Advertisement

ಕಾಶ್ಮೀರ ಕಣಿವೆಗೆ ವಿಪಕ್ಷ ಪಡೆಯ ದೌಡು: ಕುತೂಹಲ ಕೆರಳಿಸಿದ ರಾಹುಲ್‌ ನಡೆ

09:31 AM Aug 25, 2019 | keerthan |

ಶ್ರೀನಗರ: ಜಮ್ಮುಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಪ್ರತಿಪಕ್ಷಗಳ ನಾಯಕರು ರಾಹುಲ್‌ ಗಾಂಧಿ ನೇತೃತ್ವದಲ್ಲಿ ಶನಿವಾರ ಶ್ರೀನಗರಕ್ಕೆ ಭೇಟಿ ನೀಡಲಿದ್ದಾರೆ.

Advertisement

ವಿವಿಧ ಪಕ್ಷಗಳ ನಾಯಕರುಗಳಾದ ಗುಲಾಮ್‌ ನಬೀ ಆಜಾದ್‌, ಸೀತರಾಮ್‌ ಯಚೂರಿ, ಡಿ ರಾಜಾ, ಮನೋಜ್‌ ಝಾ, ಆನಂದ್‌ ಶರ್ಮಾ, ಡಿ ಕುಪೇಂದ್ರ ರೆಡ್ಡಿ, ಮಜೀದ್‌ ಮೆಮನ್‌, ಕೆ ಸಿ ವೇಣುಗೋಪಾಲ್‌, ತಿರುಚ್ಚಿ ಸಿವಾ, ಶರದ್‌ ಯಾದವ್‌, ಮತ್ತು ದಿನೇಶ್‌ ತ್ರಿವೇದಿ ಅವರನ್ನು ಒಳಗೊಂಡ ತಂಡವು ರಾಹುಲ್‌ ಗಾಂಧಿ ನೇತೃತ್ವದಲ್ಲಿ ಶ್ರೀನಗರಕ್ಕೆ ಭೇಟಿ ನೀಡಲಿದ್ದಾರೆ.

ಇತ್ತೀಚೆಗಷ್ಟೇ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌  ಹಾಗೂ ರಾಹುಲ್‌ ನಡುವೆ ಕಣಿವೆ ರಾಜ್ಯದ ಭೇಟಿಗೆ ಸಂಬಂಧಿಸಿ ವಾಕ್ಸಮರ ನಡೆದಿತ್ತು. ರಾಜ್ಯದ ಪರಿಸ್ಥಿತಿ ಅವಲೋಕಿಸಲು ವಿಪಕ್ಷ ನಾಯಕರಿಗೆ ಬೇಕಾದರೆ ಕಾಪ್ಟರ್‌ ವ್ಯವಸ್ಥೆ ಮಾಡುತ್ತೇನೆ ಎಂದು ರಾಜ್ಯಪಾಲ ಸತ್ಯಪಾಲ ಮಲಿಕ್‌  ಹೇಳಿದ್ದರು. ಇದರಿಂದಾಗಿ ಈಗ ರಾಹುಲ್‌ ನೇತೃತ್ವದಲ್ಲಿ ವಿಪಕ್ಷ ನಾಯಕರು ಕಣಿವೆ ರಾಜ್ಯದತ್ತ ದೌಡಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next