Advertisement
ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬಾಗಲಕೋಟೆ, ಕಲುºರ್ಗಿ ಮತ್ತು ದಾವಣಗೆರೆಯನ್ನು ಕೇಂದ್ರವಾಗಿರಿಸಿ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ಈ ಕೇಂದ್ರಗಳು ಸುತ್ತಲಿನ ಜಿಲ್ಲೆಗಳ ಲವ್ ಜೆಹಾದ್ ಸಂಬಂಧಿ ದೂರುಗಳನ್ನು ನಿರ್ವಹಿಸ ಲಿವೆ. ಸಹಾಯವಾಣಿಯ ಸಂಖ್ಯೆಯನ್ನೂ ಶೀಘ್ರ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಈ ಚಿಂತನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಇದಕ್ಕೆಂದೇ ಆಯಾ ಜಿಲ್ಲೆಗಳಲ್ಲಿ ವಕೀಲರು, ಕೌನ್ಸೆಲಿಂಗ್ ತಜ್ಞರು, ನಿವೃತ್ತ ಪೊಲೀಸ್ ಅಧಿಕಾರಿಗಳಿರುವ ತಂಡ ಕಾರ್ಯನಿರ್ವಹಿಸಲಿದೆ. ಲವ್ ಜೆಹಾದ್ ಜಾಲದಲ್ಲಿ ಸಿಕ್ಕಿ ಬೀಳುವಂತಹ ಯುವತಿಯರ ಗುರುತನ್ನು ಗುಪ್ತವಾಗಿರಿಸಿ ಜಾಲದಿಂದ ಹೊರತರಲು ಶ್ರೀರಾಮ ಸೇನೆ ಕೆಲಸ ಮಾಡಲಿದೆ. ಈಗಾಗಲೇ ನಮಗೆ ದೂರುಗಳು ಬಂದಿದ್ದು, ಅವುಗಳನ್ನು ಪರಿಹರಿಸಿಕೊಟ್ಟಿದ್ದೇವೆ. ಅನೇಕ ಮಂದಿ ದೂರುಕೊಡಲು ಇಚ್ಛಿಸಿದರೂ ಮುಂದೆಬರಲು ಹೆದರುತ್ತಾರೆ. ಅಂಥವರಿಗೆ ಈ ಸಹಾಯವಾಣಿ ನೆರವಾಗಲಿದೆ ಎನ್ನುವುದು ರಾಮಸೇನೆಯವರ ಹೇಳಿಕೆ.
Related Articles
2022ರಲ್ಲಿ ದ.ಕ. ಜಿಲ್ಲೆಗೆ ಸೀಮಿತವಾಗಿ ಇಂಥದ್ದೇ ಸಹಾಯವಾಣಿ ಆರಂಭಿಸಲಾಗಿತ್ತು. ಅದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಬಜರಂಗದಳ ಮುಖಂಡರು ತಿಳಿಸಿದ್ದಾರೆ. ಅಂತರ್ ಧರ್ಮೀಯ ಸಂಬಂಧಗಳು ಕಂಡುಬಂದಾಗ, ಹಿಂದೂ ಯುವತಿಯರು, ವಿದ್ಯಾರ್ಥಿನಿಯರನ್ನು ವಂಚಿಸುವುದು ಕಂಡುಬಂದಾಗ ನೆರೆಕರೆಯವರು, ಯುವತಿಯ ಹೆತ್ತವರು ನಮ್ಮನ್ನು ಸಂಪರ್ಕಿಸಿದ್ದಾರೆ. ಬಹುತೇಕ ಪ್ರಕರಣ ಗಳಲ್ಲಿ ಮಾತುಕತೆ, ಕೌನ್ಸೆಲಿಂಗ್ ಮೂಲಕವೇ ಇತ್ಯರ್ಥಪಡಿಸುತ್ತಿದ್ದೇವೆ ಎಂದು ಬಜರಂಗದಳ ಮುಖಂಡ ಪುನೀತ್ ಅತ್ತಾವರ ತಿಳಿಸಿದ್ದಾರೆ.
Advertisement
ಈ ಸಹಾಯವಾಣಿಯನ್ನು ಕಾನೂನು ಬದ್ಧವಾಗಿ, ಸುವ್ಯವಸ್ಥಿತವಾಗಿ ಮಾಡುತ್ತೇವೆ. ಯಾರ ವಿರುದ್ಧವಾಗಿ ಅಲ್ಲ. ಕೇವಲ ಹಿಂದೂ ಸೋದರಿಯರ ರಕ್ಷಣೆಗೆ ಈ ಕ್ರಮ. ಅವರಲ್ಲಿ ಅರಿವು ಮೂಡಿಸಬೇಕಾಗಿದೆ. ಕೆಲವರು ಈ ಸಂಚಿಗೆ ಸಿಲುಕಿ ಹೊರಗೆ ಬರಲಾಗುವುದಿಲ್ಲ. ಅಂಥವರನ್ನು ರಕ್ಷಿಸುವ ಗುರಿ ಇದೆ.– ಆನಂದ ಶೆಟ್ಟಿ ಅಡ್ಯಾರ್, ಶ್ರೀರಾಮ ಸೇನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ