ಯಾದಗಿರಿ: ವೈದ್ಯಕೀಯ ಕ್ಷೇತ್ರದಲ್ಲಿಯೇ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಯುವತಿಯ ಹೊಟ್ಟೆಯಲ್ಲಿ ಸಂಗ್ರಹವಾಗಿದ್ದ ಕೂದಲು ಗಡ್ಡೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ಯಾದಗಿರಿ ವಿಬಿಆರ್ ಮುದ್ನಾಳ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ.
ಚಿತ್ತಾಪೂರ ತಾಲೂಕಿನ 16 ವರ್ಷದ ಯುವತಿ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಳು, ಪರೀಕ್ಷಿಸಿದ ಬಳಿಕ ಹೊಟ್ಟೆಯಲ್ಲಿ ಏನಾದರೂ ಇರಬಹುದು ಎನ್ನುವ ಅನುಮಾನ ಮೂಡಿತು. ಬಳಿಕ ಸ್ಕ್ಯಾನಿಂಗ್ ಮಾಡಿಸಿದ್ದರಿಂದ ಹೊಟ್ಟೆಯಲ್ಲಿ ಗಡ್ಡೆಯಿರುವುದು ಖಚಿತವಾಯಿತು ಎಂದು ವಿವರಿಸಿದರು.
ಶಸ್ತ್ರ ಚಿಕಿತ್ಸೆಗೆ ಮುಂದಾದ ಡಾ. ವೀರಬಸವಂತರೆಡ್ಡಿ ಮುದ್ನಾಳ ನೇತೃತ್ವದ ಡಾ.ಅಭಿಷೇಕ ರೆಡ್ಡಿ ಪಳ್ಳಾ, ಡಾ.ಕ್ಷಿತೀಜ್,ಡಾ. ಅಮೋಘ ಇತರರ ತಂಡ ಜುಲೈ 17ರಂದು ಯುವತಿಯ ಹೊಟ್ಟೆಯ ಶಸ್ತ್ರ ಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿದ್ದ 300 ಗ್ರಾಂ. ಕೂದಲಿನ ಗಡ್ಡೆಯನ್ನು ಹೊರತೆಗಿದಿದ್ದಾಗಿ ತಿಳಿಸಿದರು.
ಅಂದಾಜು 50 ಸೆಂ.ಮೀಟರ್ ಉದ್ದದ ಕೂದಲು ಗಡ್ಡೆ ಹೊಟ್ಟೆಯಲ್ಲಿ ಸಂಗ್ರಹವಾಗಿದ್ದರಿಂದ ಯುವತಿಗೆ ಊಟ ಸೇರುತ್ತಿರಲಿಲ್ಲ. ಅಲ್ಲದೇ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಇದೀಗ ಯಶಸ್ವಿ ಶಸ್ತ್ರ ಚಿಕಿತ್ಸೆಯಿಂದ ಯುವತಿ ಗುಣಮುಖವಾಗಿದ್ದಾಳೆ. ಹೊಟ್ಟೆಯಲ್ಲಿ ಹೇಗೆ ಕೂದಲು ಸಂಗ್ರಹವಾಗಲು ಕಾರಣ ಏನಿರವಹುದು ಎನ್ನುವ ಜಾಡು ಹಿಡಿದು ವಿಚಾರಿಸಿದ ವೈದ್ಯರಿಗೆ ಯುವತಿ ಸಣ್ಣ ವಯಸ್ಸಿನಿಂದ 13 ವರ್ಷದವರೆಗೆ ಕೂದಲು ತಿನ್ನುತ್ತಿದ್ದಳು ಎನ್ನುವ ಅಂಶ ಬೆಳಕಿಗೆ ಬಂದಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಇದು ಅಪರೂಪ. ಇದನ್ನು ಟ್ರಂಕೊಬ್ರಿಝಾರ್ ಎನ್ನಲಾಗುತ್ತದೆ. ಹೊಟ್ಟೆಯಲ್ಲಿ ಕೂದಲು ಸಂಗ್ರಹವಾಗಿ ಗಡ್ಡೆಯಾಗಿದ್ದರಿಂದ ತೀವ್ರ ಹೊಟ್ಟೆನೋವಿನಿಂದ ಯುವತಿ ಬಳಲುತ್ತಿದ್ದಳು. ನಮ್ಮ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ಮೂಲಕ ಯುವತಿಯನ್ನು ಗುಣಪಡಿಸಲಾಗಿದೆ- ಡಾ.ವೀರಬಸವಂತರೆಡ್ಡಿ ಮುದ್ನಾಳ, ತಜ್ಞ ವೈದ್ಯರು. ವಿ.ಬಿ.ಆರ್ ಮುದ್ನಾಳ ಆಸ್ಪತ್ರೆ. ಯಾದಗಿರಿ.