Advertisement

ಎರೆಹುಳು ತೊಟ್ಟಿ ಶಾಲೆಗಳಲ್ಲಿ ಕೈತೋಟ ನಿರ್ಮಾಣಕ್ಕೆ ಅವಕಾಶ

03:06 PM Sep 24, 2021 | Team Udayavani |

ಹುಣಸೂರು: ತಾಲೂಕಿನಲ್ಲಿ ಉದ್ಯೋಗ ಖಾತ್ರೆಯಡಿ ರೈತ ಬಂಧು ಕಾರ್ಯಕ್ರಮದ ಮೂಲಕ 2 ತಿಂಗಳ ಕಾಲಮಿತಿ ನಿಗದಿಗೊಳಿಸಿ ರೈತರಿಗೆ ಅಗತ್ಯವಿರುವ ಎರೆಹುಳು ಗೊಬ್ಬರತೊಟ್ಟಿ ನಿರ್ಮಾಣ ಯೋಜನೆ ಸಾಕಾರಗೊಳ್ಳುತ್ತಿದೆ. ಮತ್ತೊಂದೆಡೆ ಶಾಲಾ-ಅಂಗನವಾಡಿಗಳಲ್ಲಿ ಪೌಷ್ಟಿಕ ಕೈತೋಟಕ್ಕೂ ಒತ್ತು ನೀಡಲಾಗುತ್ತಿದೆ.

Advertisement

ಸುವರ್ಣ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಗ್ರಾಮೀಣಾಭಿವೃದ್ಧಿ ಇಲಾಖೆಯು ರೈತ ಬಂಧು ಯೋಜನೆ ಹಾಗೂ ನರೇಗಾ ನೆರವಿನೊಂದಿಗೆ ಅಕ್ಟೋಬರ್‌ -15ರವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 25 ಎರೆ ಹುಳು ಗೊಬ್ಬರತಯಾರಿಕೆ ತೊಟ್ಟಿ ನಿರ್ಮಿಸುವ ಗುರಿ ನೀಡಲಾಗಿದ್ದು, ತಾಲೂಕಿನಲ್ಲಿ ಈಗಾಗಲೇ 39 ರೈತರು ಎರೆಹುಳು ಗೊಬ್ಬರ ತೊಟ್ಟಿ ನಿರ್ಮಿಸಿಕೊಂಡಿದ್ದಾರೆ.

ಗ್ರಾಪಂಗೆ 25 ಎರೆಹುಳು ತೊಟ್ಟಿ: ಎರೆಹುಳು ಗೊಬ್ಬರವನ್ನು ರೈತನ ಮಿತ್ರ-ಕಪ್ಪು ಬಂಗಾರ ಎಂದೇ ಪರಿಗಣಿಸಿದ್ದು, ಈ ಗೊಬ್ಬರ ಬಳಕೆಯಿಂದ ಬೆಳೆಗಳಿಗೆ ಅಗತ್ಯ ಪೋಷಕಾಂಶ ಪೂರೈಕೆಯಾಗಲಿದೆ. ಜೊತೆಗೆ ಮಣ್ಣಿನ ಫಲವತ್ತತೆ ಮತ್ತು ಗುಣಮಟ್ಟವು ಹೆಚ್ಚಲಿದೆ. ಯಾರು ಅರ್ಜಿ ಸಲ್ಲಿಸಬಹುದು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ-ಅತಿಸಣ್ಣ ರೈತರು, ಅಲೆಮಾರಿಗಳು, ಬಿಪಿಎಲ್‌, ವಿಕಲಚೇತನ ಪ್ರಧಾನ ಹಾಗೂ ಸ್ತ್ರೀ ಪ್ರಧಾನ ಕುಟುಂಬಗಳು, ಭೂ ಸುಧಾರಣಾ ಫಲಾನುಭವಿಗಳು, ಇಂದಿರಾ ಆವಾಸ್‌ ಯೋಜನೆಯ ಫಲಾನುಭವಿಗಳು, ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು.

ಇದನ್ನೂ ಓದಿ:ಫೋಕ್ಸ್‌ವ್ಯಾಗನ್‌ ಟೈಗುನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಪೌಷ್ಟಿಕ ಕೈತೋಟ ಅಭಿಯಾನ: ಶಾಲೆ-ಅಂಗನ ವಾಡಿ ಮಕ್ಕಳ ಅಪೌಷ್ಟಿಕತೆ ನಿವಾರಿಸುವ ಹಾಗೂ ಮಕ್ಕಳಲ್ಲಿ ತರಕಾರಿ ಮತ್ತು ಔಷಧ ಸಸ್ಯಗಳ ಕುರಿತು ಪಠ್ಯೇತರ ಚಟುವಟಿಕೆಗಳ ಮೂಲಕ ಪ್ರಾಯೋಗಿಕ ತರಬೇತಿಗೆ ಉತ್ತೇಜಿಸಲಾಗುತ್ತಿದೆ. ಸೂಕ್ಷ್ಮ ಪೋಷ ಕಾಂಶ ಗಳನ್ನು ಹೇರಳವಾಗಿ ಹೊಂದಿರುವಂತಹ ಹಣ್ಣು ಮತ್ತು ತರಕಾರಿಗಳು, ಖನಿಜಾಂಶ, ಜೀವಸತ್ವ, ನಾರಿನಾಂಶ ಮಾತ್ರವಲ್ಲದೇ ಅಡುಗೆಗೆ ಬೇಕಾದ ಪೌಷ್ಟಿಕಾಂಶಯುಕ್ತ ತಾಜಾ ತರಕಾರಿ ಮತ್ತು ಸೊಪ್ಪುಗಳನ್ನು ಶಾಲಾ ಆವರಣಗಳಲ್ಲಿ ಸ್ಥಳಾವಕಾಶಕ್ಕೆ ಅನುಗುಣವಾಗಿ ಬೆಳೆದುಕೊಳ್ಳಲು ಮತ್ತು ಸೋಕ್‌ಪಿಟ್‌ ನಿರ್ಮಿಸಿ ಕೊಂಡಿರುವವರು ವೈಯಕ್ತಿಕವಾಗಿ ಹಾಗೂ ಸಮು ದಾಯಕ ವಿಭಾಗದಲ್ಲೂ ಅವಕಾಶ ಕಲ್ಪಿಸ ಲಾಗಿದೆ. ಅದರಂತೆ ತಲಾ 3 ಸಾವಿರ ವೆಚ್ಚದಲ್ಲಿ ಸರ್ಕಾರಿ ಶಾಲೆ, ಕಾಲೇಜು, ಆಸ್ಪತ್ರೆ, ವಸತಿ ನಿಲಯಗಳ ಆವರಣದಲ್ಲಿ ಪೌಷ್ಟಿಕ ಕೈತೋಟ ಅಭಿಯಾನ ಹಮ್ಮಿಕೊಂಡಿದ್ದು, ಇದು ಮಕ್ಕಳಲ್ಲಿ ಕೈತೋಟ-ಕೃಷಿ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನೆರವಾಗಲಿದೆ.

Advertisement

ಸೌಲಭ್ಯ ಪಡೆಯಲು ಕಾಯಕ ಮಿತ್ರ ಆ್ಯಪ್‌ ಬಳಸಿ
ಎರೆಹುಳು ಗೊಬ್ಬರ ತೊಟ್ಟಿ ನಿರ್ಮಿಸಿಕೊಳ್ಳಲು 18 ಅಡಿ ಉದ್ದ, 9 ಅಡಿ ಅಗಲ ಹಾಗೂ 4 ಅಡಿ ಎತ್ತರಕ್ಕೆ 27 ಸಾವಿರ ರೂ. ನೀಡಲಾಗುವುದು. 12 ಅಡಿ ಉದ್ದ, 9 ಅಡಿ ಅಗಲ ಹಾಗೂ 4ಅಡಿ ಎತ್ತರಕ್ಕೆ 21 ಸಾವಿರ ರೂ. ಸಹಾಯಧನ ಸಿಗಲಿದೆ. ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ ಮಾಡಿಕೊಳ್ಳಲು ಬಯಸುವ ಆಸಕ್ತ ರೈತರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯ್ತಿ¿‌ಲ್ಲಿ ಹಾಗೂ ಕಾಯಕ ಮಿತ್ರ ಮೊಬೈಲ್‌ ಆ್ಯಪ್‌ ಮೂಲಕ ಅರ್ಜಿ ಸಲ್ಲಿಸಬಹುದು

ಉದ್ಯೋಗ ಖಾತ್ರಿಯಡಿ ಎರೆಹುಳು ಗೊಬ್ಬರದ ತೊಟ್ಟಿ ನಿರ್ಮಿಸಿ ಕೊಂಡಲ್ಲಿ ಕೂಲಿ ಸಿಕ್ಕಂತಾಗಲಿದೆ. ಜೊತೆಗೆ ತಮ್ಮ ಜಮೀನಿಗೆ ರಾಸಾಯನಿಕ ಮುಕ್ತ ಗೊಬ್ಬರ ತಯಾರಿಕೆಗೆ ಸಹಕಾರಿ ಯಾಗಿದೆ. ಮತ್ತೂಂದೆಡೆ ಶಾಲೆ-ಅಂಗನ ವಾಡಿ, ವಸತಿ ನಿಲಯಗಳಲ್ಲಿ ಪೌಷ್ಟಿಕ ಕೈ ತೋಟ ಬೆಳೆಸುವುದರಿಂದ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ದೊರೆಯಲಿದೆ. ಜತೆಗೆ ಕೃಷಿ ಬಗ್ಗೆ ಆಸಕ್ತಿ ಬೆಳೆಯಲಿದೆ. ಅಕ್ಟೋಬರ್‌-15ರ ವರೆಗೆ ಈ ಯೋಜನೆ ಬಳಕೆಗೆ ಅವಕಾಶಕಲ್ಪಿಸಲಾಗಿದೆ.
– ಎಚ್‌.ಡಿ.ಗಿರೀಶ್‌, ತಾಪಂ ಇಒ

– ಸಂಪತ್‌ ಕುಮಾರ್‌

 

Advertisement

Udayavani is now on Telegram. Click here to join our channel and stay updated with the latest news.

Next