Advertisement

ರಾತ್ರಿ 12ರ ವರೆಗೆ ಪ್ರದರ್ಶನಕ್ಕೆ ಅವಕಾಶ; ಯಕ್ಷಗಾನ ಮೇಳದ ಯಜಮಾನರಿಂದ ಜಿಲ್ಲಾಧಿಕಾರಿಗೆ ಮನವಿ

12:48 AM Dec 29, 2021 | Team Udayavani |

ಮಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ಜಾರಿಯಾಗಿರುವ ರಾತ್ರಿ ಕರ್ಫ್ಯೂವಿನಿಂದ ಕರಾವಳಿಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ತೊಂದರೆಯಾಗುತ್ತಿದ್ದು, ಹೀಗಾಗಿ ರಾತ್ರಿ 12ರ ವರೆಗೆ ಯಕ್ಷಗಾನ ನಡೆಸಲು ಅನುಮತಿ ನೀಡಬೇಕು ಎಂದು ವಿವಿಧ ಮೇಳಗಳ ಯಜಮಾನರು ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ನೇತೃತ್ವದಲ್ಲಿ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

Advertisement

ಸರಕಾರ ಮತ್ತೆ ಡಿ.28ರಿಂದ ರಾತ್ರಿ ಕರ್ಫ್ಯೂ ಹೇರಿಕೆ ಮಾಡಿದೆ. ಇದರಿಂದಾಗಿ ರಾತ್ರಿ ಯಕ್ಷಗಾನ ಪ್ರದರ್ಶನಗಳನ್ನು ನಡೆಸಲು ಸಾಧ್ಯವಿಲ್ಲದಾಗಿದೆ. ಬುಕ್ಕಿಂಗ್‌ ಆದ ಪ್ರದರ್ಶನಗಳು ರದ್ದುಗೊಳ್ಳುತ್ತಿವೆ. 30 ಕಲಾತಂಡಗಳ 900ಕ್ಕೂ ಅಧಿಕ ಕಲಾವಿದರಿಗೆ ಸಂಭಾವನೆ ಇಲ್ಲದಾಗಿದೆ ಎಂದರು.

ಬಳಿಕ ಸುದ್ದಿಗಾರರ ಜತೆಗೆ ಮಾತ ನಾಡಿದ ಹಿರಿಯ ಕಲಾವಿದ ಸರಪಾಡಿ ಅಶೋಕ್‌ ಶೆಟ್ಟಿ ಅವರು, ಕಲಾವಿದರ ಮನವಿಗೆ ಜಿಲ್ಲಾಧಿಕಾರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ನಿಟ್ಟಿನಲ್ಲಿ ಸಂಸದರು, ಶಾಸಕರು ಪ್ರಯತ್ನಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ನೀಟ್‌ ಪಿಜಿ 2021ರ ಕೌನ್ಸೆಲಿಂಗ್‌ ವಿಳಂಬ : ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದ ವೈದ್ಯರು

ನಿಯೋಗದಲ್ಲಿ ಸಸಿಹಿತ್ಲು ಮೇಳದ ವ್ಯವಸ್ಥಾಪಕ ರಾಜೇಶ್‌ ಗುಜರನ್‌, ಮಂಗಳಾದೇವಿ ಮೇಳದ ವ್ಯವಸ್ಥಾಪಕ ಎಸ್‌.ಎ ವರ್ಕಾಡಿ, ಸಂಚಾಲಕ ಕಡಬ ದಿನೇಶ್‌ ರೈ, ಬಪ್ಪನಾಡು ಮೇಳದ ವ್ಯವಸ್ಥಾಪಕ ವಿನೋದ್‌ ಕುಮಾರ್‌ ಬಜ್ಪೆ, ಸುಂಕದಕಟ್ಟೆ ಮೇಳದ ಪ್ರಬಂದಕ ರಮೇಶ್‌ ಕುಲಶೇಖರ, ನಾಗಶಕ್ತಿ ಮೇಳದ ವ್ಯವಸ್ಥಾಪಕ ಸಂತೋಷ್‌ ಶೆಟ್ಟಿ ಕಡ್ತಲ, ಕಲಾವಿದರಾದ ಎಂ.ಕೆ. ರಮೇಶ್‌ ಆಚಾರ್ಯ, ಮಿಜಾರು ತಿಮ್ಮಪ್ಪ, ಶ್ರೀನಿವಾಸ ಸಾಲ್ಯಾನ್‌ ಬೋಂದೆಲ್‌, ಪ್ರದೀಪ್‌ ಕೊಡ್ಯಡ್ಕ, ಕೊಡಪದವು ದಿನೇಶ್‌ ಶೆಟ್ಟಿಗಾರ್‌, ಸಂತೋಷ್‌ ಕರಂಬಾರ್‌, ಚಂದ್ರಶೇಖರ ಗುರುವಾಯನಕೆರೆ, ಸಂದೇಶ್‌ ಬಡಗಬೆಳ್ಳೂರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಉಡುಪಿಯಲ್ಲೂ ಮನವಿ
ಕುಂದಾಪುರ: ಒಮಿಕ್ರಾನ್‌ ಹರಡುವಿಕೆ ಮುಂಜಾಗ್ರತೆಗಾಗಿ ಸರಕಾರ ತೆಗೆದುಕೊಳ್ಳಬಹುದಾದ ನಿಯಮಗಳು ಕಲಾವಿದರಿಗೆ, ಕಲಾ ಚಟುವಟಿಕೆಗಳಿಗೆ ತೊಡಕಾಗ ದಂತಿರಲಿ ಎಂದು ಕಲಾವಿದರು, ಸಂಘಟಕರು, ಯಕ್ಷಗಾನ ಮೇಳಗಳ ಯಜಮಾನರು, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕರು ಹಾಗೂ ಸಂಬಂಧಪಟ್ಟ ವ್ಯಾಪಾರ ಸಂಸ್ಥೆಯವರು ಕಲಾಕ್ಷೇತ್ರ ಕುಂದಾಪುರ ಸಂಸ್ಥೆ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಅವರಿಗೆ ಸಾಮೂಹಿಕ ಮನವಿ ನೀಡಿದರು.

ಈ ಸಂಬಂಧ ಅಗತ್ಯ ಗಮನ ಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next