Advertisement

ಆಪರೇಷನ್‌ ಪ್ರಹಾರ್‌ ಸಕ್ಸಸ್‌: 12 ನಕ್ಸಲರ ಹತ್ಯೆ

03:45 AM Jun 26, 2017 | Team Udayavani |

ರಾಯ್ಪುರ: ಛತ್ತೀಸ್‌ಗಡದ ಸುಕ್ಮಾದಲ್ಲಿ ಸಿಆರ್‌ಪಿಎಫ್ ನಡೆಸಿದ “ಆಪರೇಷನ್‌ ಪ್ರಹಾರ್‌’ಗೆ ಭಾನುವಾರ ಒಂದೇ ದಿನ 12 ಮಂದಿ ನಕ್ಸಲರು ಬಲಿಯಾಗಿದ್ದಾರೆ. ಈ ಮೂಲಕ ತೊಂಡಮರ್ಕಾ ಅರಣ್ಯದಲ್ಲಿ ಅವಿತಿದ್ದ ಮಾವೋವಾದಿಗಳನ್ನು
ಸದೆಬಡಿಯುವ ಅತಿದೊಡ್ಡ ಕಾರ್ಯಾಚರಣೆ ಯಶಸ್ವಿಯಾದಂತಾಗಿದೆ. ಆದರೆ, ಕಾರ್ಯಾಚರಣೆ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದಾರೆ ಎಂದು ರಾಜ್ಯದ ನಕ್ಸಲ್‌ ನಿಗ್ರಹ ಕಾರ್ಯಾಚರಣೆಯ ಹಿರಿಯ ಅಧಿಕಾರಿ ಡಿ.ಎಂ.ಅವಸ್ಥಿ ತಿಳಿಸಿದ್ದಾರೆ. ಏಪ್ರಿಲ್‌ನಲ್ಲಷ್ಟೇ ಸುಕ್ಮಾ ಜಿಲ್ಲೆಯಲ್ಲಿ 25 ಮಂದಿ ಭದ್ರತಾ ಸಿಬ್ಬಂದಿಯನ್ನು ನಕ್ಸಲರು ಹತ್ಯೆಗೈದಿದ್ದರು.

Advertisement

ಸುಕ್ಮಾವು ನಕ್ಸಲರ ಭದ್ರಕೋಟೆಯಾಗಿದ್ದು, ಅದನ್ನು ಒಡೆದು ಅರಣ್ಯದಲ್ಲಿ ಅವಿತಿರುವ ಕೆಂಪು ಉಗ್ರರನ್ನು ಅಟ್ಟಾಡಿಸುವುದು ಯೋಧರ ಉದ್ದೇಶವಾಗಿತ್ತು. ಅದಕ್ಕೆಂದೇ “ಆಪರೇಷನ್‌ ಪ್ರಹಾರ್‌’ ಹೆಸರಿನಲ್ಲಿ ಅತಿದೊಡ್ಡ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಶನಿವಾರ ಆರಂಭವಾದ 56 ಗಂಟೆಗಳ ಅವಧಿಯ ಈ ಕಾರ್ಯಾಚರಣೆಯಲ್ಲಿ 1,500 ಕ್ಕೂ ಹೆಚ್ಚು ಯೋಧರು ಪಾಲ್ಗೊಡಿದ್ದರು. ಸತತ 12 ಗಂಟೆಗಳ ಗುಂಡಿನ ಚಕಮಕಿಯಲ್ಲಿ 12 ಮಂದಿ ಮಾವೋವಾದಿಗಳನ್ನು ಹತ್ಯೆಗೈಯ್ಯಲಾಯಿತು. ಆದರೆ, ಗುಂಡಿನ ದಾಳಿ ಮುಂದುವರಿದಿರುವ ಕಾರಣ ಎಲ್ಲರ ಮೃತದೇಹಗಳನ್ನು ಪತ್ತೆಹಚ್ಚಲು
ಸಾಧ್ಯವಾಗಿಲ್ಲ ಎಂದು ಅವಸ್ಥಿ ತಿಳಿಸಿದ್ದಾರೆ.

ಇದೇ ವೇಳೆ, ಪ್ರತಿಕೂಲ ಹವಾಮಾನ ಇರುವ ಕಾರಣ ಕಾರ್ಯಾಚರಣೆಯಲ್ಲಿ ಗಾಯಗೊಂಡ ಐವರು ಯೋಧರನ್ನು ಹೆಲಿಕಾಪ್ಟರ್‌ ಮೂಲಕ ಚಿಕಿತ್ಸೆಗೆ ಕರೆದೊಯ್ಯಲು ಸಾಧ್ಯವಾಗಿಲ್ಲ. ಹೀಗಾಗಿ, ಅವರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಮೃತ ನಕ್ಸಲರ ಪೈಕಿ ಪೊಲೀಸ್‌
ಅಧಿಕಾರಿಯಂತೆ ವೇಷ ಹಾಕಿಕೊಂಡು ಬರುತ್ತಿದ್ದ ಕೋರ್ಸಾ ಮಹೇಶ್‌ ಕೂಡ ಒಬ್ಬ ಎಂದೂ ಅಧಿಕಾರಿಗಳು ಹೇಳಿದ್ದಾರೆ. ಅವನ ಕೈಯ್ಯಲ್ಲಿದ್ದ ಸೆಲ್ಫ್ ಲೋಡಿಂಗ್‌ ರೈಫ‌ಲ್‌ ಅನ್ನೂ ವಶಕ್ಕೆ ಪಡೆಯಲಾಗಿದೆ.

ನಕ್ಸಲ್‌ ನಿಗ್ರಹಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು 7 ರಾಜ್ಯಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಒಂದು ತಿಂಗಳಲ್ಲೇ ಈ ಕಾರ್ಯಾಚರಣೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next