Advertisement

ವಸತಿ ಯೋಜನೆಗಳ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶ

11:03 PM Mar 09, 2020 | Lakshmi GovindaRaj |

ವಿಧಾನಸಭೆ: ವಸತಿ ಯೋಜನೆಗಳಡಿ ಫ‌ಲಾನುಭವಿ ಗಳ ಆಯ್ಕೆ ವಿಚಾರದಲ್ಲಿ ಸಚಿವರು ಹಾಗೂ ಪ್ರತಿ ಪಕ್ಷಗಳ ಶಾಸಕರ ಆರೋಪ- ಪ್ರತ್ಯಾರೋಪಗಳ ಹಿನ್ನೆಲೆ ಯಲ್ಲಿ ವಸತಿ ಯೋಜನೆಗಳ ಕುರಿತಂತೆ ಅರ್ಧ ಗಂಟೆ ವಿಶೇಷ ಚರ್ಚೆಗೆ ಅವಕಾಶ ನೀಡಲಾಗುವುದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.

Advertisement

ಸೋಮವಾರ ಕಾಂಗ್ರೆಸ್‌ ವಿ.ಮುನಿಯಪ್ಪ ಅವರು ಚಿಕ್ಕಬಳ್ಳಾಪುರದಲ್ಲಿ ವಸತಿ ಯೋಜನೆಗಳಡಿ ಫ‌ಲಾನು ಭವಿಗಳ ಆಯ್ಕೆ ಸಮರ್ಪಕವಾಗಿ ನಡೆದಿಲ್ಲ ಎಂಬ ಕುರಿತ ಪ್ರಶ್ನೆ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಉತ್ತರ ನೀಡಿದ ವಿ. ಸೋಮಣ್ಣ, ಜಿಪಂ ಕಾರ್ಯಕಾರಿ ಅಧಿಕಾರಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪರಿಶೀಲನೆ ನಡೆಸಿ ಅರ್ಹ ಫ‌ಲಾನುಭವಿಗಳನ್ನು ಗುರುತಿಸುತ್ತಿದ್ದಾರೆ. ಅದರಂತೆ ಶಿಡ್ಲಘಟ್ಟದಲ್ಲಿ 3,598 ಮನೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದರು.

ಈ ಹಿಂದೆ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಹಿಂದೆ ಆಯ್ಕೆಯಾದ ಫ‌ಲಾನುಭವಿಗಳಿಗೆ ಮನೆ ನಿರ್ಮಾಣ ಕಾರ್ಯ ತಡೆ ಹಿಡಿಯಲಾಗಿತ್ತು. ಆದರೆ ಮುಖ್ಯಮಂತ್ರಿ ಅವರು ಅವುಗಳನ್ನು ತೆರವುಗೊಳಿಸಿ ಮಾ. 31ರೊಳಗೆ ಫ‌ಲಾನುಭವಿಗಳನ್ನು ಅಂತಿಮ ಗೊಳಿಸುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದರು. ಈ ಉತ್ತರಕ್ಕೆ ಸಮಾಧಾನಗೊಳ್ಳದ ರಮೇಶ್‌ ಕುಮಾರ್‌, ಫ‌ಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರ ಗ್ರಾಮ ಸಭೆಗಳಿಗಿದೆ. ಗ್ರಾಮ ಸಭೆ ಆಯ್ಕೆ ಮಾಡಿದ ಫ‌ಲಾನುಭವಿಗಳನ್ನು ಏಕೆ ಪರಿಗಣಿಸದಿರುವ ಬಗ್ಗೆ ಮಾಹಿತಿ ನೀಡಿ ಎಂದು ಒತ್ತಾಯಿಸಿದರು.

ಆಗ ವಿ.ಸೋಮಣ್ಣ, ಗ್ರಾಮ ಸಭೆ ಆಯ್ಕೆ ಮಾಡುವ ಫ‌ಲಾನುಭವಿಗಳ ಪಟ್ಟಿ ಅಂತಿಮವಲ್ಲ ಎಂದು ಪ್ರತಿಪಾದಿಸಿದರು. ಇದಕ್ಕೆ ಸಾಕಷ್ಟು ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಸ್ಪೀಕರ್‌, ಈ ವಾರದಲ್ಲೇ ವಸತಿ ಯೋಜನೆಗಳ ಬಗ್ಗೆ ಅರ್ಧ ತಾಸು ಚರ್ಚೆಗೆ ಅವಕಾಶ ನೀಡಲಾಗುವುದು ಎನ್ನುವ ಮೂಲಕ ಸಮಾಧಾನಪಡಿಸಿದರು.

ಪರಿಶೀಲಿಸಿ ಕ್ರಮ: ಅಧಿವೇಶನ ಮುಗಿಯುತ್ತಿದ್ದಂತೆ ಹೊಸದುರ್ಗ ತಾಲೂಕಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅರ್ಹರಿಗೆ ಸೂಕ್ತ ವಸತಿ ಸೌಲಭ್ಯ ಕಲ್ಪಿಸಲು ಪ್ರಯತ್ನಿ ಸಲಾಗುವುದು ಎಂದು ಸಚಿವ ವಿ.ಸೋಮಣ್ಣ ಭರವಸೆ ನೀಡಿದರು. ಬಿಜೆಪಿಯ ಗೂಳಿಹಟ್ಟಿ ಶೇಖರ್‌ ಪ್ರಶ್ನೆಗೆ ಸೋಮವಾರ ಉತ್ತರಿಸಿದ ಅವರು, ಹೊಸದುರ್ಗ ತಾಲ್ಲೂಕಿನಲ್ಲಿ ಕಳೆದ ವರ್ಷ ನೆರೆ ಹಾವಳಿಯಿಂದ 2 ಮನೆ ಸಂಪೂರ್ಣ ಹಾನಿಯಾಗಿದ್ದರೆ, 572 ಮನೆಗಳಿಗೆ ಅಲ್ಪಸ್ವಲ್ಪ ಹಾನಿಯಾಗಿತ್ತು. ಅದರಂತೆ ಪರಿಹಾರ ವಿತರಿಸಲಾಗುತ್ತಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next