ಪುತ್ತೂರು: ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ಕಾರನ್ನು ಬೆನ್ನಟ್ಟಿ ವಶಕ್ಕೆ ಪಡೆದಿರುವ ಪುತ್ತೂರು ನಗರ ಠಾಣೆಯ ಪೊಲೀಸರು, ಸುಮಾರು 700 ಕಿ. ಗ್ರಾಂ. ಮಾಂಸ ಸಹಿತ ಮೂವರನ್ನು ಬಂಧಿಸಿದ್ದಾರೆ.
ಕುದ್ರೋಳಿ ಕರ್ಬಲ ರಸ್ತೆಯ ಮುನಿರಾ ಮಂಜಿಲ್ ನಿವಾಸಿ ಮುಸ್ತಾಕ್ (50), ಕಲ್ಲಡ್ಕ ಗೋಳ್ತ ಮಜಲು ನಿವಾಸಿ ತೌಫೀಕ್ (26) ಹಾಗೂ ಕಲ್ಲಡ್ಕ -ವಿಟ್ಲ ರಸ್ತೆ ನಿವಾಸಿ ಮಹಮ್ಮದ್ ಕಬೀರ್ (40) ಬಂಧಿತರು.
ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಬಿಳಿ ಬಣ್ಣದ ಮಹೇಂದ್ರ ಝೈಲೋ ಕಾರಿನಲ್ಲಿ ದನದ ಮಾಂಸವನ್ನು ಸಾಗಿಸುತ್ತಿರುವ ಮಾಹಿತಿ ಮೇರೆಗೆ ನಗರ ಠಾಣೆಯ ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ ಹಾಗೂ ಸಿಬಂದಿ ಕೆಮ್ಮಾಯಿ ಸಮೀಪ ಕಾದು ಕುಳಿತಿದ್ದರು. ಆಗ ಬಂದ ಶಂಕಿತ ಕಾರನ್ನು ನಿಲ್ಲಿಸುವಂತೆ ಪೊಲೀಸರು ಸೂಚನೆಯನ್ನು ಧಿಕ್ಕರಿಸಿ ಆರೋಪಿಗಳು ಅತಿ ವೇಗದಿಂದ ಪುತ್ತೂರು ನಗರದ ಕಡೆಗೆ ಸಾಗಿದರು.
ಕೂಡಲೇ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿದ್ದು, ಅದನ್ನು ಮಹಮ್ಮಾಯಿ ಟೆಂಪಲ್ ರಸ್ತೆಯಿಂದ ಪರ್ಲಡ್ಕಕ್ಕೆ ಹೋಗುವ ರಸ್ತೆಯ ಡಿ.ಜಿ. ಭಟ್ ಕಾಂಪೌಂಡ್ ಬಳಿಯಲ್ಲಿ ತಡೆಯುವಲ್ಲಿ ಸಫಲರಾದರು. ಪರಿಶೀಲಿಸಿದಾಗ ದನದ ಮಾಂಸ ಪತ್ತೆಯಾಯಿತು. ಅದನ್ನು ಬೇಲೂರಿನಿಂದ ಮಂಗಳೂರಿಗೆ ಸಾಗಿಸಲಾಗುತ್ತಿತ್ತು ಹಾಗೂ ಉಪ್ಪಿ ನಂಗಡಿಯ ಬೊಳ್ಳಾರಿನಲ್ಲಿ ಪೊಲೀಸ್ ತಪಾ ಸಣೆ ಇರುವ ಮಾಹಿತಿ ಪಡೆದು ನೆಕ್ಕಿಲಾಡಿಯಿಂದ ಪುತ್ತೂರಿಗೆ ಬಂದು ಮಂಗಳೂರಿಗೆ ಹೋಗಲು ಯತ್ನಿಸಿದ್ದೆವು ಎಂದು ಆರೋಪಿಗಳು ತಿಳಿಸಿದ್ದಾರೆ.
ವಶಕ್ಕೆ ಪಡೆಯಲಾದ ವಸ್ತುಗಳು
ಕಾರಿನೊಳಗಿದ್ದ ಸುಮಾರು 1.25 ಲ.ರೂ. ಮೌಲ್ಯದ 700 ಕಿ. ಗ್ರಾಂ. ದನದ ಮಾಂಸ ಮತ್ತು 5 ಲ.ರೂ. ಮೌಲ್ಯದ ಝೈಲೋ ಕಾರು, ಆರೋಪಿ ಗಳಲ್ಲಿದ್ದ 3 ಮೊಬೈಲ್ ಫೋನ್, ಮಾಂಸವನ್ನು ಪ್ಯಾಕ್ ಮಾಡಲು ಬಳಸಿದ್ದ ಎರಡು ಪ್ಲಾಸ್ಟಿಕ್ ಟಾರ್ಪಾಲ್ ಸಹಿತ ಒಟ್ಟು 6,35,500 ರೂ. ಮೌಲ್ಯದ ಸೊತ್ತನ್ನು ವಶಕ್ಕೆ ಪಡೆಯಲಾಗಿದೆ.
ಜಾನುವಾರುಗಳನ್ನು ಕದ್ದು ಮಾಂಸ ಮಾಡಿ ಸಾಗಿಸುತ್ತಿದ್ದರು. ವಾಹನದ ಆರ್‌ಸಿ ನಿಯಮ ಉಲ್ಲಂಘಿ ಸಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿರುವುದು ಸಹಿತ ಹಲವು ಆರೋಪ ಹೊರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.