ನಂಜನಗೂಡು: ಕಾರ್ಮಿಕ ಇಲಾಖೆ ನಿಯಮ ಉಲ್ಲಂ ಸಿ ನಿಗದಿತ ಅವಧಿಗಿಂತಲೂ ಹೆಚ್ಚು ಸಮಯ ಕೆಲಸ ಮಾಡಿಸಿಕೊಳ್ಳುತ್ತಿರುವ ಖಾಸಗಿ ಕಂಪನಿ ವಿರುದ್ಧ ಕಾರ್ಖಾನೆ ಕಾರ್ಮಿಕರು, ಅಂಬೇಡ್ಕರ್ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಲ್ಲಿಯ ಕೈಗಾರಿಕಾ ಪ್ರದೇಶದಲ್ಲಿರುವ ರುಷಿ ಫೈಬಿಕ್ ಸಲ್ಯೂಷನ್ ಖಾಸಗಿ ಕಾರ್ಖಾನೆ ಮುಂದೆ ಸೇನೆಯ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಬಸವಟ್ಟಿಗೆ ನೇತೃತ್ವದಲ್ಲಿ ಸೇನೆಯ ಕಾರ್ಯಕರ್ತರು ಬೇಡಿಕೆಗಳನ್ನು ಮುಂದಿಟ್ಟು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.
ಉಪಾಧ್ಯಕ್ಷ ನಾಗೇಂದ್ರ ಬಸವಟ್ಟಿಗೆ ಮಾತನಾಡಿ, ಸದರಿ ಕಾರ್ಖಾನೆಯಲ್ಲಿ ಮಹಿಳೆಯರು ಮತ್ತು ಪುರುಷರು ಕೆಲಸ ಮಾಡುತ್ತಿದ್ದು, ಕಂಪನಿಯ ಆಡಳಿತ ಮಂಡಳಿ ಕಾರ್ಮಿಕ ಇಲಾಖೆ ನಿಯಮ ಉಲ್ಲಂ ಸಿ ನಿಯಮಿತ ಅವಧಿಯನ್ನೂ ಮೀರಿ ಕಾರ್ಮಿಕರಿಂದ ಕೆಲಸ ಮಾಡಿಸಿಕೊಮಡು ಶೋಷಿಸುತ್ತಿದ್ದಾರೆ. ಹೆಚ್ಚುವರಿ ಕೆಲಸಕ್ಕಾಗಿ ಕಾರ್ಮಿಕರಿಗೆ ನೀಡಬೇಕಾದ ಓಟಿ ಸಂದಾಯ ಮಾಡುತ್ತಿಲ್ಲ.
ಇವರಿಗೆ ಕಾನೂನು ಪ್ರಕಾರ ನೀಡಬೇಕಾದ ಭವಿಷ್ಯ ನಿಧಿ, ಇಎಸ್‌ಐ ನೀಡುತ್ತಿಲ್ಲ ಎಂದು ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಕಿಡಿ ಕಾರಿದರು. ಕಾರ್ಮಿಕ ನಿರೀಕ್ಷರಿಗೆ ದೂರು ನೀಡಲು ಕಚೇರಿಗೆ ಹೋದರೆ ಸಿಗುವುದಿಲ್ಲ, ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಕಾರ್ಮಿಕರ ರಕ್ಷಣೆಗೆ ನಿಲ್ಲಬೇಕಾದ ಇಲಾಖೆಯೆ ಮಾಲಿಕರೊಂದಿಗೆ ಶಾಮೀಲಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಖಜಾಂಚಿ ಮಹೇಶ್ ತಗಡೂರು, ಸ್ವಾಮಿ ಮುಳ್ಳೂರು, ಸಿದ್ದರಾಜು ಹುಸ್ಕೂರು, ಕಾರ್ಯದರ್ಶಿ ನಂಜುಂಡಸ್ವಾಮಿ ಬಸವನಪುರ, ಪ್ರ.ಕಾ.ಚಿಕ್ಕಣ್ಣ ದೇಬೂರು, ಮಹೇಶ್ ಗಟ್ಟವಾಡಿಪುರ, ಸೋಮ ದೇವನೂರು ಸೇರಿದಂತೆ ಕಾರ್ಖಾನೆ ಕಾರ್ಮಿಕರು ಮತ್ತು ಸೇನೆಯ ಕಾರ್ಯಕರ್ತರು ಹಾಜರಿದ್ದರು.