Advertisement

ಆತ್ಮ ನಿರ್ಭರ ಭಾರತ” ಯೋಜನೆಯ ಸ್ಪೆಷಲ್ ಆರ್ಥಿಕ ಪ್ಯಾಕೇಜ್ ಕುರಿತಂತೆ ನಿಮ್ಮ ಅಭಿಪ್ರಾಯವೇನು

05:54 PM May 16, 2020 | keerthan |

ಮಣಿಪಾಲ: ‘ಆತ್ಮ ನಿರ್ಭರ ಭಾರತ” ಯೋಜನೆಯಡಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದಿನವರೆಗೆ ಮಾಡಿರುವ ಸ್ಪೆಷಲ್ ಆರ್ಥಿಕ ಪ್ಯಾಕೇಜ್ ಕುರಿತಾದಂತೆ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಲೋಕೇಶ್ ಕೆಮ್ಮಿಂಜೆ:  ನರೇಂದ್ರ ಮೋದಿಯವರ ಒಳ್ಳೆಯ ಕಾರ್ಯಗಳು ಎಲ್ಲ ವರ್ಗದ ಜನರಿಗೂ ಅದರಲ್ಲೂ ಬಡವರಿಗೆ ಸಮರ್ಪಕ ರೀತಿಯಲ್ಲಿ ಸಿಗುವಂತಾಗಬೇಕು.ಪ್ಯಾಕೇಜ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಪಲಾನುಭವಿಗಳಿಗೆ ಅದರ ಸದುಪಯೋಗ ಶೀಘ್ರದಲ್ಲೇ ದೊರೆಯಬೇಕು. ಘೋಷಣೆಗಿಂತಲೂ ಕಾರ್ಯಗತ ಮುಖ್ಯ. ಈ ಘೋಷಣೆಯ ಲಾಭವು ಪ್ರತಿಯೊಂದು ಭಾರತೀಯ ನಾಗರಿಕನಿಗೂ ದೊರೆಯಬೇಕು . ಇದೊಂದು ಘೋಷಣೆಯಾಗಿಯೇ ಉಳಿಯಬಾರದು.

ರಮೇಶ್ ಉದ್ಯಾವರ್:  ಪ್ಯಾಕೇಜ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಪಲಾನುಭವಿಗಳಿಗೆ ಅದರ ಸದುಪಯೋಗ ಶೀಘ್ರದಲ್ಲೇ ದೊರೆಯಬೇಕು. ಘೋಷಣೆಗಿಂತಲೂ ಕಾರ್ಯಗತ ಮುಖ್ಯ.

ದಾವೂದ್ ಕೂರ್ಗ್:  ಜನರು ಈ ಸರ್ಕಾರದ ಮೇಲಿನ ಭರವಸೆ ಕಳ್ಕೊಂಡು ಬಿಟ್ಟಿದ್ದಾರೆ.. ಬರೀ ಘೋಷಣೆ ಮಾತ್ರ.

ಶ್ರೀನಿವಾಸ ಜೆಜಿ: ಯಾವುದೇ ಯೋಜನೆ ಅಥವಾ ಪ್ಯಾಕೇಜ್ ಸೌಕರ್ಯಗಳು ಸಂಬಂಧಪಟ್ಟವರಿಗೆ ಇಲ್ಲವೆ ಆ ಕ್ಷೇತ್ರದಲ್ಲಿ ಸರಿಯಾಗಿ ವಿನಿಯೋಗವಾದಲ್ಲಿ ಎಷ್ಟೋ ಸಮಸ್ಯೆಗಳು ಬಗೆಹರಿಯಬಹುದು ಆದರೆ ವಾಸ್ತವವಾಗಿ .

Advertisement

ಪಾರ್ಥಿಪದಿ ಸೂಫಿ: ಚಳಿಗಾಲ ಸನಿಹವಾಗುತ್ತಿದ್ದಂತೆ ಕುರುಬನ್ನೊಬ್ಬ ತನ್ನ ಕುರಿಗಳಿಗೆ ಹೇಳಿದ ‘ನೀವು ಚಳಿಯ ಬಗ್ಗೆ ಚಿಂತಿಸಬೇಡಿ. ನಿಮಗೆಲ್ಲರಿಗೂ ನಾಳೆಯಿಂದಲೇ ಸ್ವೆಟರ್ ತಂದುಕೊಡುತ್ತೇನೆ’ ಎಂದು. ಕುರಿಗಳೆಲ್ಲವೂ ಖುಷಿಯಿಂದ ಕೇಕೆ ಹಾಕಿ, ಕುರುಬನಿಗೆ ಜೈಕಾರ ಹಾಕುತ್ತಿದ್ದಾಗ ಒಂದು ಕುರಿ ಕುರುಬನನ್ನು ಕೇಳಿತು ‘ಸ್ವೆಟರ್’ ಗೆ ಬೇಕಾಗುವ ಉಣ್ಣೆಯನ್ನು ಎಲ್ಲಿಂದ ತರುತ್ತೀರಿ? ಇದು ನಮ್ದೇ ಕಥೆ, ನಮ್ದೇ ಇಪ್ಪತ್ತು ಲಕ್ಷ ಕೋಟಿಯ ಕಥೆ.

ಮೌನೇಶ್ ಆಚಾರ್ಯ ಮೌನೇಶ್ ಆಚಾರ್ಯ: ಬಡವರನ್ನ ಪ್ಯಾಕೇಜ್ ಮಾಡಿ ದುಡ್ಡು ಇರೊ ಶ್ರೀಮಂತರಿಗೆ ಮಾರುವ ಹಾಗೆ ಇದೆ ಇಂದು ಬಡವ ಸಾಯ್ತಾ ಇದ್ದಾನೆ ಅವನಿಗೆ ಬೇಕಾದ ಅನ್ನದ ವ್ಯವಸ್ಥೆ ಇಲ್ಲ ಇದು ಶ್ರೀಮಂತರ ಪ್ಯಾಕೇಜ್

ಅನಿಲ್ ಶರಧಿ: ತೂಕಡಿಸುತ್ತಿರೊ ರಾಜಕಾರಣಿಗಳಿಗೆ ಹಾಸಿಗೆ ಹಾಕಿ ಕೊಟ್ಟಂತ್ತಾಯ್ತು. (ಬಡವಾ ನೀ ಮಡಗ್ದಂಗಿರು)

Advertisement

Udayavani is now on Telegram. Click here to join our channel and stay updated with the latest news.

Next