Advertisement
ಸಾಮಂತ ರಾಜನಾಗಿದ್ದ ಟಿಪ್ಪು ಮತಾಂಧನಲ್ಲ, ಬ್ರಿಟಿಷರ ವಿರುದ್ಧ 4 ಯುದ್ಧ ಮಾಡಿದ ಟಿಪ್ಪು ಇತಿಹಾಸ ತಿಳಿದು ಮಾತನಾಡಿ ಎಂದು ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು. ಶಾಸಕ ತನ್ವೀರ್‌ಸೇಠ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ರಾಷ್ಟ್ರದ ಆಸ್ತಿಯಾದ ಟಿಪ್ಪುನನ್ನು ವಿನಾಕಾರಣ ಕಳ್ಳನ ಸ್ಥಾನದಲ್ಲಿ ನಿಲ್ಲಿಸಿರುವುದು ಸರಿಯಲ್ಲ. ಈ ಬಗ್ಗೆ ಯಾವುದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದರು. ಜತೆಗೆ ಮೈಸೂರು ವಿವಿಯಲ್ಲಿ ಟಿಪ್ಪು ಪೀಠ ಸ್ಥಾಪಿಸಿ ಎಂದು ಆಗ್ರಹಿಸಿದರು.
Related Articles
Advertisement
ತಮ್ಮ ಮಾತಿನುದ್ದಕ್ಕೂ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿಯವರಿಗೆ ತಿರುಗೇಟು ನೀಡಿದರು. ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು ಜನರ ಮನಸ್ಸು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಟಿಪ್ಪು ಮುಸಲ್ಮಾನ ಎಂಬ ಒಂದೇ ಕಾರಣಕ್ಕೆ ವಿರೋಧ ಮಾಡಲಾಗುತ್ತಿದೆ.
ಟಿಪ್ಪು ಅನ್ಯ ಧರ್ಮಿಯನಾಗಿದ್ದರೆ ವೃತ್ತಗಳಲ್ಲಿ ಟಿಪ್ಪು ಪ್ರತಿಮೆಗಳಿರುತ್ತಿತ್ತು. ಟಿಪ್ಪು ಒಂದು ಕೋಮಿನ ಜನರ ಮಾರಣ ಹೋಮ ಮಾಡಿದ ಎಂದು ಆರೋಪ ಮಾಡಲಾಗುತ್ತಿದೆ. ಜಲಿಯನ್ ವಾಲಾಬಾಗ್ ಘಟನೆಯಲ್ಲಿ ಪ್ರಾಣತ್ಯಾಗ ಮಾಡಿದವರ ಸ್ಮರಣೆಗೆ ಮುಂದಾಗದ, ಮಹಾತ್ಮ ಗಾಂಧೀಜಿಯ ಪ್ರಾಣವನ್ನೇ ತೆಗೆದ ಜನ ರಾಷ್ಟ್ರ ಪ್ರೇಮದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ರಾಷ್ಟ್ರೀಯ ಆಚರಣೆಯಾಗಲಿ: ಟಿಪ್ಪು ಕೇವಲ ಮುಸಲ್ಮಾನರ ಆಸ್ತಿಯಲ್ಲ, ರಾಷ್ಟ್ರದ ಆಸ್ತಿ. ಹೀಗಾಗಿ ಟಿಪ್ಪು ಜಯಂತಿ ರಾಷ್ಟ್ರೀಯ ಆಚರಣೆ ಆಗಬೇಕು. ನಾವೇನು ಟಿಪ್ಪು ಜಯಂತಿ ಮಾಡಿ ಎಂದು ನಾವ್ಯಾರು ಅರ್ಜಿ ಹಾಕಿರಲಿಲ್ಲ. ಪೊಲೀಸ್ ರಕ್ಷಣೆಯಲ್ಲಿ ಟಿಪ್ಪು ಜಯಂತಿ ಮಾಡು ವುದು ಬೇಕಿಲ್ಲ.
ಸರ್ಕಾರಕ್ಕೆ ಟಿಪ್ಪು ಜಯಂತಿ ಮಾಡುವ ಯೋಗ್ಯತೆ ಇಲ್ಲದಿದ್ದರೆ ಬಿಡಿ, ನಾವು ಮಾಡಿಕೊಳ್ಳುತ್ತೇವೆ. ಆರೋಗ್ಯದ ಕಾರಣಕ್ಕೆ ವಿಶ್ರಾಂತಿಗೆ ತೆರಳಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿ, ಎಲ್ಲಿದ್ದಾರೋ ಅಲ್ಲೇ ಟಿಪ್ಪು ಜಯಂತಿಯಲ್ಲಿ ಭಾಗವಹಿಸಬೇಕಿತ್ತು ಎಂದರು.
ಶಕ್ತಿ ಬರಲ್ಲ: ಟಿಪ್ಪು ಜಯಂತ್ಯುತ್ಸವವನ್ನು ರಾಜ ಕಾರಣಕ್ಕೆ ಬಳಸುವುದರಿಂದ ಶಕ್ತಿ ಬರುವುದಿಲ್ಲ. ಎಲ್ಲರೂ ವಿದ್ಯಾವಂತರು, ಬುದ್ದಿವಂತರಾಗಿದ್ದಾರೆ. ಜಾತೀ- ಧರ್ಮದ ಹೆಸರಲ್ಲಿ ಮತಗಳಿಸುವುದು ಹೆಚ್ಚು ದಿನ ನಡೆಯಲ್ಲ.
ಅಭಿವೃದ್ಧಿ ಮಾಡದೆ ಕೋಮುವಾದ ಬಿತ್ತಿದರು ಎನ್ನುವುದು ಐದೇ ವರ್ಷಗಳಲ್ಲಿ ಗೊತ್ತಾಗಿಬಿಡುತ್ತದೆ. ಹೀಗಾಗಿ ಜನರನ್ನು ಉದ್ವೇಗಕ್ಕೆ ಒಳಪಡಿಸಿ ಮತ ಪಡೆಯುವುದನ್ನು ಯಾರೂ ಒಪ್ಪುವುದಿಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದರು.