Advertisement

ಡಿಕೆಶಿ ಒಟ್ಟಾರೆ ನಡೆ ಬಗ್ಗೆ ಸಿದ್ದು ಅಸಮಾಧಾನ? ಅಧಿವೇಶನ ಬಳಿಕ ವರಿಷ್ಠರ ಭೇಟಿ

10:53 AM Mar 07, 2022 | Team Udayavani |

ಬೆಂಗಳೂರು : ರಾಹುಲ್ ಗಾಂಧಿ ಕಿವಿ ಮಾತಿನ ಬಳಿಕವೂ ರಾಜ್ಯ ಕಾಂಗ್ರೆಸ್ ನಲ್ಲಿ ಮುಸುಕಿನ ಗುದ್ದಾಟ ಮುಂದುವರಿದಿದ್ದು, ಬಜೆಟ್ ಅಧಿವೇಶನದ ಬಳಿಕ ವರಿಷ್ಠರ ಭೇಟಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.

Advertisement

ಮೇಕೆದಾಟು ಪಾದಯಾತ್ರೆ, ಸದನದಲ್ಲಿ ಅಹೋರಾತ್ರಿ ಧರಣಿ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಪಟ್ಟಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಒಟ್ಟಾರೆ ನಡೆ ಸಿದ್ದರಾಮಯ್ಯ ಅವರಿಗೆ ಸರಿ ಬಂದಿಲ್ಲ. ಡಿ.ಕೆ.ಶಿವಕುಮಾರ್ ” ಬುಲ್ಡೋಜ್” ಧೋರಣೆ ಪ್ರದರ್ಶಿಸಿದ್ದಾರೆ ಎಂಬ ಬೇಸರ ಸಿದ್ದರಾಮಯ್ಯ ಬಣವನ್ನು ಕಾಡುತ್ತಿದೆ. ಹೀಗಾಗಿ ವರಿಷ್ಠರನ್ನು ಭೇಟಿ ಮಾಡಿ ಎಲ್ಲ ವಿಚಾರವನ್ನು ಮುಕ್ತ ವಾಗಿ ವಿವರಿಸಲು ನಿರ್ಧರಿಸಿದ್ದಾರೆ.

ಬಜೆಟ್ ಅಧಿವೇಶನದ ಬಳಿಕ ಸಿದ್ದರಾಮಯ್ಯ ದಿಲ್ಲಿ ಭೇಟಿಗೆ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಭೇಟಿಗೆ ಅವರು ಈ ಬಾರಿ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಮಾರ್ಗವನ್ನೂ ಬಿಟ್ಟು ಹೈಕಮಾಂಡ್ ಮಟ್ಟದಲ್ಲಿ ವಿಶ್ವಾಸ ಗಳಿಸಿರುವ ರಾಜ್ಯ ನಾಯಕರೊಬ್ಬರನ್ನು ಬಳಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪದಾಧಿಕಾರಿಗಳ ಪಟ್ಟಿ ಇತ್ಯಾದಿ ವಿಚಾರವನ್ನು ಮೀರಿದ ಸಂಗತಿಗಳು ಈ ಭೇಟಿ ಸಂದರ್ಭದಲ್ಲಿ ಚರ್ಚೆಯಾಗಲಿದೆ. ಸಿದ್ದರಾಮಯ್ಯ ವಲಸೆ ಬಂದವರು. ಚುನಾವಣೆ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಗೆ ಕೈ ಕೊಡಬಹುದು ಎಂದು ಪಕ್ಷದ ಕೆಲವರು ಅಪಪ್ರಚಾರ ನಡೆಸುತ್ತಿರುವುದು ಅವರಿಗೆ ತೀವ್ರ ಬೇಸರ ಸೃಷ್ಟಿಸಿದ್ದು, ಎಲ್ಲ ಮಾಹಿತಿಗಳನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ರಿದೆ.

Advertisement

Udayavani is now on Telegram. Click here to join our channel and stay updated with the latest news.

Next