ಮಣಿಪಾಲ: ಟೀಂ ಇಂಡಿಯಾ ಮಾಜಿ ನಾಯಕ, ಬಿ.ಸಿ.ಸಿ.ಐ. ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರ ಜನ್ಮದಿನದ ಹಿನ್ನಲೆಯಲ್ಲಿ ‘ದಾದಾ’ ಎಂದೇ ಕ್ರಿಕೆಟ್ ವಲಯದಲ್ಲಿ ಹೆಸರುವಾಸಿಯಾಗಿರುವ ಸೌರವ್ ಅವರ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದಅಭಿಪ್ರಾಯಗಳು ಇಲ್ಲಿದೆ.
ಸತೀಶ್ ರಾವ್: ಭಾರತದ ಪರ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಗಂಗೂಲಿ ಒಬ್ಬ ಯಶಸ್ವಿ ನಾಯಕರು ಹೌದು
ಸುರೇಂದ್ರ ಬಿ ಎಂ: ನಾಯಕನ ಗುಣ ತನ್ನ ತಂಡಕ್ಕೆ ಯಾರು ಬೇಕು ಎಂದು ಗಟ್ಟಿ ಧ್ವನಿಯಲ್ಲಿ ಆಯ್ಕೆ ಮಂಡಳಿಯ ಕದ ತಟ್ಟಿದವರು.
ರವೀಶ್ ಶೆಟ್ಟಿ: ರಾಹುಲ್ ದ್ರಾವಿಡ ನಾಯಕನಾದಗ ರಾಜಕೀಯ ಮಾಡಿದ ಭ್ರಷ್ಟ ಕ್ರಿಕೆಟಿಗ
ಉಮಾಶಂಕರ್ ಟಿ ವಿ: ಭವಿಷ್ಯದ ಕ್ರಿಕೆಟ್ ಆಟಗಾರರ ಆಶಾಕಿರಣ
ಸೀಮಾ ಎ ಎಸ್: ಸೌರವ್ ಗಂಗೂಲಿ ಒಬ್ಬ ಅತ್ಯುತ್ತಮ ನಾಯಕ. ಅತ್ಯುತ್ತಮ ಆಟಗಾರ. ಯುವ ಆಟಗಾರರಿಗೆ ಸ್ಪೂರ್ತಿ, ಉತ್ತಮ ಆಡಳಿತಗಾರ