Advertisement

ನೇತ್ರ ಚಿಕಿತ್ಸೆ ಯಶಸ್ವಿ: ಫ‌ಲಾನುಭವಿಗಳ ಸಂತಸ

01:01 PM Apr 04, 2017 | |

ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಚಿತ್ತಕನಪಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 350 ಜನರ ನೇತ್ರ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಯಿತು. ಶಿಬಿರದಲ್ಲಿ 27 ಮಹಿಳೆಯರು, 27 ಪುರುಷರು ಹಾಗೂ ನಾಲ್ಕು ವರ್ಷದ ಮಗು ಸೇರಿ 55 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಬಸವೇಶ್ವರ ಆಸ್ಪತ್ರೆಯಲ್ಲಿ ನಡೆಸಿ ಕೃತ್ರಿಮ ಮಸೂರ ಅಳವಡಿಸಲಾಯಿತು. 

Advertisement

60 ವರ್ಷಕ್ಕೂ ಮೇಲ್ಪಟ್ಟ ಬಡ ಹಿರಿಯ ನಾಗರಿಕರಲ್ಲಿ ಬಹುತೇಕ ಫಲಾನುಭವಿಗಳು ಅನೇಕ ವರ್ಷದಿಂದ ತೊಂದರೆ ಅನುಭವಿಸುತ್ತಿದ್ದರು. ಅವರ ಮನವೊಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕ್ಯಾಟರ್ಯಾಕ್ಟ್ ಸರ್ಜರಿಗೆ ಒಳಪಟ್ಟ 55 ಫಲಾನುಭವಿಗಳಿಗೆ ಬಿಡುಗಡೆ ದಿನ ಎಂ ಆರ್‌ ವೈದ್ಯಕೀಯ ಕಾಲೇಜಿನ ಡೀನ್‌ ಡಾ| ಎಸ್‌. ಆರ್‌.ಹರವಾಳ,

ವೈದ್ಯಕೀಯ ನಿರ್ದೇಶಕ ಡಾ| ಎಸ್‌.ಕೆ. ಆಂದೋಲಾ, ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಶರಣಗೌಡ ಪಾಟೀಲ, ಉಪ ವೈದ್ಯಕೀಯ ಅಧೀಕ್ಷಕ ಡಾ| ಎಂ.ಆರ್‌. ಪೂಜಾರಿ ಹಾಗೂ ನೇತ್ರ ಚಿಕಿತ್ಸಾ ವಿಭಾಗದ  ಮುಖ್ಯಸ್ಥ ಡಾ| ವಿಶ್ವನಾಥ ರೆಡ್ಡಿ ಯೋಗಕ್ಷೇಮ ವಿಚಾರಿಸಿದರು. 

ನೇತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ವಿಶ್ವನಾಥ ರೆಡ್ಡಿ ನೇತೃತ್ವದಲ್ಲಿ ನೇತ್ರ ತಜ್ಞರಾದ ಡಾ| ಎಂ.ಆರ್‌.  ಪೂಜಾರಿ, ಡಾ| ರಾಜಶ್ರೀ ರೆಡ್ಡಿ, ಡಾ| ಪ್ರಜ್ವಲ್‌ರೆಡ್ಡಿ, ಡಾ| ಮಂಜುಳಾ ಮಂಗಾಣಿ, ಡಾ| ಕವಿತಾ ಸಲಗರ, ಡಾ| ಸುಮೀತ ದೇಶಪಾಂಡೆ, ಡಾ| ವೀರೇಶ ಕೋರವಾರ, ಡಾ| ಅಂಬಿಕಾ ಪಾಟೀಲ  ಹಾಗೂ ಡಾ| ವಿನೀತ ಬಿಮಶೆಟ್ಟಿ ಹಾಗೂ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next