Advertisement

ಅಂಕೋಲಾದಲ್ಲಿ ಆಪರೇಷನ್ ಮಂಗ: ಎರಡನೇ ದಿನವೂ ವಿಫಲ

09:24 PM Apr 27, 2022 | Team Udayavani |

ಅಂಕೋಲಾ : ತಾಲೂಕಿನ ಬೊಬ್ರವಾಡದಲ್ಲಿ ಸಾರ್ವಜನಿಕರಿಗೆ ಕಾಟ ಕೊಡುತ್ತಿರುವ ಕೋತಿಯನ್ನು ಹಿಡಿಯಲು ಅರಣ್ಯ ಇಲಾಖೆಯು ಕೈಗೊಂಡ ಆಪರೇಶನ್ ಮಂಗ ಕಾರ್ಯಾಚರಣೆ ಎರಡನೆ ದಿನವೂ ವಿಫಲವಾಗಿದೆ.

Advertisement

ದಾಳಿ ಮಾಡಿ, ಉಪಟಳ ನೀಡುತ್ತಾ ಜನರಲ್ಲಿ ಭೀತಿ ಹುಟ್ಟಿಸಿದ್ದ ಕೋತಿಯನ್ನು ಹಿಡಿಯಲು ಅರಣ್ಯ ಇಲಾಖೆ ಹಾಗೂ ಅರವಳಿಕೆ ತಜ್ಞರು ಸಾರ್ವಜನಿಕರ ಸಹಕಾರದೊಂದಿಗೆ ಎಷ್ಟೇ ತಂತ್ರಗಾರಿಕೆಯನ್ನು ಪ್ರಯೋಗಿಸಿದರೂ ಚಾಣಾಕ್ಷ ವಾನರ ತಪ್ಪಿಸಿಕೊಳ್ಳುತ್ತಿದೆ. ಮಂಗಳವಾರ ಇಡೀ ದಿನ ಪ್ರಯತ್ನಿಸಿ ವಿಫಲವಾದ ತಂಡ ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಕಾರ್ಯಾಚರಣೆ ನಡೆಸಿತು. ಅರವಳಿಕೆ ಗನ್ ನಿಂದ ಶೂಟ್ ಮಾಡಲು ನಿರ್ದಿಷ್ಟ ಅಂತರದಲ್ಲಿ ಸಿಗಬೇಕು, ಆದರೆ ವಾನರ ಗನ್ ನೋಡುತ್ತಲೇ ಮರದ ಎತ್ತರಕ್ಕೆ ಏರುವುದು ಅಥವಾ ಸಂದಿಗ್ಧ ಸ್ಥಳದಲ್ಲಿ ಅಡಗಿಕೊಳ್ಳುತ್ತಿದೆ. ಗುರುವಾರ ಹೊರ ಜಿಲ್ಲೆಗಳಿಂದ ಇನ್ನೊಂದು ತಂಡ ಬರುತ್ತಿದೆ ಎನ್ನಲಾಗಿದೆ. ಮೂರನೇ ದಿನದ ಕಾರ್ಯಾಚರಣೆಯಲ್ಲಿ ಯಶ ಸಿಕ್ಕರೆ ಆತಂಕದಲ್ಲಿರುವ ಬೊಬ್ರುವಾಡದ ಜನತೆ ನಿಟ್ಟುಸಿರು ಬಿಡಬಹುದು.

ಈಗಾಗಲೇ ಮಂಗನ ಕಾಟದಿಂದ ಸುಮಾರು 10ಹೆಚ್ಚು ಜನರು ಗಾಯಗೊಂಡಿದ್ದಾರೆ. ಬುಧವಾರ ವೃದ್ದೆಯ ಮೇಲೆ ಎರಗಿದ ಕೋತಿ ವೃದ್ದೆಯನ್ನು ಕೆಡವಿ ಬಲವಾಗಿ ಗಾಯಗೊಳಿಸಿದೆ. ತಕ್ಷಣ ವೃದ್ಧೆಯನ್ನು ತಾಲ್ಲೂಕು ಆಸ್ಷತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next