Advertisement

ವಿರೋಧಿಗಳಿಗೆ ಟೀಕೆಗೆ ವಿಷಯವೇ ಇಲ್ಲ: ಸಿ.ಟಿ. ರವಿ

11:59 PM Feb 12, 2023 | Team Udayavani |

ಚಿಕ್ಕಮಗಳೂರು: ಅಭಿವೃದ್ಧಿ ವಿಚಾರದಲ್ಲಿ ವಿರೋಧಿಗಳು ಚರ್ಚೆಗೆ ಬಂದರೆ ಟೀಕೆ ಮಾಡಲು ವಸ್ತುಗಳೇ ಇಲ್ಲ. ಆದರೆ ನಾನು ಮಾತ್ರ ಅಧಿಕಾರವನ್ನು ಅಭಿವೃದ್ಧಿ ಸಾಧನ ಎಂದು ಭಾವಿಸಿದ್ದೇನೆ ಎಂದು ಶಾಸಕ ಸಿ.ಟಿ. ರವಿ ಹೇಳಿದರು.

Advertisement

ರವಿವಾರ ಜಿಲ್ಲಾ ಬಿಜೆಪಿ ಕಚೇರಿ ಯಲ್ಲಿ ಹಲವು ಪ್ರಮುಖರನ್ನು ಪಕ್ಷಕ್ಕೆ ಬರಮಾಡಿ ಕೊಂಡು ಅವರು ಮಾತನಾಡಿದರು.

ಬಿಜೆಪಿ ಸೈದ್ಧಾಂತಿಕವಾಗಿರುವ ಆಂದೋಲನದ ಮೂಲಕ ಬಂದ ಪಕ್ಷ. ಅದು ಜಾತಿ ಕೇಂದ್ರಿತವಲ್ಲ, ಹಿಂದುತ್ವದ ತತ್ವವನ್ನು ಪ್ರತಿ ಪಾದಿಸುವಂತಹದ್ದು. ಅಭಿವೃದ್ಧಿಗೆ ಆದ್ಯತೆ ಕೊಡುವಂತಹದ್ದು.

20 ವರ್ಷಗಳ ಹಿಂದಿನ ಚಿಕ್ಕಮಗಳೂರಿಗೂ ಇಂದಿನ ಚಿಕ್ಕಮಗಳೂರಿಗೂ ಎಷ್ಟು ಬದಲಾವಣೆ ಆಗಿದೆ ಎನ್ನುವುದು ಎಲ್ಲರ ಅನುಭವಕ್ಕೆ ಬರುತ್ತದೆ. ಸಾವಿರಾರು ಕೋಟಿ ರೂ. ಅನುದಾನ ತಂದು ಕೆಲಸ ಮಾಡಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next