅರ್ಜಿ ಸಲ್ಲಿಸಲು ಆಗಮಿಸುವ ನೂರಾರು ಮಂದಿಗೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು ಈ ಕುರಿತು ಉದಯವಾಣಿ ಮಾ.10ರಂದು ವಿಸ್ಕೃತ ವರದಿ ಪ್ರಕಟಿಸಿತ್ತು.

Advertisement

ಇದೀಗ ಸೋಮವಾರ ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಕೋಟ ಜನಸ್ನೇಹಿ ಕೇಂದ್ರಕ್ಕೆ  ಭೇಟಿ ನೀಡಿ ಅವ್ಯವಸ್ಥೆಯ ವಿರುದ್ಧ ಕಿಡಿಕಾರಿದರು.

ಕಂದಾಯ ಸಚಿವರು; ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ
ಬೆಳಗ್ಗೆ 8.30ರ ಸುಮಾರಿಗೆ ಜನಸಂಪರ್ಕ ಕೇಂದ್ರಕ್ಕೆ ಪೂಜಾರಿಯವರು ಭೇಟಿ ನೀಡಿದ್ದು  ಆಗ  100ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಕೆಗಾಗಿ ಕಾದುನಿಂತಿದ್ದರು ಹಾಗೂ ತಮ್ಮ ಸಮಸ್ಯೆಯನ್ನು ತಿಳಿಸಿದರು.  ಅನಂತರ ನೇರವಾಗಿ ಕಂದಾಯ ಸಚಿವರಿಗೆ ಕರೆ ಮಾಡಿ ಸಮಸ್ಯೆಯ ಕುರಿತು ಮಾತನಾಡಿ ತುರ್ತು ಪರಿಹಾರಕ್ಕೆ ಮನವಿ ಮಾಡಿದರು. ಜಿಲ್ಲಾಧಿಕಾರಿಗಳ ಜತೆಯೂ ಚರ್ಚೆ ನಡೆಸಿದರು.

ಕೈಬರಹದ ಮೂಲಕ ಅರ್ಜಿ ಸ್ವೀಕೃತಿಗೆ ಒಪ್ಪಿಗೆ
ಸಮಸ್ಯೆಯ ಕುರಿತು ಚರ್ಚೆ ನಡೆಸಿದ ಜಿಲ್ಲಾಧಿಕಾರಿಗಳು ತುರ್ತು ಪರಿಹಾರದ ಸಲುವಾಗಿ ಕೈಬರಹದ ಮೂಲಕ ಅರ್ಜಿ ಸ್ವೀಕರಿಸಲು ಸಿಬಂದಿಗಳಿಗೆ ಸೂಚನೆ ನೀಡಿದರು. ಅನಂತರ ಎರಡು ಪ್ರತ್ಯೇಕ ಕೌಂಟರ್‌ಗಳನ್ನು ಮಾಡಿ ಕೈಬರಹದ ಅರ್ಜಿಗಳನ್ನು ಪಡೆಯಲಾಯಿತು. ಒಂದು ವಾರದ ಅನಂತರ ಅರ್ಜಿಯಲ್ಲಿನ ಮಾಹಿತಿಗಳನ್ನು ಕಂಪ್ಯೂಟರ್‌ಗೆ ದಾಖಲಿಸಿ ಅರ್ಜಿದಾರರಿಗೆ ಸ್ವೀಕೃತಿ ನೀಡುವುದಾಗಿ ತೀರ್ಮಾನಿಸಲಾಯಿತು.  ಈ ಹಿಂದೆ ಉಯವಾಣಿಯ ವರದಿಯಲ್ಲೂ ಕೈಬರಹದ ಮೂಲಕ ಅರ್ಜಿ ಸ್ವೀಕೃತಿ ಸೂಕ್ತ ಎನ್ನುವ ಸಲಹೆ ನೀಡಲಾಗಿತ್ತು.
ಬೆಳಗ್ಗೆ 8.30ಕ್ಕೆ ಆಗಮಿಸಿದ ಪೂಜಾರಿಯವರು  10.30ರ ತನಕ ಜನರ ನಡುವೆ  ನಿಂತು ಬಹುತೇಕ ಅರ್ಜಿಗಳನ್ನು ವಿಲೇಗೋಳಿಸಿ ತೆರಳಿದರು.

ಕಾಲಾವಕಾಶ ವಿಸ್ತರಿಸಲು ಮನವಿ 
ನಮೂನೆ 57 ಅರ್ಜಿ ಸಲ್ಲಿಕೆಗೆ 16-3-2019ರ ವರೆಗೆ ಅವಕಾಶ ನೀಡಲಾಗಿದೆ. ಆದರೆ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಲು ಬಾಕಿ ಇರುವುದರಿಂದ ಸಮಯಾವಕಾಶ ಕಡಿಮೆಯಾಗುತ್ತದೆ. ಕಾಲಾವಕಾಶ ವಿಸ್ತರಿಸಬೇಕು ಎಂದು ಶ್ರೀನಿವಾಸ್‌ ಪೂಜಾರಿಯವರು ಕಂದಾಯ ಸಚಿವರಿಗೆ ಮನವಿ ಮಾಡಿದ್ದು ಪೂರಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next