Advertisement

ನೂರಾರು ಪೊಲೀಸ್‌ ಕುಟುಂಬಗಳ ಮಹಿಳೆಯರು, ಮಕ್ಕಳಿಂದ ಎಸ್ಪಿ ಭೇಟಿ

03:46 PM Oct 12, 2021 | Team Udayavani |

ಕೆಜಿಎಫ್:ಕೆಜಿಎಫ್ ಪೊಲೀಸ್‌ ಜಿಲ್ಲೆಯನ್ನು ನೂತನವಾಗಿ ರಚಿತವಾಗಿರುವ ವಿಜಯನಗರ ಜಿಲ್ಲೆಯೊಡನೆ ವಿಲೀನ ಮಾಡಬಾರದು ಎಂದು ಒತ್ತಾಯಿಸಿ ನೂರಾರು ಪೊಲೀಸ್‌ ಕುಟುಂಬಗಳ ಮಹಿಳೆಯರು ಮತ್ತು ಮಕ್ಕಳು ಸೋಮವಾರ ಚಾಂಪಿಯನ್‌ ಶಿಫ್ ದ ಮೆರವಣಿಗೆಯಲ್ಲಿ ಬಂದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್‌ಗೆ ಮನವಿ ಸಲ್ಲಿಸಿದರು.

Advertisement

ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆ ವಸತಿಗೃಹದಿಂದ ಮೆರವಣಿಗೆಯಲ್ಲಿ ಬಂದ ಮಹಿಳೆಯರು ಜಿಲ್ಲಾ ಪೊಲೀಸ್‌ ಕಚೇರಿ ಆವರಣದಲ್ಲಿ ಕೊಂಚ ಕಾಲ ನೆಲದಲ್ಲಿ ಕುಳಿತರು. ಇಷ್ಟು ವರ್ಷಗಳಿಂದ ಪೊಲೀಸ್‌ ವಸತಿಗೃಹದಲ್ಲಿ ವಾಸವಾಗಿದ್ದೇವೆ. ಮುಳಬಾಗಿಲು, ಶ್ರೀನಿವಾಸಪುರ, ಮಾಲೂರು, ಕೋಲಾರ, ಬಂಗಾರಪೇಟೆ ತಾಲೂಕಿನ ಜನ ವಾಸವಾಗಿದ್ದೇವೆ. ನಮ್ಮ ಮಕ್ಕಳನ್ನು ಈವರ್ಷ ಶಾಲೆಗೆ ಸೇರಿಸಿದ್ದೇವೆ. ಈಗ ಇದ್ದಕ್ಕಿದ್ದಂತೆ ವಿಜಯನಗರ ಜಿಲ್ಲೆಗೆ ಹೋಗು ಎಂದರೆ ಹೇಗೆ ಹೋಗುವುದು. ಮಕ್ಕಳನ್ನು ಎಲ್ಲಿಗೆ ಕಳುಹಿಸುವುದು ಎಂದು ತಮ್ಮ ಅಳಲು ತೋಡಿಕೊಂಡರು.‌

ಇದನ್ನೂ ಓದಿ;- ಸಚಿವ ಡಾ.ಕೆ.ಸಿ ನಾರಾಯಣ ಗೌಡ ಅವರಿಂದ ಎನ್ಎಸ್ಎಸ್ ರಾಜ್ಯ ಪ್ರಶಸ್ತಿ ಪ್ರದಾನ

 ಮಾನವೀಯತೆ ಇಲ್ಲದೆ ನಿರ್ಧಾರ: ಮನೆಯಲ್ಲಿ ವಯಸ್ಸಾದ ತಂದೆ ತಾಯಿ, ಅಜ್ಜಿ ತಾತಂದಿರು ಇದ್ದಾರೆ. ಅವರನ್ನು ಕೂಡ ಜೊತೆಯಲ್ಲಿ ಕರೆದುಕೊಂಡು ಹೋಗಲು ಆರ್ಥಿಕ ವೆಚ್ಚ ಹೆಚ್ಚಾಗುತ್ತದೆ. ಸರ್ಕಾರ ಮಾನವೀಯತೆ ಇಲ್ಲದೆ ನಿರ್ಧಾರ ತೆಗೆದುಕೊಳ್ಳುತ್ತದೆ. ಎಸ್ಪಿ ಕಚೇರಿ ಹೋದರೆ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬರುವುದು ಎಲ್ಲರಿಗೂ ತಿಳಿದೇ ಇದೆ.

ಇಂತಹ ಸಂದರ್ಭದಲ್ಲಿ ಎಸ್ಪಿ ಕಚೇರಿ ವಿಲೀನ ಮಾಡುವುದು ಎಷ್ಟು ಸರಿ ಎಂದು ಮಹಿಳೆಯರು ನೋವನ್ನು ತೋಡಿಕೊಂಡರು. ಪೊಲೀಸ್‌ ಜಿಲ್ಲೆ ವಿಲೀನ ಬೇಡ: ನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್‌ ಅವರನ್ನು ಭೇಟಿ ಮಾಡಿದ ಪೊಲೀಸ್‌ ಕುಟುಂಬದವರು ತಮ್ಮ ಸಂಕಷ್ಟಗಳನ್ನು ತೋಡಿಕೊಂಡರು.

Advertisement

ಯಾವುದೇ ಕಾರಣದಿಂದಲೂ ಪೊಲೀಸ್‌ ಜಿಲ್ಲೆಯನ್ನು ವಿಲೀನ ಮಾಡಬಾರದು. ಪೊಲೀಸರನ್ನು ವರ್ಗಾವಣೆ ಮಾಡಬಾರದು ಎಂದು ಒತ್ತಾಯಿಸಿದರು. ಪೊಲೀಸ್‌ ಕುಟುಂಬದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಎಸ್ಪಿ, ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಬಂದಿರುವುದನ್ನು ಹೇಗೆ ನಂಬುವುದು. ಜೊತೆಗೆ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಹಿರಿಯ ಅಧಿಕಾರಿಗಳು ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಮುರಳೀಧರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next