Advertisement

ತಿಂಗಳಾಂತ್ಯದಲ್ಲಿ ಕ್ರೀಡಾಪಟುಗಳಿಗೆ ಬಹಿರಂಗ ಅಭ್ಯಾಸಕ್ಕೆ ಅವಕಾಶ: ರಿಜಿಜು

03:35 PM May 11, 2020 | keerthan |

ನವದೆಹಲಿ: ಒಲಿಂಪಿಕ್ಸ್‌ ಸ್ಪರ್ಧೆಗೆ ತಯಾರಿ ನಡೆಸುತ್ತಿರುವ ದೇಶದ ಅಗ್ರ ಕ್ರೀಡಾಪಟುಗಳಿಗೆ ಈ ತಿಂಗಳಾಂತ್ಯದಲ್ಲಿ ಹೊರಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ಅನುವು ಮಾಡಿ ಕೊಡಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಭರವಸೆ ನೀಡಿದ್ದಾರೆ.

Advertisement

ಕೋವಿಡ್-19 ಹಿನ್ನೆಲೆಯಲ್ಲಿ ದೇಶಾದ್ಯಂತ ದಿಗ್ಬಂಧನವಿದ್ದು ಅಥ್ಲೀಟ್‌ಗಳ ಹೊರಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಅನುಮತಿ ಇರಲಿಲ್ಲ. ಇದೀಗ ಲಾಕ್‌ಡೌನ್‌ ಮೇ 17ರ ಬಳಿಕ ಅಂತ್ಯವಾಗಲಿದೆ , ಆನಂತರ ಕ್ರೀಡಾಪಟುಗಳಿಗೆ ಹೊರಗೆ ಅಭ್ಯಾಸ ನಡೆಸಲು ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಕೋವಿಡ್-19 ಕಾರಣದಿಂದ ವಿಶ್ವದಾದ್ಯಂತ ಕ್ರೀಡಾ ಚಟುವಟಿಕೆಗಳು ಸ್ಥಗಿತವಾಗಿದೆ. ಜಪಾನಿನ ಟೋಕ್ಯೋದಲ್ಲಿ ಜುಲೈನಲ್ಲಿ ನಡೆಯಬೇಕಿದ್ದ ಜಗತ್ತಿನ ಅತೀ ದೊಡ್ಡ ಕ್ರೀಡಾ ಕೂಟ ಒಲಿಂಪಿಕ್ಸ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next