Advertisement

ಆಪರೇಶನ್‌ ಶ್ರದ್ಧಾ 

11:47 AM Jun 13, 2017 | Team Udayavani |

ಶ್ರದ್ಧಾ ಶ್ರೀನಾಥ್‌ ಅಭಿನಯದ “ಆಪರೇಶನ್‌ ಅಲಮೇಲಮ್ಮ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. “ಯೂ ಟರ್ನ್’ನಲ್ಲಿ ಶ್ರದ್ಧಾ ಹೇಗಿದ್ದರೋ, ಅದಕ್ಕೆ ಸಂಪೂರ್ಣ ವಿರುದ್ಧವಾಗಿ ಈ ಪಾತ್ರವಿದೆ ಎಂದು ಟ್ರೇಲರ್‌ ನೋಡಿದವರೆಲ್ಲಾ ಹೇಳುವಷ್ಟು ವಿಭಿನ್ನತೆ ಅನನ್ಯ ಟೀಚರ್‌ ಪಾತ್ರದಲ್ಲಿ ಕಾಣಿಸುತ್ತಿದೆ. ಇಷ್ಟಕ್ಕೂ ಈ ಚೇಂಜ್‌ಓವರ್‌ಗೆ ಕಾರಣವೇನು ಎಂಬ ಪ್ರಶ್ನೆ ಮುಂದಿಟ್ಟರೆ, ಶ್ರದ್ಧಾ ಹೇಳ್ಳೋದೇನು ಗೊತ್ತಾ?

Advertisement

1. “ಯು ಟರ್ನ್’ನಂತಹ ಸೀರಿಯಸ್‌ ಪಾತ್ರ ಮಾಡಿದ ನೀವು ಏಕಾಏಕಿ ಅನನ್ಯ ಟೀಚರ್‌ ಆಗಿದ್ದು ಹೇಗೆ?
– ನನಗೆ ಆ ತರಹದ ಒಂದು ಚೇಂಜ್‌ಓವರ್‌ ಬೇಕಿತ್ತು. “ಯು ಟರ್ನ್’ ನೋಡಿದವರು ಹುಡುಗಿ ತುಂಬಾ ಸೀರಿಯಸ್‌ ಎಂದು ಭಾವಿಸಿಕೊಂಡಿದ್ದರು. ಜೊತೆಗೆ ನಾನು ಸೀರಿಯಸ್‌ ಪಾತ್ರಗಳಿಗೆ ಬ್ರಾಂಡ್‌ ಆಗುವ ಅಪಾಯವೂ ಇತ್ತು. ನನಗೆ ಪಕ್ಕಾ ಕಮರ್ಷಿಯಲ್‌ ಆದ ಒಂದು ಭಿನ್ನ ಪಾತ್ರ ಬೇಕಿತ್ತು. ಆಗ ಸಿಕ್ಕಿದ್ದು “ಆಪರೇಷನ್‌ ಅಲಮೇಲಮ್ಮ’. ಸುನಿ ಆ ಸಿನಿಮಾದ ಆಫ‌ರ್‌ ಕೊಟ್ಟ ತಕ್ಷಣ ನಾನು ಒಪ್ಪಿಕೊಂಡೆ. ಏಕೆಂದರೆ, ನನಗೆ ಅವರ ಕೆಲಸದ ಮೇಲೆ ವಿಶ್ವಾಸವಿತ್ತು. ಆ ವಿಶ್ವಾಸ ಸೆಟ್‌ಗೆ ಹೋದ ನಂತರ ನಿಜವಾಯಿತು. ಎಲ್ಲರನ್ನು ತುಂಬಾ ಗೌರವಿಸುವ ವ್ಯಕ್ತಿ ಅವರು. “ಆಪರೇಶನ್‌ ಅಲಮೇಲಮ್ಮ’ದಲ್ಲಿ ಅನನ್ಯ ಎಂಬ ಟೀಚರ್‌ ಪಾತ್ರ. ತುಂಬಾ ಮಾತನಾಡುವ ಪಾತ್ರವದು. ನೋಡುಗರಿಗೆ ಆ ಪಾತ್ರ ಬೇಗನೇ ಇಷ್ಟವಾಗುತ್ತದೆ. 

2. ಬಹುತೇಕ ಹೊಸಬರ ಜೊತೆ ಸಿನಿಮಾ ಮಾಡುತ್ತಿದ್ದೀರಿ?
– ನನಗೆ ಹೊಸಬರು, ಹಳಬರು ಎಂದಿಲ್ಲ. ಸಿಗುವ ಪಾತ್ರ ಹಾಗೂ ಅದರಲ್ಲಿನ ನನ್ನ ಪರ್‌ಫಾರ್ಮೆನ್ಸ್‌ ಅಷ್ಟೇ ಮುಖ್ಯ. ಮುಖ್ಯವಾಗಿ ನಮ್ಮ ಜೊತೆ ಯಾರು ನಟಿಸುತ್ತಾರೆ, ಅವರೊಂದಿಗೆ ನಮ್ಮ ಕೆಮಿಸ್ಟ್ರಿ ವರ್ಕ್‌ ಆಗುತ್ತಾ ಎಂಬುದು ಮುಖ್ಯ. ಏಕೆಂದರೆ ತೆರೆಮೇಲೆ ಕಾಣೋದು ಕಾಂಬಿನೇಶನ್‌. ಹಾಗಾಗಿ, ನಾವು ನಟಿಸುವವರ ಜೊತೆ ಫ್ರೆಂಡ್ಲಿಯಾಗಿದ್ದರೆ ತೆರೆಮೇಲೂ ಕಾಂಬಿನೇಶನ್‌ ವರ್ಕ್‌ ಆಗುತ್ತೆ ಅನ್ನೋದು ನನ್ನ ನಂಬಿಕೆ. ಅಲ್ಲಿ ಹೊಸಬ, ಸ್ಟಾರ್‌ ಎಂದೇನಿಲ್ಲ.

3. ಹಾಗಾದರೆ ಸ್ಟಾರ್‌ ಸಿನಿಮಾಗಳಲ್ಲಿ ನಟಿಸುವ ಆಸೆ ಇಲ್ವಾ?
– ಯಾರಿಗಿರಲ್ಲ ಹೇಳಿ? ಎಲ್ಲರಿಗೂ ಸ್ಟಾರ್‌ ಸಿನಿಮಾಗಳಲ್ಲಿ ನಟಿಸುವ ಆಸೆ ಇರುತ್ತದೆ. ನನಗೂ ಪುನೀತ್‌, ಸುದೀಪ್‌ ಸೇರಿದಂತೆ ಸ್ಟಾರ್‌ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ಏಕೆಂದರೆ ಸ್ಟಾರ್‌ ಸಿನಿಮಾಗಳ ರೀಚ್‌ ದೊಡ್ಡದಿರುತ್ತದೆ. ಅದು ಪ್ರತಿ ಕಲಾವಿದರ ಕೆರಿಯರ್‌ಗೆ ಪ್ಲಸ್‌ ಆಗುತ್ತದೆ. ಇತ್ತೀಚೆಗೆ ಒಂದು ಸ್ಟಾರ್‌ ಸಿನಿಮಾದ ಆಫ‌ರ್‌ ಸಿಕ್ಕಿತ್ತು. ಕಾರಣಾಂತರಗಳಿಂದ ಅದು ವಕೌìಟ್‌ ಆಗಲಿಲ್ಲ. 

4. ತಮಿಳು ಸಿನಿಮಾದಲ್ಲೂ ಬಿಝಿಯಾಗುತ್ತಿದ್ದೀರಿ?
– ಹೌದು, ಒಂದು ಸಿನಿಮಾವೂ ರಿಲೀಸ್‌ ಆಗುವ ಮುನ್ನ ನನಗೆ ಮೂರು ಸಿನಿಮಾ ಸಿಕ್ಕಿತು. ಖುಷಿಯ ವಿಚಾರ ಎಂದರೆ ಅಲ್ಲೂ ಒಂದಷ್ಟು ವಿಭಿನ್ನ ಪಾತ್ರಗಳು ಸಿಗುತ್ತಿವೆ. ಈಗಾಗಲೇ ಒಂದು ಸಿನಿಮಾ ರಿಲೀಸ್‌ ಆಗಿದ್ದು, ಮೂರು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಕನ್ನಡದಲ್ಲಿ “ಶಾದಿಭಾಗ್ಯ’, “ಗೋಧಾÅ’, “ಆಪರೇಶನ್‌ ಅಲಮೇಲಮ್ಮ’ ಚಿತ್ರಗಳಲ್ಲಿ ನಟಿಸಿದ್ದೇನೆ. ನನಗೆ ಒಂದೇ ಜಾನರ್‌ನ ಸಿನಿಮಾದಲ್ಲಿ ಗುರುತಿಸಿಕೊಳ್ಳಲು ಇಷ್ಟವಿಲ್ಲ. ಏಕೆಂದರೆ ಹಾಗೇನಾದರೂ ಆದರೆ ಜನರಿಗೂ ಬೋರ್‌ ಆಗಿಬಿಡುತ್ತದೆ. ಹಾಗಾಗಿ, ಆದಷ್ಟೂ ವೆರೈಟಿ ಪಾತ್ರಗಳಿಗೆ ಪ್ರಯತ್ನಿಸುತ್ತಿದ್ದೇನೆ. 

Advertisement

5. ಸಿನಿಮಾ ಬಿಟ್ಟು ನೀವು ತುಂಬಾ ಆ್ಯಕ್ಟೀವ್‌ ಆಗಿರುತ್ತೀರಲ್ಲ?
– ಹೌದು, ಸಾಮಾಜಿಕ ಕಾರ್ಯಗಳಲ್ಲಿ ಒಂದಷ್ಟು ತೊಡಗಿಕೊಳ್ಳುತ್ತೇನೆ. ಅನಾವಶ್ಯಕವಾಗಿ ನೀರು, ವಿದ್ಯುತ್‌ ಬಳಸೋದು ನನಗೆ ಇಷ್ಟವಿಲ್ಲ. ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ನನಗೆ ಕಾಳಜಿ ಇದೆ. ನನ್ನ ಕೈಯಿಂದ ಆದ ಬೆಂಬಲ ನೀಡುತ್ತೇನೆ. ಎಲ್ಲೋ ಕೂತು ಸೋಶಿಯಲ್‌ ಮೀಡಿಯಾದಲ್ಲಿ ಬೆಂಬಲ ನೀಡುವ ಬದಲು ಯಾವುದೇ ಒಂದು ಘಟನೆ ನಡೆದಾಗ ಅಲ್ಲಿ ಹೋಗಿ ನಮ್ಮ ಬೆಂಬಲ ತೋರಿಸಿದರೆ ಅದಕ್ಕೊಂದು ಅರ್ಥ ಹಾಗೂ ತೂಕ ಇರುತ್ತದೆ ಎಂದು ನಂಬಿದವಳು ನಾನು.

Advertisement

Udayavani is now on Telegram. Click here to join our channel and stay updated with the latest news.

Next