Advertisement

ಬಿಎಸ್‌ ವೈ ನೂತನ ಸಚಿವ ಸಂಪುಟ: ಕರಾವಳಿಗರು ಹೇಳುವುದೇನು ?

03:34 PM Aug 29, 2019 | keerthan |

ಮಣಿಪಾಲ: ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು ಮಂಗಳವಾರ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಒಂದು ಸಚಿವ ಸ್ಥಾನ ದೊರಕಿದೆ. ಈ ಬಗ್ಗೆ ʼಉದಯವಾಣಿʼ ಫೇಸ್‌ ಬುಕ್‌ ನಲ್ಲಿ ಜನರಿಗೆ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಕರಾವಳಿಗೆ ಇನ್ನಷ್ಟು ಸ್ಥಾನ ಲಭಿಸಬೇಕಿತ್ತೇ ? ಯಾಕೆ ? ಎಂಬ ಪ್ರಶ್ನೆ ಕೇಳಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಆಯ್ದಪ್ರತಿಕ್ರಿಯೆಗಳು ಇಲ್ಲಿವೆ.

Advertisement

1. ದೀಕ್ಷಿತ್‌ ಗೌಡ ಕರಂದ್ಲಾಜೆ: ಹೌದು ಕೊಡಬೇಕಾಗಿತ್ತು. ಹಿರಿಯ ಶಾಸಕ ಎಸ್. ಅಂಗಾರ ಅವರಿಗಾದ್ರು ಕೊಡಬೇಕಿತ್ತು. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾಜಪ ಒಂದೇ ಒಂದು ಕ್ಷೇತ್ರ ಉಳಿಸಿಕೊಂಡಿದ್ದರೆ ಅದು ಸುಳ್ಯ ಕ್ಷೇತ್ರ… ಪ್ರತಿ ಲೋಕಸಭಾ ಚುನಾವಣೆಯಲ್ಲೂ ಹೆಚ್ಚಿನ ಅಂತರವನ್ನು ಭಾಜಪ ಗೆ ತಂದುಕೊಡುವ ಕ್ಷೇತ್ರವು ಸುಳ್ಯ ಕ್ಷೇತ್ರವೇ. ಅಂಗಾರರಿಗೆ ಸಚಿವ ಸ್ಥಾನ ನೀಡುವ ಮೂಲಕ ಅಲ್ಲಿನ ಮತದಾರರಿಗಾದ್ರು ಗೌರವ ನೀಡಬೇಕಿತ್ತು.

2. ನಳಿನಾಕ್ಷಿ ಕುಲಾಲ್:‌ ನನಗೇನು ಹಾಗನಿಸುವುದಿಲ್ಲ. ಕೆಲಸ ಮಾಡಲು ಮಂತ್ರಿ ಪದವಿಯ ಅವಶ್ಯಕತೆ ಇಲ್ಲ. ಸಿಗುವ ಅನುದಾನದ ಸರಿಯಾದ ಬಳಕೆಯಾಗಲಿ  ಜನರ ಆಶೋತ್ತರಗಳಿಗೆ ಸೂಕ್ತವಾದ ಸ್ಪಂದನ ಇರಲಿ.

3. ಅಭಿಶೇಕ್‌ ಶೆಟ್ಟಿ ಜಡ್ಕಲ್:‌ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಕಡೆಗಣಿಸಿದ್ದು ಸ್ವಲ್ಪ ಬೇಸರ ತಂದಿದೆ. ಆದರೆ ಇನ್ನಾದರೂ ಜಾತಿ ಸಮುದಾಯಗಳ ಓಲೈಕೆಗೆ ಸಚಿವ ಸಂಪುಟವನ್ನು ರಚಿಸದೆ ಸಮಸ್ತ ಕರ್ನಾಟಕದ ಬೆಳವಣಿಗೆಗೆ ಸೂಕ್ತವಾಗುವ ಸಚಿವ ಸಂಪುಟವನ್ನು ರಚಿಸಿ.

4. ಶರತ್‌ ಶೆಟ್ಟಿ: ನಿಜವಾಗಿಯೂ ಸಿಗಬೇಕಿತ್ತು. ಕರಾವಳಿ ಬಿಜೆಪಿಯಲ್ಲಿ ಹಲವು ಸಮರ್ಥ ಅನುಭವಿ ನಾಯಕರಿದ್ದರು ಉದಾಹರಣೆಗೆ ಅಂಗಾರ ಸುನೀಲ್ ಕುಮಾರ್ ಹಾಲಾಡಿ ಅವರು ಯಾರಿಗಾದ್ರು ಕಾರ್ಯಕರ್ತರಿಗೆ ಇನ್ನಷ್ಟು ಪಕ್ಷ ಸಂಘಟನೆಗೆ ಪ್ರೊತ್ಸಾಹ ಕೊಟ್ಟ ಹಾಗೆ ಆಗ್ತಿತ್ತು

Advertisement

5. ವಿನಯ್‌ ಪಟ್ನ ಕಡಬ: ಇಲ್ಲಿವರೆಗೆ ಹಣಕ್ಕಾಗಿ ಪಕ್ಷ ಬಿಟ್ಟು ಹೋದವರು ನಮ್ಮ ಜಿಲ್ಲೆಯಲ್ಲಿ ಇಲ್ಲ ಸ್ವಾಮಿ .ಎಂಜಲು ತಿನ್ನುವವರು ನಾವಲ್ಲ.

6. ನಾಗರಾಜ ಶೆಟ್ಟಿ: ಕಾಂಗ್ರೆಸ್ ಚಿಂತನೆ – ಕರಾವಳಿ ಬಿಜೆಪಿಯ ಭದ್ರ ಕೋಟೆ. ಹಾಗಾಗಿ ಕರಾವಳಿ ಭಾಗಕ್ಕೆ ಹೆಚ್ಚು ಮಂತ್ರಿ ಸ್ಥಾನ ನೀಡಿ ನಮ್ಮ ಆ ಭಾಗದ ಕಾಂಗ್ರೆಸ್ ಶಾಸಕರ ಸ್ಥಾನವನ್ನು ಮುಂದಿನ ಚುನಾವಣೆಯಲ್ಲಿಯೂ ಉಳಿಸಿಕೊಳ್ಳಬೇಕು. ಹೆಚ್ಚು ಮಂತ್ರಿ ಸ್ಥಾನ ಕೊಡದಿದ್ದರೇ ಮುಂದಿನ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ನಮಗೆ ಹೆಚ್ಚು ಸ್ಥಾನ ಸಿಗಲ್ಲ.
#ಬಿಜೆಪಿ ಚಿಂತನೆ : ಕರಾವಳಿ ಬಿಜೆಪಿಯ ಭದ್ರ ಕೋಟೆ.ಹಾಗಾಗಿ ಆ ಭಾಗದ ಶಾಸಕರಿಗೆ ಯಾವುದೇ ಮಂತ್ರಿ ಸ್ಥಾನ ಕೊಡದಿದ್ದರೂ ಪರ್ವಾಗಿಲ್ಲ. ನಾವು ಕೇಳದೇ ಇದ್ದರೂ ಅಲ್ಲಿಯ ಜನ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಓಟ್ ಹಾಕಿಯೇ ಹಾಕ್ತಾರೆ.

7. ಕೃಷ್ಣ ಪೂಜಾರಿ: ಪ್ರತಿಯೊಂದು ಸರಕಾರವೂ ದಕ್ಷಿಣ ಕನ್ನಡವನ್ನು ಕಡೆಗಣಿಸಿದೆ.

8. ಗಿರೀಶ್‌ ಸಾಲ್ಯಾನ್:‌ ನಮಗೆ ಮಂತ್ರಿ ಎನ್ನುವ ಪಟ್ಟ ಬೇಡ. ಇಲ್ಲಿ ಇರುವ ಜನರಿಗೆ ಒಳ್ಳೆ ಸವಲತ್ತು ಸಿಕ್ಕಿದರೆ ಸಾಕು. ಮನೆ, ನೀರು, ವಿದ್ಯುತ್‌, ಸರಕಾರಿ ಮೆಡಿಕಲ್‌ ಕಾಲೇಜು, ಸರಕಾರಿ ಶಾಲೆ ಮತ್ತು ಆಸ್ಪತ್ರೆ ಅಭಿವೃದ್ದಿ, ಗಲಾಟೆ ಇಲ್ಲದೆ ನೆಮ್ಮದಿಯ ಬದುಕು ಕಲ್ಪಿಸಬೇಕು, ಇಂತಹ ಕೆಲಸಗಳನ್ನು ಮೊದಲು ಮಾಡಿ

9. ನಾರಾಯಣ ಭಟ್‌: ಮಂತ್ರಿ ಪದವಿ ಇಲ್ಲದೆಯೂ ಕರಾವಳಿಯ ಶಾಸಕರು ಕೆಲಸ ಮಾಡಬಲ್ಲರು. ಆಡಳಿತ ಪಕ್ಷದ ಶಾಸಕರೇ ಇರುವುದರಿಂದ ಯಾವುದೇ ಅಡೆತಡೆಗಳಿಲ್ಲದೆ ಮಂತ್ರಿಮಂಡಲದೊಂದಿಗೆ ಕೆಲಸ ಮಾಡಬಹುದು.

10. ಲೋಕೇಶ್‌ ಕಲ್ಲಾಜೆ: ಕೇಂದ್ರ, ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿರುವಾಗ ಸಚಿವ ಸ್ಥಾನದ ಅಗತ್ಯವಿಲ್ಲ. ಒಬ್ಬ ಉತ್ತಮ ಪ್ರತಿನಿಧಿಯಿಂದ ಖಂಡಿತ ತನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next