Advertisement
ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ದೊರಕುತ್ತದೆ. ಇದರ ದರ 18,990 ರೂ. ಎಲ್ಲ ಮೊಬೈಲ್ ಅಂಗಡಿಗಳಲ್ಲಿ ಮತ್ತು ಅಮೆಜಾನ್, ಫ್ಲಿಪ್ ಕಾರ್ಟ್‌ನಂಥ ಆನ್‌ಲೈನ್ ಅಂಗಡಿಗಳಲ್ಲೂ ಲಭ್ಯ.
Related Articles
Advertisement
ಮೊಬೈಲ್‌ನ ಹಿಂಬದಿ ಗ್ಲಾಸಿ ಡಿಸೈನ್ ಮಾಡಲಾಗಿದ್ದು, ಮೊಬೈಲ್ ಆಕರ್ಷಕವಾಗಿ ಕಾಣುತ್ತದೆ. ಎಡಮೂಲೆಯಲ್ಲಿ ,ಕ್ಯಾಮರಾ ಭಾಗ ಮೇಲೆ ಬರುವಂತೆ ವಿನ್ಯಾಸಗೊಳಿಸಲಾಗಿದೆ.
ಸ್ನಾಪ್‌ಡ್ರಾಗನ್ 665: ಇದರಲ್ಲಿರುವುದು ಸ್ನಾಪ್‌ಡ್ರಾಗನ್ 662 ಪ್ರೊಸೆಸರ್. 6 ಜಿಬಿ ರ್ಯಾಮ್, 128ಜಿಬಿ ಸಂಗ್ರಹ ಸಾಮರ್ಥ್ಯ ಇರುವುದರಿಂದ ಒಂದುಮಿvÉ… ರೇಂಜ್ ಮೊಬೈಲ್‌ನಲ್ಲಿರಬೇಕಾದವೇಗವಿದೆ. ಈ ದರಪಟ್ಟಿಗೆ ಸ್ನಾಪ್ ಡ್ರಾಗನ್ 720ಅಥವಾ 730 ಪ್ರೊಸೆಸರ್ ಇರಬೇಕಾಗಿತ್ತು.ಅಂಡ್ರಾಯ್ಡ 11 ಕಾರ್ಯಾಚರಣೆ ವ್ಯವಸ್ಥೆ ಇದ್ದು, ಇದಕ್ಕೆ ಒಪ್ಪೋದವರ ಕಲರ್ ಓಎಸ್ ಅನ್ನು ಜೋಡಿಸಲಾಗಿದೆ.
ಸ್ವಂತ ಓಎಸ್ ಹೊಂದಿರುವ ಕೆಲವು ಕಂಪೆನಿಗಳು ಗ್ರಾಹಕರಿಗೆಬೇಡದ ಕೆಲವು ಆ್ಯಪ್‌ಗ್ಳನ್ನು ಮೊದಲೇ ತುಂಬಿರುತ್ತವೆ.ಇದರಲ್ಲಿ ಆ ರೀತಿ ಇಲ್ಲ ಎಂಬುದು ಸಮಾಧಾನ.
48 ಮೆ.ಪಿ. ಕ್ಯಾಮರಾ: ಹಿಂಬದಿಯಲ್ಲಿ ಮೂರು ಲೆನ್ಸಿನಕ್ಯಾಮರಾ ನೀಡಲಾಗಿದೆ. 48 ಮೆ.ಪಿ. ಮುಖ್ಯ ಸೆನ್ಸರ್, 2ಮೆ.ಪಿ. ಡೆಪ್ತ್ ಸೆನ್ಸರ್ 2 ಮೆ.ಪಿ. ಮ್ಯಾಕ್ರೋ ಸೆನ್ಸರ್ ಇದೆ.ಸೆಲ್ಫಿàಗೆ 16 ಮೆಗಾಪಿಕ್ಸಲ್ ಎಐ ಕ್ಯಾಮರಾ ನೀಡಲಾಗಿದೆ. ಹಿಂಬದಿ, ಸೆಲ್ಫಿ ಕ್ಯಾಮರಾಗಳು ಒಂದು ಮಟ್ಟಕ್ಕೆ ಉತ್ತಮಫೋಟೋಗಳನ್ನು ನೀಡುತ್ತವೆ. ಸೆಲ್ಫಿ ಪ್ರಿಯರಿಗೆ ಇದರ ಫೋಟೋ ಎಂದಿನಂತೆ ಪ್ರಿಯವಾಗುತ್ತದೆ.
ಕೊರತೆ ಏನು?ಮೊದಲೇ ತಿಳಿಸಿದಂತೆ ಇದರ ದರ 19 ಸಾವಿರರೂ. ಈ ದರಕ್ಕೆ ಒಪ್ಪೋ 5ಜಿ ಸೌಲಭ್ಯವನ್ನುನೀಡಬಹುದಿತ್ತು. ಭಾರತದಲ್ಲಿ ಶೀಘ್ರವೇ 5ಜಿಸೌಲಭ್ಯ ಬರುತ್ತಿದೆ. ಈಗ 20 ಸಾವಿರ ರೂ.ನೀಡುವ ಗ್ರಾಹಕ, 5ಜಿ ಬಯಸುತ್ತಾನೆ.ಹಾಗಾಗಿ ಒಪ್ಪೋ ಈ ದರಕ್ಕೆ 5ಜಿ ನೆಟ್‌ವರ್ಕ್‌ಕಲ್ಪಿಸದಿರುವುದು ಇದರ ಒಂದು ಮುಖ್ಯ ಕೊರತೆ.
ಕೆ.ಎಸ್. ಬನಶಂಕರ ಆರಾಧ್ಯ