Advertisement

ಧೈರ್ಯವಂತರಿಗೆ ಅಗ್ನಿಶಾಮಕ ದಳದಲ್ಲಿ ಅವಕಾಶ

10:22 PM Aug 06, 2019 | mahesh |

ಎಲ್ಲೇ ಏನೇ ಬೆಂಕಿ ಅವಘಡ ಸಂಭವಿಸಿದಾಗ ಅಲ್ಲಿ ಪ್ರತ್ಯಕ್ಷರಾಗುವವರು ಅಗ್ನಿಶಾಮಕ ದಳದವರು. ಬೆಂಕಿಯನ್ನು ನಂದಿಸಿ, ಆ ಅವಘಡದಲ್ಲಿ ಸಿಲುಕಿ ಹಾಕಿಕೊಂಡವರನ್ನು ರಕ್ಷಿಸುವುದು ಇವರ ಕರ್ತವ್ಯ. ಅಗ್ನಿಶಾಮಕದಳದಲ್ಲಿ ದುಡಿಯುವುದು ಸುಲಭದ ಕೆಲಸವಲ್ಲ. ಅದು ಬೆಂಕಿಯೊಂದಿಗಿನ ಸರಸ. ಕೊಂಚ ಎಚ್ಚರ ತಪ್ಪಿದರೂ ಅಲ್ಲಿ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚು. ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುವವರು ಅತ್ಯಂತ ಧೈರ್ಯಶಾಲಿ ಮತ್ತು ಸವಾಲುಗಳನ್ನು ಎದುರಿಸಲು ಸಿದ್ಧವಾಗಿರಬೇಕು.

Advertisement

ಜಾಗರೂಕತೆ ಮತ್ತು ಸಾಕಷ್ಟು ಬದ್ಧತೆಯ ಅಗತ್ಯ ಈ ವೃತ್ತಿಯಲ್ಲಿದೆ. ಇದು ಅಪಾಯಕಾರಿ ಸನ್ನಿವೇಶಗಳಿಂದ ಜನರನ್ನು ರಕ್ಷಿಸುವುದು ಜವಾಬ್ದಾರಿಯತ ಕೆಲಸ.

ಅಗತ್ಯವಿರುವ ಕೌಶಲಗಳು:
ಸಂವಹನ ಕೌಶಲಗಳು: ಅಗ್ನಿಶಾಮಕ ದಳದವರು ಬಿಕ್ಕಟ್ಟಿನ ಸಂದರ್ಭದಲ್ಲಿ ಸಂದರ್ಭಗಳನ್ನು ಸಹ ಅಗ್ನಿಶಾಮಕ ದಳದವರಿಗೆ ಮತ್ತು ತುರ್ತು ಪ್ರತಿಕ್ರಿಯೆ ತಂಡಗಳಿಗೆ ಸಂವಹನ ಮಾಡಲು ಸಮರ್ಥರಾಗಿರಬೇಕು

ಧೈರ್ಯ
ಅಗ್ನಿಶಾಮಕ ಹೆಸರೇ ಹೇಳುವಂತೆ ಬೆಂಕಿ ಜತೆಗೆ ಅವರು ಸೆಣಸಾಡುವವರು. ಧೈರ್ಯವಂತರಿಗೆ ಮಾತ್ರ ಈ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು
ನಿರ್ಧಾರ ತೆಗೆದುಕೊಳ್ಳುವ ಕೌಶಲಗಳು: ತುರ್ತು ಸಂದರ್ಭದಲ್ಲಿ ತ್ವರಿತ ಮತ್ತು ತೀಕ್ಷ್ಣವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಬುದ್ಧಿವಂತರಾಗಿರಬೇಕು. ಒತ್ತಡದಲ್ಲಿ ಉದಾತ್ತ ತೀರ್ಪುಗಳನ್ನು ನೀಡುವ ಸಾಮರ್ಥ್ಯ ಇನ್ನೊಬ್ಬರ ಜೀವವನ್ನು ಉಳಿಸಬಹುದು

ದೈಹಿಕ ಸಾಮರ್ಥ್ಯ
ಅಗ್ನಿ ಶಾಮಕದಲ್ಲಿ ಕೆಲಸ ಮಾಡುವವರ ಹೆಚ್ಚಿನ ದೈಹಿಕ ಸಾಮರ್ಥ್ಯವನ್ನು ಹೊಂದಿರಬೇಕು. ಭಾರವಾದ ಸಾಮಗ್ರಿಗಳನ್ನು ಸಾಗಿಸಲು ಅಥವಾ ಅಪಾಯಕಾರಿ ಸಂದರ್ಭದಲ್ಲಿ ಜನರನ್ನು ರಕ್ಷಿಸಲು ಅಧಿಕ ದೈಹಿಕ ಸಾಮರ್ಥ್ಯ ಅಗತ್ಯವಿರುತ್ತದೆ.
ಅಗ್ನಿಶಾಮಕದಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಬೇಕೆಂಬವರಿಗೆ ಇದಕ್ಕೆ ಸಂಬಂಧಿಸಿದ ಪದವಿ ಅಥವಾ ಡಿಪ್ಲೊಮಾ ಕೋರ್ಸ್‌ಗಳಿಗೆ ಸೇರಿಕೊಳ್ಳಬಹುದು.

Advertisement

ಇತ್ತೀಚಿನ ದಿನಗಳಲ್ಲಿ ಬೆಂಕಿ ಅನಾಹುತಗಳು ಹೆಚ್ಚಾಗಿ ಸಂಭವಿಸುತ್ತಿದ್ದು, 24×4 ರಂತೆ ಅಗ್ನಿಶಾಮಕದಳದ ಸಿಬಂದಿಗಳು ಕೆಲಸ ಮಾಡುತ್ತಾರೆ. ಸರಕಾರಿ ಮತ್ತು ಖಾಸಗಿ ಎರಡೂ ರಂಗಗಳಲ್ಲೂ ಕೆಲಸಗಳಿವೆ. ಅನೇಕ ಸೌಲಭ್ಯ ಜತೆ ಉತ್ತಮ ಸಂಬಳವೂ ಈ ಕ್ಷೇತ್ರದಲ್ಲಿ ಲಭಿಸುತ್ತದೆ.

ಅಗ್ನಿಶಾಮಕದಳ ತರಬೇತಿ ಸಂಸ್ಥೆಗಳು
·  ಕೌನ್ಸಿಲ್‌ ಆಫ್ ಎಜುಕೇಶನ್‌ ಆ್ಯಂಡ್‌ ಡೆವಲ್‌ಪ್‌ಮೆಂಟ್‌ ಪ್ರೋಗ್ರಾಮ್ಸ್‌ (ಸಿಇಡಿಪಿ ಸ್ಕಿಲ್‌ ಇನ್ಸ್ಟಿಟ್ಯೂಟ್‌), ಮುಂಬಯಿ
·  ನ್ಯಾಶ‌ನಲ್‌ ಅಕಾಡೆಮಿ ಆಫ್ ಫೈರ್‌ ಆ್ಯಂಡ್‌ ಸೇಫ್ಟಿ ಎಂಜಿನಿಯರಿಂಗ್‌ (ಎನ್‌ಎಎಫ್.ಎಸ್‌), ನಾಗ್ಪುರ
·  ಇನ್ಸ್ಟಿಟ್ಯೂಟ್‌ ಆಫ್ ಪೈರ್‌ ಸೇಫ್ಟಿ ಮ್ಯಾನೇಜ್‌ಮೆಂಟ್‌ ಡೆಹ್ರಾಡೂನ್‌
·  ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ಫೈಯರ್‌ ಎಂಜಿನಿಯರಿಂಗ್‌ ಮತ್ತು ಸುರಕ್ಷತಾ ನಿರ್ವಹಣೆ, ಜೈಪುರ

ಈ ಕ್ಷೇತ್ರದ ಹುದ್ದೆಗಳು
·  ಅಗ್ನಿಶಾಮಕ ಸುರಕ್ಷತಾ ಅಧಿಕಾರಿ
·  ಅಗ್ನಿಶಾಮಕ ಸುರಕ್ಷತಾ ಬೋಧಕ
·  ಅಗ್ನಿಶಾಮಕ ಸುರಕ್ಷತಾ ಎಂಜಿನಿಯರ್‌
·  ಫೈರ್‌ ಅರ್ಲಾಮ್‌ ತಂತ್ರಜ್ಞ
·  ಅಗ್ನಿಶಾಮಕ ತಂತ್ರಜ್ಞ

-  ಧನ್ಯಶ್ರೀ ಬೋಳಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next