Advertisement

ವಿರೋಧಿಗಳು ನನ್ನ ಪ್ರಶ್ನೆಗಳಿಗೆ ಉತ್ತರಿಸಲಿ

12:20 AM Apr 17, 2019 | Lakshmi GovindaRaju |

ಬೆಂಗಳೂರು: ನಾನು ಕ್ಷೇತ್ರದಿಂದ ಕಾಣೆಯಾಗಿದ್ದೇನೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಂತಹವರು ನನ್ನ ಕೆಲ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಸವಾಲು ಹಾಕಿದರು.

Advertisement

ಮಂಗಳವಾರ ಸಂಜೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಾಗಲೂರು ಸರ್ಕಲ್‌ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಅವರಿಗೆ ಬೇರೆ ವಿಷಯಗಳೇ ಇಲ್ಲ ಎಂದರು.

ರಕ್ಷಣಾ ಇಲಾಖೆಗೆ ಸೇರಿದ ಜಾಗವನ್ನು ರಾಜ್ಯ ಸರಕಾರ, ಬಿಡಿಎ, ಬಿಬಿಎಂಪಿಗೆ ಬಿಡಿಸಿಕೊಡಲು ಕೇಂದ್ರ ರಕ್ಷಣಾ ಸಚಿವರನ್ನೇ ಬೆಂಗಳೂರಿಗೆ ಕರೆಸಿ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಶ್ರಮಿಸಿದ್ದೇನೆ. ಇದನ್ನು ಪ್ರತಿಪಕ್ಷದವರು ಮರೆತಂತಿದೆ ಎಂದು ಲೇವಡಿ ಮಾಡಿದರು.

ಕೇಂದ್ರ ಸರಕಾರದಿಂದ ಹೆಚ್ಚು ಅನುದಾನ ಕೊಡಿಸಿದ್ದಕ್ಕೆ ಕೃಷ್ಣ ಬೈರೇಗೌಡರೇ ನನಗೆ ಕೃತಜ್ಞತೆ ಸಲ್ಲಿಸಿ ಇದೇ ಜನವರಿಯಲ್ಲಿ ಪತ್ರ ಬರೆದಿದ್ದು ಇಷ್ಟು ಬೇಗ ಮರೆತು ಹೋಯಿತೇ. ಅಥವಾ ಜಾಣ ಮರೆವೇ ಎಂದು ವ್ಯಂಗ್ಯವಾಡಿದರು.

ಪಾನ್ಪೋರ್ಟ್‌ ಕೊಟ್ಟು ಕಳುಹಿಸಲಾ?: ಕೇಂದ್ರೀಯ ವಿದ್ಯಾಲಯವನ್ನು ರಾಜ್ಯಕ್ಕೆ ತಂದಿಲ್ಲ ಎಂದು ಹೇಳುತ್ತಿದ್ದಾರೆ. ಯಶವಂತಪುರದಲ್ಲಿ ಕೇಂದ್ರೀಯ ವಿದ್ಯಾಲಯ ಮಂಜೂರಾಗಿರುವುದು ಅವರಿಗೆ ಗೊತ್ತಿಲ್ಲವೇ. ಜಾಲಹಳ್ಳಿಯಲ್ಲಿ ಪಾಸ್‌ಪೋರ್ಟ್‌ ಕಚೇರಿ ಸ್ಥಾಪಿಸಲಾಗಿದೆ.

Advertisement

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಸದರ ಆದರ್ಶ ಗ್ರಾಮದಡಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಮಾಡಲಾಗಿದೆ. ಸಂಸದ, ಕೇಂದ್ರ ಸಚಿವನಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಯಾವುದೇ ಭ್ರಷ್ಟಾಚಾರ ನಡೆಸಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಹೇಳಿದರು.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಪಿ.ಕೆ.ರಾಜಗೋಪಾಲ…, ಮುಖಂಡರಾದ ಬಾಗಲೂರು ಜಗನ್ನಾಥ್‌, ದೊಡ್ಡ ಬಸವರಾಜು ಮತ್ತಿತರರು ಹಾಜರಿದ್ದರು. ಸಂಜೆ ಬಾಗಲೂರು ಸರ್ಕಲ್‌ನಿಂದ ಪ್ರಚಾರ ಆರಂಭಿಸಿದ ಸದಾನಂದಗೌಡರು,

ತೆರೆದ ಜೀಪಿನಲ್ಲಿ ರೋಡ್‌ ಶೋ ನಡೆಸಿದರು. ವಿನಾಯಕ ನಗರ, ದ್ವಾರಕ ನಗರ, ಕಟ್ಟಿಗೇನಹಳ್ಳಿ, ರೇವಾ ಯೂನಿವರ್ಸಿಟಿ ರಸ್ತೆ, ಕೋಗಿಲು ಲೇಔಟ್, ಅಗ್ರಹಾರ ಲೇಔಟ್‌, ಕೋಗಿಲು, ಕೊಡಿಗೇಹಳ್ಳಿ, ರಾಮಚಂದ್ರಪುರ, ಕುವೆಂಪುನಗರದಲ್ಲಿ ಸದಾನಂದಗೌಡರು ಮತ ಯಾಚನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next