Advertisement

ಕಂಪ್ಯೂಟರ್‌ ಶಿಕ್ಷಣದಿಂದ ಅವಕಾಶಗಳ ಆಗರ

10:14 PM Dec 17, 2019 | mahesh |

ಕಂಪ್ಯೂಟರ್‌ ಶಿಕ್ಷಣವೆಂಬುದು ಇತ್ತೀಚೆಗೆ ಎಲ್ಲ ಕ್ಷೇತ್ರಗಳಲ್ಲೂ ಅನಿವಾರ್ಯವಾಗಿ ಬೇಕಾಗಿದೆ. ಕಂಪ್ಯೂಟರ್‌ ಸಾಫ್ಟ್ ವೇರ್‌ಗಳೂ ಬಹಳಷ್ಟು ಅಭಿವೃದ್ಧಿ ಹೊಂದಿರುವುದರಿಂದ ಅವುಗಳಿಂದ ವಿದ್ಯಾರ್ಥಿಗಳಿಗೆ ಲಾಭವೂ ಇದೆ. ಇತ್ತೀಚೆಗೆ ಪ್ರಾಥಮಿಕ ಶಿಕ್ಷಣಗಳಲ್ಲಿಯೂ ಕಂಪ್ಯೂಟರ್‌ ಶಿಕ್ಷಣ ಇರುವುದರಿಂದ ಮಕ್ಕಳಿಗೆ ಮತ್ತಷ್ಟು ಸುಲಭವಾಗಿದೆ. ಸರಕಾರ ಅಂಗೀಕೃತ ಹಾಗೂ ಖಾಸಗೀ ಕ್ಷೇತ್ರದಲ್ಲಿ ಹಲವಾರು ಕಂಪ್ಯೂಟರ್‌ ಶಿಕ್ಷಣ ಸಂಸ್ಥೆಗಳಿವೆ. ಇವುಗಳ ಮೂಲಕ ವಿದ್ಯಾರ್ಥಿಗಳಿಗಾಗಿ ಹಲವಾರು ಕೋರ್ಸ್‌ ಗಳೂ ಲಭ್ಯವಾಗುತ್ತಿದ್ದು ಅದ ರಲ್ಲಿ ಕೆಲವನ್ನಾದರೂ ಪಡೆದಿರುವುದು ಉತ್ತಮ. ಉದ್ಯೋಗಕ್ಕಾಗಿ ಪ್ರಯ ತ್ನಿಸುವಾಗ ಇಂದು ಶಿಕ್ಷಣದ ಜತೆಗೆ ಇತರ ಜ್ಞಾನಗಳ ಬಗ್ಗೆಯೂ ಕೇಳುತ್ತಾರೆ. ಆದುದರಿಂದ ಕಂಪ್ಯೂಟರ್‌ ಶಿಕ್ಷಣ ಪಡೆದಿರುವುದು ಉತ್ತಮ. ಕಂಪ್ಯೂಟರ್‌ ಜ್ಞಾನ ಪಡೆಯುವುದರಿಂದ ಉಂಟಾಗುವ ಲಾಭಗಳ ಮಾಹಿತಿ ಇಲ್ಲಿದೆ.

Advertisement

ಬೇಸಿಕ್‌ ಕಂಪ್ಯೂಟರ್‌
ಯಾವುದೇ ಉದ್ಯೋಗಗಳಿಗೆ ತೆರಳಿದರೆ ಬೇಸಿಕ್‌ ಕಂಪ್ಯೂಟರ್‌ ತಿಳಿದಿದೆಯಾ ಎಂಬ ಪ್ರಶ್ನೆ ಕಾಡುವುದು ಸಹಜ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಬೇಸಿಕ್‌ ಕಂಪ್ಯೂಟರ್‌ ಜ್ಞಾನ ಇದ್ದವರಿಗೆ ಕೆಲಸ ಕಲಿಯಲು ತುಂಬಾ ಸುಲಭವಾಗುತ್ತದೆ.

ಆನ್‌ಲೈನ್‌ಪರೀಕ್ಷೆಗಳು
ಕಂಪ್ಯೂಟರ್‌ ಜ್ಞಾನವಿದ್ದವರಿಗೆ ಆನ್‌ಲೈನ್‌ ಪರೀಕ್ಷೆಗಳ ಬಗ್ಗೆ ಮಾಹಿತಿ ಅಧಿಕವಾಗಿರುತ್ತದೆ. ಆನ್‌ಲೈನ್‌ ಮುಖಾಂತರ ನಡೆಯುವ ಬ್ಯಾಕಿಂಗ್‌ ಪರೀಕ್ಷೆ, ಇತರ ಪರೀಕ್ಷೆಗಳಿಗೆ ತಯಾರಿ ನಡೆಸಲೂ ಇದು ಸಹಕಾರಿಯಾಗುತ್ತದೆ. ನಿಮಗೇ ಯಾವುದೇ ಒಂದು ಕೆಲಸದಲ್ಲಿ ಪ್ಯಾಷನ್‌ ಇದ್ದರೆ ಅದನ್ನು ಪೂರ್ತಿಗೊಳಿಸಲು ಕಂಪ್ಯೂಟರ್‌ ಕೋರ್ಸ್‌ಗಳು ಸಹಾಯ ಮಾಡುತ್ತವೆ. ನಿಮ್ಮ ಆಸಕ್ತಿಗೆ ಇದರಿಂದ ಹೊಸಹೊಸ ಆಲೋಚನೆಗಳು ಮೂಡುತ್ತವೆ.

ಕಂಪ್ಯೂಟರ್‌ ಕೋರ್ಸ್‌
ವಿದ್ಯಾಭ್ಯಾಸದ ಜತೆಗೆ ಇತರ ಕೋರ್ಸ್‌ ಗಳನ್ನು ಮಾಡಿಟ್ಟು ಕೊಂಡಿರುವುದು ಅತೀ ಅಗತ್ಯ. ಕಂಪ್ಯೂಟರ್‌ನಲ್ಲಿ ಎಡಿಟಿಂಗ್‌, ಫೋಟೋಶಾಪ್‌, ಗ್ರಾಫಿಕ್‌ ಡಿಸೈನಿಂಗ್‌, ಪಿಪಿಟಿ, ಟೈಪಿಂಗ್‌, ಇಲೆಸ್ಟ್ರೇಟರ್‌, ಪ್ರೋಗ್ರಾಂಮಿಂಗ್‌, ಡೇಟಾ ಎಂಟ್ರಿ ಮೊದಲಾದ ಕೋಸ್‌ಗಳನ್ನು ಮಾಡಬಹುದು. ಇದರಿಂದ ಉದ್ಯೋಗಕ್ಕೆ ಹೋಗುವಾಗ ಸುಲಭವಾಗುತ್ತದೆ. ಇತರ ಗುಂಪಿಗಿಂತ ನೀವು ಭಿನ್ನವಾಗಿ ಕಾಣಲು ಇದು ಸಹಾಯಕ. ಕೆಲವೊಂದು ಬಾರಿ ನಿಮ್ಮದೇ ಕೌಶಲವನ್ನು ವ್ಯಕ್ತಪಡಿಸಲೂ ಈ ಕೋರ್ಸ್‌ಗಳು ಸಹಕಾರಿ.

 ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Advertisement
Advertisement

Udayavani is now on Telegram. Click here to join our channel and stay updated with the latest news.

Next