Advertisement

ಮೊದಲಿನಂತೆ ವ್ಯಾಪಾರ ನಡೆಸಲು ಅವಕಾಶ

11:17 AM Aug 04, 2020 | Suhan S |

ಅರಸೀಕೆರೆ: ರಾಜ್ಯ ಸರ್ಕಾರದ ಆದೇಶದಂತೆ ಕೆಲವು ನಿಯಮಗಳನ್ನು ಹೊರತು ಪಡಿಸಿ ನಗರ ಮತ್ತು ತಾಲೂಕಿನೆಲ್ಲೆಡೆ ಲಾಕ್‌ಡೌನ್‌ ಮುಕ್ತವಾಗಿದ್ದು, ಸಾರ್ವಜನಿಕರ ತಮ್ಮ ವ್ಯಾಪಾರ ವ್ಯವಹಾರಗಳನ್ನು ಮಾಮೂಲಿನಂತೆ ನಡೆಸಿಕೊಂಡು ಹೋಗಬಹುದು ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದರು.

Advertisement

ಟಾಸ್ಕ್ಫೋರ್ಸ್‌ ಸಭೆಯಲ್ಲಿ ಮಾತನಾಡಿ, ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು ಕೋವಿಡ್ ನಿಯಂತ್ರಿಸಲು ಶ್ರಮಿಸುತ್ತಿ ದ್ದರೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಲಾಕ್‌ ಡೌನ್‌ ಪಾಲಿಸಬೇಕೆಂದು ಹಿಂದಿನ ಸಭೆಯಲ್ಲಿ ತೀರ್ಮಾನಿಸಲಾಗಿತ್ತು ಎಂದರು.

ಆದರೆ ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಲಾಕ್‌ಡೌನ್‌ ನಿಯಮಗಳನ್ನು ಸರಳಗೊಳಿಸಿ ಮುಕ್ತವಾಗಿ ಮಾಡಿರುವ ಹಿನ್ನೆಲ್ಲೆಯಲ್ಲಿ ತಾಲೂಕು ಟಾಸ್ಕ್ಫೋರ್ಸ್‌ ಸಮಿತಿ ಸಭೆಯಲ್ಲಿಯೂ ಅದೇ ತೀರ್ಮಾನ ಕೈಗೊಳ್ಳಲಾಗಿದೆ. ಕೋವಿಡ್ ಸೋಂಕಿತ ವ್ಯಕ್ತಿ ಗಳು ಮತ್ತು ಪ್ರಾಥಮಿಕ ಹಂತದ ಸಂಪರ್ಕದ ವ್ಯಕ್ತಿಗಳು ಹೋಂ ಕ್ವಾರೆಂಟೈನ್‌ ನಲ್ಲಿ ಇರಲು ಸರ್ಕಾರ ಅವಕಾಶ ಕಲ್ಪಿಸಿರುವ ಕಾರಣ ಸಾಂ àಕ ಕ್ವಾರೆಂಟೈನ್‌ ಕಡ್ಡಾಯವಲ್ಲ, ಅವರೇ ಸ್ವಯಂಪ್ರೇರಿತರಾಗಿ ಸಾಂ àಕ ಕ್ವಾರೆಂಟೈನ್‌ಗೆ ಒಪ್ಪಿಕೊಂಡರೇ ತಾಲೂಕು ಆಡಳಿತ ದಿಂದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ಮಾತನಾಡಿ, ನಗರ ಮತ್ತು ತಾಲೂಕಿನಲ್ಲಿ ಪಾಸಿ ಟಿವ್‌ ಪ್ರಕರಣಗಳು ಹೆಚ್ಚುತ್ತಿವೆ, ಸಾರ್ವಜನಿ ಕರು ಹಾಗೂ ಅಕ್ಕ ಪಕ್ಕದ ಮನೆಯವರು ಜ್ವರ, ಶೀತ, ಕೆಮ್ಮು ಇತ್ಯಾದಿ ಲಕ್ಷಣಗಳು ಕಂಡು ಬಂದ ವ್ಯಕ್ತಿಗಳು ಹಾಗೂ ಬೆಂಗಳೂರು ಸೇರಿದಂತೆ ಇನ್ನಿತರ ಕಡೆಗಳಿಗೆ ನಗರ ಮತ್ತು ತಾಲೂಕಿನ ವಿವಿಧ ಗ್ರಾಮಗಳಿಗೆ ಬರುತ್ತಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದರೆ ಮಾತ್ರ ಸೋಂಕು ನಿಯಂತ್ರಿಸಲು ಸಾಧ್ಯ ಎಂದು ಹೇಳಿದರು. ತಾಪಂ ಇಒ ನಟರಾಜ್‌, ತಾ.

ಆರೋಗ್ಯಾಧಿಕಾರಿ ಡಾ.ನಾಗಪ್ಪ, ಸರ್ಕಾರಿ ಜೆ.ಸಿ.ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕರಿಯಪ್ಪ, ಗ್ರಾಮಾಂತರ ಸರ್ಕಲ್‌ ಇನ್ಸ್ ಪೆಕ್ಟರ್‌ ವಸಂತಕುಮಾರ್‌, ನಗರದ ಸರ್ಕಲ್‌ ಇನ್ಸ್‌ಪೆಕ್ಟರ್‌ ಚಂದ್ರಶೇಖರಯ್ಯ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next