ಹುಬ್ಬಳ್ಳಿ: ಎಪಿಎಂಸಿ ಸೆಸ್ ಶೇ.1 ರಷ್ಟು ಹೆಚ್ವಿಸಿರುವುದನ್ನು ವಿರೋಧಿಸಿ ಡಿ.21 ರಂದು ರಾಜ್ಯಾದ್ಯಾಂತ ಎಲ್ಲಾ ಎಪಿಎಂಸಿಗಳನ್ನು ಬಂದ್ ಮಾಡಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ.
ಶುಕ್ರವಾರ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಘದಲ್ಲಿ ಎಪಿಎಂಸಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆದ ಎಪಿಎಂಸಿ ವರ್ತಕರ ಸಭೆಯಲ್ಲಿ ಈ ಸಾಂಕೇತಿಕ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ದಿಢೀರ್ ಶೇ.0.35ರಷ್ಟಿದ್ದ ಸೆಸ್ ಅನ್ನು ಶೇ.1 ರಷ್ಟು ಏರಿಕೆ ಮಾಡಿರುವುದು ಸರಕಾರದ ಅವೈಜ್ಞಾನಿಕ ನಡೆಯಾಗಿದೆ. ಇದು ನೇರವಾಗಿ ರೈತರ ಶೋಷಣೆಗೆ ಕಾರಣವಾಗಲಿದೆ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಡಿ.21 ರಂದು ಎಲ್ಲಾ ಎಪಿಎಂಸಿ ಬಂದ್ ಮಾಡಿ ಸಾಂಕೇತಿಕ ಪ್ರತಿಭಟನೆ ಮಾಡಲಾಗುವುದು. ಡಿ.23 ರಂದು ಬೆಂಗಳೂರಿನ ಎಫ್.ಕೆ.ಸಿ.ಸಿ.ಐ ಸಭಾಂಗಣದಲ್ಲಿ ರಾಜ್ಯದ ಎಲ್ಲಾ ಎಪಿಎಂಸಿ ವರ್ತಕರ ಪ್ರತಿನಿಧಿಗಳ ನೇತೃತ್ವದಲ್ಲಿ ಸಭೆ ಮಾಡಿ ಎಪಿಎಂಸಿ ಸಚಿವ ಎಚ್.ಟಿ.ಸೋಮಶೇಖರ್ ಅವರನ್ನು ಸ್ಥಳಕ್ಕೆ ಕರೆಯಿಸಿ ಶೇ. 0.35 ಕ್ಕೆ ಲಿಖಿತವಾಗಿ ಒಪ್ಪಿಸಲಾಗುತ್ತದೆ. ಒಂದು ವೇಳೆ ಒಪ್ಪದಿದ್ದರೆ ಅನಿರ್ಧಿಷ್ಟಾವಧಿಗೆ ಎಪಿಎಂಸಿ ಬಂದ್ ಕರೆ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಪಿಎಂಸಿ ಕ್ರಿಯಾ ಸಮಿತಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಘೋಷಿಸಿದರು.
ಇದನ್ನೂ ಓದಿ: ಹರಾಜು ಮೂಲಕ ಅವಿರೋಧ ಆಯ್ಕೆ; ಬೈಲೂರಿನ 13 ಸದಸ್ಯರನ್ನು ಅಸಿಂಧುಗೊಳಿಸಿದ ಚುನಾವಣಾ ಆಯೋಗ
ಎಪಿಎಂಸಿ ವರ್ತಕರು, ಎಪಿಎಂಸಿ ಕ್ರಿಯಾ ಸಮಿತಿ ಕೈಗೊಳ್ಳುವ ನಿರ್ಧಾರಕ್ಕೆ ಬೆಂಗಳೂರಿನ ಎಫ್.ಕೆ.ಸಿ.ಸಿ.ಐ ಸಂಪೂರ್ಣ ಬೆಂಬಲ ನೀಡಲಿದೆ. ಯಶವಂತಪುರ ಮಾರುಕಟ್ಟೆ, ಆಲೂಗಡ್ಡೆ ಮಾರುಕಟ್ಟೆವೊಪ್ಪಿಗೆ ಸೂಚಿಸಿವೆ ಎಂದು ಎಫ್.ಕೆ.ಸಿ.ಸಿ.ಐ ಉಪ ಸಮಿತಿ ಅಧ್ಯಕ್ಷ ಪಿ.ಡಿ.ಶಿರೂರ ಸಭೆಯಲ್ಲಿ ಪ್ರಸ್ತಾಪಿಸಿದರು.
ಇದನ್ನೂ ಓದಿ: ಬಿಜೆಪಿ ಸೇರ್ಪಡೆಗೆ ಅಡ್ಡಿ: ಸುವೇಂದು ರಾಜೀನಾಮೆ ಸ್ವೀಕರಿಸಲ್ಲ ಎಂದ ಬಂಗಾಳ ಸ್ಪೀಕರ್!