Advertisement
ಕಾಂಗ್ರೆಸ್ನ 50 ಶಾಸಕರನ್ನು ತಲಾ 50 ಕೋಟಿ ರೂ. ಕೊಟ್ಟು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದರು. ಇದನ್ನು ಕೆಲ ಸಚಿವರು ಸಮರ್ಥನೆ ಕೂಡ ಮಾಡಿಕೊಂಡಿದ್ದರು. ಏತನ್ಮಧ್ಯೆ, ಅದು 50 ಕೋಟಿ ರೂ. ಅಲ್ಲ, 100 ಕೋಟಿ ರೂ. ಎಂದು ಕಾಂಗ್ರೆಸ್ ಶಾಸಕ ರವಿ ಗಣಿಗ ಆಪಾದಿಸಿದ್ದರು. ಇಬ್ಬರು ಶಾಸಕರ ಹೆಸರನ್ನೂ ರವಿ ಗಣಿಗ ಹೇಳಿದ್ದರು. ಆದರೆ, ಈ ಇಬ್ಬರು ಶಾಸಕರು “ತಮಗೆ ಬಿಜೆಪಿಯಿಂದ ಅಂತಹ ಯಾವುದೇ ಆಫರ್ ಬಂದಿಲ್ಲ’ ಎಂದಿದ್ದಾರೆ.
Related Articles
Advertisement
ಪತ್ರಕರ್ತರೊಂದಿಗೆ ಮಾತನಾಡಿ, ಗಣಿಗ ರವಿ ಕುಮಾರ್ ಬಳಿ ದಾಖಲೆಗಳೇನಾದರೂ ಇದ್ದರೆ ಬಿಡುಗಡೆ ಮಾಡಲಿ. ನನಗೆ ದಾಖಲೆ ಕುರಿತು ಯಾವುದೇ ಮಾಹಿತಿಯೂ ಇಲ್ಲ. ಬಿಜೆಪಿ ಮೊದಲಿನಿಂದ ಕಾಂಗ್ರೆಸ್ ಸರಕಾರವನ್ನು ಬೀಳಿಸುವ ಉದ್ದೇಶವನ್ನು ಹೊಂದಿದೆ. ಆದರೆ ಅದ್ಯಾವುದೂ ಸಾಧ್ಯವಾಗುವುದಿಲ್ಲ ಎಂದರು.
ನ್ಯಾ| ಮೈಕಲ್ ಡಿ’ಕುನ್ಹಾ ಅವರ ವರದಿ ಕೋವಿಡ್ ಸಂದರ್ಭ ಹಿಂದಿನ ಬಿಜೆಪಿ ಸರಕಾರ ಯಾವ ರೀತಿಯಾಗಿ ಲೂಟಿ ಮಾಡಿದೆ ಎನ್ನುವುದರ ಮಾಹಿತಿ ನೀಡಿದೆ. ಈ ಅಂಶಗಳು ತಾರ್ಕಿಕ ಹಂತಕ್ಕೆ ಹೋಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಅಂದಿನ ಸಚಿವರು, ಮುಖ್ಯಮಂತ್ರಿಗಳ ಅನುಮೋದನೆ ಇಲ್ಲದೇ ಇಂತಹ ತೀರ್ಮಾನಗಳನ್ನು ಯಾರು ತೆಗೆದುಕೊಳ್ಳಲು ಸಾಧ್ಯವಿಲ್ಲ. ರಾಜ್ಯಕ್ಕೆ ಮಾಡಿರುವ ಮೋಸಕ್ಕೆ ಕಾನೂನು ಪ್ರಕಾರ ತಕ್ಕೆ ಶಿಕ್ಷೆ ನೀಡಲಾಗುತ್ತದೆ ಎಂದರು.