Advertisement

ಉಡುಪಿ ಜಿಲ್ಲಾ ಪೊಲೀಸರ ಕಾರ್ಯಾಚರಣೆ: ಗಾಂಜಾ ಸಹಿತ ಇಬ್ಬರ ಬಂಧನ

09:13 AM Sep 26, 2019 | Mithun PG |

ಉಡುಪಿ: ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಉಡುಪಿ ಜಿಲ್ಲಾ ಪೊಲೀಸರು, ಅಕ್ರಮವಾಗಿ ದಾಸ್ತಾನು ಇರಿಸಿದ್ದ ಗಾಂಜಾ ಸೇರಿದಂತೆ ಅಂದಾಜು 6 ಲಕ್ಷ ಮೌಲ್ಯದ  ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

Advertisement

ಆರೋಪಿಗಳನ್ನು ಉತ್ತರಪ್ರದೇಶ ಮೂಲದ ಪಿಯೂಷ್ ಅಗರ್‌ವಾಲ್(20 ವರ್ಷ), ರಿಷಬ್ ರಾಜ್‌ಸಿಂಗ್ (21 ವರ್ಷ) ಎಂದು ಗುರುತಿಸಲಾಗಿದೆ.

ಆರೋಪಿಗಳು ಹೆರ್ಗಾ ಗ್ರಾಮದ ಸರಳಬೆಟ್ಟು ಸಮೀಪದ ಮನೆಯೊಂದರಲ್ಲಿ ಕಾನೂನು ಬಾಹಿರವಾಗಿ 3,50,000/- ಮೌಲ್ಯದ  ಗಾಂಜಾ ಮಾರಾಟ ಮಾಡಲು ದಾಸ್ತಾನು ಇರಿಸಿದ್ದರು. ಅಂದಾಜು 300 ರೂಪಾಯಿ ಮೌಲ್ಯದ ತೂಕ ಸಾಧನ, ರೂಪಾಯಿ 50 ರೂ. ಬೆಲೆಬಾಳುವ ಸಣ್ಣ ಸಣ್ಣ ಖಾಲಿ ಪ್ಲಾಸ್ಟಿಕ್ ಚೀಲಗಳು, 26,000 ರೂ. ಬೆಲೆಬಾಳುವ ಮೊಬೈಲ್ ಹ್ಯಾಂಡ್ ಸೆಟ್‌ಗಳು, ಗಾಂಜಾ ಮಾರಾಟ ಮಾಡಿ ಬಂದ ನಗದು ಹಣ ರೂಪಾಯಿ 3,15,000 ಸಹಿತ ಒಟ್ಟು ರೂಪಾಯಿ 6,91,350 ಅಂದಾಜು ಮೌಲ್ಯದ ಸ್ವತ್ತುಗಳನ್ನು ಈ ವೇಳೆ ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next