Advertisement

ಕಡಬ ಪೇಟೆಯಲ್ಲಿ ಕೋವಿಡ್‌ ಅಧಿಕಾರಿಗಳ ಕಾರ್ಯಾಚರಣೆ

12:29 AM Apr 23, 2020 | Sriram |

ಕಡಬ: ಇಲ್ಲಿನ ಪೇಟೆಯಲ್ಲಿ ಎರಡು ದಿನಗಳಿಂದ ಅಂಗಡಿಗಳು ಹೆಚ್ಚು ತೆರೆಯುತ್ತಿರುವುದಲ್ಲದೆ ಮನ ಬಂದಂತೆ ದರ ವಸೂಲಿ ಮಾಡುವುದು ಸಹಿತ ಕದ್ದು ಮುಚ್ಚಿ ಹಾರ್ಡ್‌ವೇರ್‌ , ಇತರ ಸಾಮಗ್ರಿಗಳನ್ನು ಮಾರಾಟ ಮಾಡುವುದು ಕಂಡು ಬಂದಿರುವ ಹಿನ್ನಲೆಯಲ್ಲಿ ಕಡಬ ಕೋವಿಡ್‌ ಕಾರ್ಯಪಡೆ ಎ. 22ರಂದು ಮುಂಜಾನೆಯಿಂದಲೇ ತುರ್ತು ಕಾರ್ಯಾಚರಣೆ ನಡೆಸಿ ನಿಯಮ ಮೀರಿ ವ್ಯಾಪಾರ ಮಾಡು ತ್ತಿರುವ ಅಂಗಡಿ ಮಾಲಕರಿಗೆ ಖಡಕ್‌ ಸೂಚನೆಗಳನ್ನು ನೀಡಿದ್ದು ಕಾನೂನು ಮೀರಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

Advertisement

ಕಡಬ ಕಂದಾಯ ನಿರೀಕ್ಷಕ ಅವೀನ್‌ ರಂಗತ್‌ಮಲೆ, ಕೋವಿಡ್‌ ಅಧಿಕಾರಿ ಮಸ್ತಾನ್‌, ಕಡಬ ಗ್ರಾಮ ಪಂಚಾಯತ್‌ ಅಭಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡ, ಗ್ರಾಮ ಕರಣಿಕ ಹರೀಶ್‌ ಕುಮಾರ್‌, ಸಿಬಂದಿ ಪದ್ಮಯ್ಯ, ಹರೀಶ್‌ ಬೆದ್ರಾಜೆಯವರು ಕಡಬ ಪೇಟೆಯಲ್ಲಿ ಎಲ್ಲ ಅಂಗಡಿಗಳಿಗೆ ತೆರಳಿ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ.

ಕಡಬದಲ್ಲಿ ದಿನಸಿ ಅಂಗಡಿಯ ಒಟ್ಟಿಗೆ ಹಾರ್ಡ್‌ವೇರ್‌ ಸಾಮಗ್ರಿಗಳು ಕೂಡ ಇದ್ದು, ಅಗತ್ಯ ವಸ್ತುಗಳ ಮಾರಾ ಟದ ನೆಪದಲ್ಲಿ ಎಲ್ಲ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಅಲ್ಲಿ ಜನಸಂ ದನಿಯಾಗುತ್ತದೆ ಕನಿಷ್ಠ ಸಾಮಾಜಿಕ ಅಂತರ ಕಾಯುವ ಬಗ್ಗೆಯೂ ಅಂಗಡಿ ಮಾಲಕರು ನೋಡಿಕೊಳ್ಳುತ್ತಿಲ್ಲ. ಒಂದು ತರಕಾರಿ ಅಂಗಡಿಯ ಪರವಾನಿಗೆ ಇದ್ದರೆ ಇನ್ನು ಬೇರೆ ಬೇರೆ ಕಡೆ ರಸ್ತೆ ಬದಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಅಲ್ಲದೆ ಸಾಮಗ್ರಿಯ ದರವನ್ನು ಮನಬಂದಂತೆ ಏರಿಸಿರುವುದು ಕೆಲವು ಅಂಗಡಿಗಳಲಿ ನಡೆಯುತ್ತಿತ್ತು. ಈ ಬಗ್ಗೆ ವ್ಯಾಪಾಕ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ದರ ಪಟ್ಟಿ ಅಳವಡಿಸಿ
ಸಾಮಗ್ರಿಗಳಿಗೆ ನಿಗದಿತ ಹಾಗೂ ಮಿತ ದರದಲ್ಲಿ ಸಾಮಗ್ರಿಗಳನ್ನು ಮಾರಾಟ ಮಾಡಬೇಕು. ಅಲ್ಲದೆ ಅಂಗಡಿಯ ಎದುರು ಎಲ್ಲ ಸಾಮಗ್ರಿಗಳ ದರ ಪಟ್ಟಿಯನ್ನು ಅಳವಡಿಸಬೇಕು. ಹಾರ್ಡ್‌ವೇರ್‌ ಸಾಮಗ್ರಿಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಯಾವುದೇ ವ್ಯಾಪಾರ ಮಾಡಬೇಕಾದರೆ ಪಂಚಾಯತ್‌ನಿಂದ ಈ ಹಿಂದೆ ಅನುಮತಿ ಪಡೆದಿರಬೇಕು (ಅಂಗಡಿ ಲೈಸನ್ಸ್‌). ಅಲ್ಲದೆ ಅವಧಿ ಮೀರಿದ ಸಾಮಗ್ರಿಗಳನ್ನು ಮಾರಾಟ ಮಾಡಬಾರದು ಎಂಬಿತ್ಯಾದಿ ವಿಷಯಗಳ ಬಗ್ಗೆ ಕಾರ್ಯಪಡೆ ಸಿಬಂದಿ ಖಡಕ್‌ ಸೂಚನೆ ನೀಡಿದ್ದಾರೆ. ಸಾರ್ವಜನಿಕರು ಅಂತರ ಕಾಯ್ದುಕೊಳ್ಳುವಂತೆ ಸ್ವತಃ ಅಂಗಡಿ ಮಾಲಕರು ನೋಡಿಕೊಳ್ಳಬೇಕು ಎಂಬ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next