Advertisement

2ನೇ ಸುತ್ತಿನ ಲಸಿಕೆ ಪಡೆಯಲು ಅವಕಾಶ

08:52 PM May 20, 2021 | Team Udayavani |

ಕನಕಪುರ: ತಾಲೂಕಿನ ಸಾತನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆಒಂದನೇ ಮತ್ತು ಎರಡನೇ ಸುತ್ತಿನಕೊರೊನಾ ವ್ಯಾಕ್ಸಿನ್‌ ನೀಡಲಾಗುತ್ತಿದೆ ಎಂದು ಸಾತನೂರು ಆರೋಗ್ಯಾಧಿಕಾರಿಪುಟ್ಟೇಗೌಡ ತಿಳಿಸಿದರು.

Advertisement

ಮಾಧ್ಯಮಕ್ಕೆ ಮಾಹಿತಿ ನೀಡಿ ಮಾತನಾಡಿದ ಅವರು, ಸಾತನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿನನಿತ್ಯ 80 ಜನರಿಗೆ ಲಸಿಕೆ ನೀಡಲುಅವಕಾಶವಿದೆ ಈಗಾಗಲೇ 45 ವರ್ಷಮೆಲ್ಪಟ್ಟವರಿಗೆ ಒಂದನೇ ಸುತ್ತಿನ ಲಸಿಕಾವಿತರಣೆ ಮುಗಿಸಿ ಎರಡನೇ ಸುತ್ತಿನ ಲಸಿಕಾ ವಿತರಣೆ ಮಾಡಲಾಗುತ್ತಿದೆ.

ಆರಂಭದಲ್ಲಿ ಲಸಿಕೆ ಪಡೆಯುವುದರಿಂದ ಅಡ್ಡಪರಿಣಾಮಗಳಾಗುತ್ತವೆ ಎಂಬಸುಳ್ಳು ವದಂತಿಯಿಂದ ಕೆಲವರುಮೊದಲ ಸುತ್ತಿನ ಲಸಿಕೆಯನ್ನೆ ಹಾಕಿಸಿಕೊಂಡಿಲ್ಲ ಆದರೆ ಎರಡು ಸುತ್ತಿನಲಸಿಕೆ ಪಡೆಯುವುದರಿಂದ ಸೋಂಕಿನ ವಿರುದ್ಧ ಗೆಲ್ಲಬಹುದು ಎಂಬುದು ಎಲ್ಲರಿಗೂ ಮನವರಿಕೆ ಯಾಗಿದ್ದು ಎಲ್ಲರು ಲಸಿಕೆ ಪಡೆಯಲುಮುಂದಾಗಿದ್ದಾರೆ ಎಂದರು. ಡಾ. ಅಂಜುಮ್‌ ಕೌಸರ್‌, ಡಾ.ಶಶಿಕಲಾ, ಹಿರಿಯ ಆರೋಗ್ಯಸಹಾಯಕರಾದ ನಾಗರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next