Advertisement
ಈ ಹೊಸ ಆವೃತ್ತಿಯ ಸ್ಮಾರ್ಟ್ ಪೋನ್ ಹಿಂಭಾಗದಲ್ಲಿ ವಿಶಿಷ್ಟವಾದ ಕ್ಯಾಮರಾ ಬಂಪ್ ಇರಲಿದ್ದು, ಇದು ಐಪೋನ್ -12 ಆವೃತ್ತಿಯ ಕ್ಯಾಮರಾವನ್ನು ಹೋಲಲಿದೆ ಎಂದು ಹೇಳಲಾಗುತ್ತಿದೆ.
Related Articles
Advertisement
ಕ್ಯಾಮರಾ: ಈ ಮೊಬೈಲ್ ಪೋನಿನ 2 ಕ್ಯಾಮರಾಗಳು ಸೋನಿ ಸೆನ್ಸರ್ ಅನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದ್ದು, ಒಂದು ಕ್ಯಾಮರಾದಲ್ಲಿ 50 MP ಕಸ್ಟಮ್ ಮೈನ್ ಸೆನ್ಸರ್ ಹಾಗೂ ಇನ್ನೊಂದು ಕ್ಯಾಮಾರಾದಲ್ಲಿ ಅಲ್ಟ್ರಾವೈಡ್ ಸೆನ್ಸರ್ ಇರಲಿದೆಯಂತೆ. ಇನ್ನು ಮೂರನೇ ಕ್ಯಾಮರಾ ಜೂಮ್ ಲೆನ್ಸ್ ಅನ್ನು ಒಳಗೊಂಡಿರಲಿದ್ದು, 2X ಅಥವಾ 3x ಆಪ್ಟಿಕಲ್ ಜೂಮ್ ಅನ್ನು ಹೊಂದಿರಲಿದೆ. ಈ ನಡುವೆ ತನ್ನ X2 ಆವೃತ್ತಿಯ ಸ್ಮಾರ್ಟ್ ಪೋನ್ ನಲ್ಲಿ ಕಂಡುಬಂದಂತಹ ಟೆಲಿಫೋಟೋವನ್ನು ಇದು ಹೊಂದಿರುವುದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಮಾಸ್ಕ್ ಪೋನ್ ಹೆಡ್ ಸೆಟ್
ಚಾರ್ಜಿಂಗ್ ಸೌಲಭ್ಯ
OPPO X3 ಪ್ರೋ ಆವೃತ್ತಿಯ ಸ್ಮಾರ್ಟ್ ಪೋನ್ ವಯರ್ ಲೆಸ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿರಲಿದ್ದು, ಇದರ ಜೊತೆ ಜೊತೆಗೆ ವಯರ್ ಒಳಗೊಂಡ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ.
ಬಣ್ಣಗಳ ಲಭ್ಯತೆ
ಈ ಹೊಸ ಮೊಬೈಲ್ ಪೋನ್ ಬಿಳಿ, ಕಪ್ಪು ಬಣ್ಣಗಳನ್ನು ಒಳಗೊಂಡಂತೆ ಗೋಲ್ಡನ್ ಕಲರ್ ನಲ್ಲಿಯೂ ಗ್ರಾಹಕರಿಗೆ ಲಭ್ಯವಾಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಟಾಟಾ ಆಲ್ಟ್ರೋಜ್ ಟರ್ಬೋ ಅನಾವರಣ : ನಾಳೆಯಿಂದ ಬುಕಿಂಗ್‌ಗೆ ಅವಕಾಶ