Advertisement
ಮನೆಯವರ ಭೇಟಿಗೆ ಹಂಬಲಸೋಂಕುಪೀಡಿತರ ಆಪ್ತಸಮಾಲೋಚನೆ ವೇಳೆ ಶೇ. 50 ಮಂದಿ ಮನೆಯವರ ಭೇಟಿಗೆ ಹಂಬಲಿಸುವುದು ಕಂಡುಬಂದಿದೆ. ಹೀಗಾಗಿ ರೋಗಿಗಳಿಗೆ ಮಾನಸಿಕ ಬಲ ತುಂಬುವುದಕ್ಕಾಗಿ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡುವಂತೆ ಸರಕಾರಕ್ಕೆ ಮನವಿ ಪತ್ರ ಬರೆಯಲಾಗಿತ್ತು ಎಂದು ಆರೋಗ್ಯ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗದ ಉಪ ನಿರ್ದೇಶಕಿ ಡಾ| ರಜನಿ ಹೇಳಿದ್ದಾರೆ.
– ಸೋಂಕುಪೀಡಿತ ಆಸ್ಪತ್ರೆಗೆ ದಾಖಲಾಗಿ ಸುಮಾರು 15 ದಿನ ಚಿಕಿತ್ಸೆ ಪಡೆಯಬೇಕಾಗುತ್ತದೆ.
– ನರ್ಸ್‌ಗಳು ಪರೀಕ್ಷೆ, ಮಾತ್ರೆ, ಚುಚ್ಚುಮದ್ದು ನೀಡುವುದು, ಊಟ -ಉಪಾಹಾರ ಒದಗಿಸುತ್ತಾರೆ. ವೈದ್ಯರು ರೌಂಡ್ಸ್‌ಗೆ ಬಂದು ಹೋಗುತ್ತಾರೆ. ಬೇರ್ಯಾರೂ ಇರುವುದಿಲ್ಲ.
– ಇದರಿಂದ ಸೋಂಕುಪೀಡಿತನನ್ನು ಬಂಧಿಸಿ ದಂತಾಗು ತ್ತದೆ. ಒಂಟಿತನ ಕಾಡಲಾರಂಭಿಸುತ್ತದೆ.
– ಆಸ್ಪತ್ರೆಯ ವಾತಾವರಣ, ಒಂಟಿತನಗಳಿಂದ ಮಾನಸಿಕವಾಗಿ ಕುಗ್ಗುತ್ತಾರೆ. ಭಯ ಆವರಿಸುತ್ತದೆ. ಪ್ರಮುಖ ಶಿಫಾರಸುಗಳು
– ನಿತ್ಯ ಒಬ್ಬರು ಅಥವಾ ಇಬ್ಬರಿಗೆ ಒಮ್ಮೆ ಭೇಟಿಯ ಅವಕಾಶ.
– ಕುಟುಂಬಸ್ಥರು ಕಡ್ಡಾಯವಾಗಿ ಪಿಪಿಇ ಕಿಟ್ ಧರಿಸಬೇಕು.
– ಸ್ಥಿರ ಆರೋಗ್ಯ ಹೊಂದಿರುವ ಸೋಂಕುಪೀಡಿತರಿಗೆ ಮನೆ ಊಟ ನೀಡಬಹುದು.
Related Articles
– ಡಾ| ಪ್ರದೀಪ್ ಬಾನಂದೂರು, ನಿಮ್ಹಾ ನ್ಸ್‌ನ ತಜ್ಞರ ಸಮಿತಿ ಸದಸ್ಯ
Advertisement
ಜಯಪ್ರಕಾಶ್ ಬಿರಾದಾರ್