Advertisement

“ಸೈನ್ಯದಲ್ಲಿ ಯುವತಿಯರಿಗೆ ಸಾಕಷ್ಟು ಅವಕಾಶ’

11:04 PM Jul 13, 2019 | Sriram |

ಕಟೀಲು: ಭೂ ಸೇನೆ, ನೌಕಾ ಸೇನೆ ಹಾಗೂ ವಾಯು ಸೇನೆಗಳಲ್ಲಿ ಯುವತಿಯರಿಗೆ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ದೇಶ ಸೇವೆ ಸಲ್ಲಿಸಲು ಅತ್ಯುತ್ತಮ ವೇದಿಕೆಯಾಗಿದೆ ಎಂದು ಭಾರತೀಯ ನೌಕಾಪಡೆಯ ಕರ್ನಾಟಕದ ಮೊದಲ ಮಹಿಳಾ ಕಮಾಂಡರ್‌, ಕಾರವಾರ ಸೈನಿಕ ಕಲ್ಯಾಣ ಇಲಾಖೆಯ ಡೆಪ್ಯುಟಿ ಡೈರೆಕ್ಟರ್‌ ಕಮಾಂಡರ್‌ ಇಂದು ಪ್ರಭಾ ವಿ. ಹೇಳಿದರು.

Advertisement

ಜು. 13 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ಸಂಘ, ಮಾನವಿಕ ಸಂಘಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೈನ್ಯದಲ್ಲಿ ಮಹಿಳೆಯರು ಕುರಿತಾಗಿ ಅವರು ಉಪನ್ಯಾಸ ನೀಡಿದರು.

ಸೈನ್ಯದಲ್ಲಿ ಹಿಂದೆ ಮಹಿಳೆಯರ ಸಂಖ್ಯೆ ತೀರಾ ಕಡಿಮೆಯಾಗಿತ್ತು. ಈಗ ಅವರ ಸಾಧನೆ, ಪ್ರತಿಭೆಗಳನ್ನು ಗಮನಿಸಿ ಶಾಶ್ವತ ಸೇವೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಸೇನೆಯ ಯುದ್ಧ ವಿಮಾನಗಳಲ್ಲಿ ಪೈಲೆಟ್‌ಗಳಾಗಿಯೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಗ್ರಾಮೀಣದ ಯುವತಿಯರೂ ಸೇನೆಯ ನಾನಾ ವಿಭಾಗಗಳಲ್ಲಿ ಸೇವೆ ಸಲ್ಲಿಸಲು ಮುಂದಾಗಬೇಕು. ಯುವಕರಿಗೂ ಸೇನೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಾಧನೆ, ದೇಶ ಸೇವೆ ಮಾಡಲು ಸಾಕಷ್ಟು ಅವಕಾಶಗಳಿದ್ದು, ವಿದ್ಯಾರ್ಥಿ ಜೀವನದಲ್ಲೇ ಈ ಬಗ್ಗೆ ಆಸಕ್ತರಾಗಬೇಕು ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ| ಕೃಷ್ಣ ಸ್ವಾಗತಿಸಿದರು. ಉಪನ್ಯಾಸಕಿ ಸುಶ್ಮೀತಾ ಸ್ವಾಗತಿಸಿದರು. ನಿವೇದಿತಾ ವಂದಿಸಿದರು. ಸನ್ನಿಧಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next