Advertisement

“ಸೇವಾಪರತೆಯಿಂದ ವಿದ್ಯುತ್‌ ಗುತ್ತಿಗೆದಾರರು ಮಾದರಿ’

07:25 AM Aug 13, 2017 | |

ಕಾರ್ಕಳ: ವೃತ್ತಿ ಬದುಕಿನ ಜೊತೆ ಸಮಾಜದ ಕಷ್ಟ ಸಂಕಷ್ಟಗಳಿಗೆ ಉತ್ತಮ ಸ್ಪಂದಿಸುವುದರಿಂದ ಕಾರ್ಕಳ ವಿದ್ಯುತ್‌ ಗುತ್ತಿಗೆದಾರರು ಭಿನ್ನವಾಗಿ ತಮ್ಮನ್ನು ಪ್ರಸ್ತುತಪಡಿಸಿಕೊಂಡಿದ್ದಾರೆ. 

Advertisement

ಜನಸ್ನೇಹಿಯಾಗಿ ಸೇವಾಪರತೆಯಿಂದ ಮಾದರಿಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ವಿದ್ಯುತ್‌ ಗುತ್ತಿಗೆದಾರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಎಂ. ನಾಗರಾಜ್‌ ರಾವ್‌ ಹೇಳಿದ್ದಾರೆ.

ಹೊಟೇಲ್‌ ಪ್ರಕಾಶ್‌ನ ಸಂಭ್ರಮ ಸಭಾಭವನದಲ್ಲಿ ಇತ್ತೀಚೆಗೆ ನಡೆದ ವಿದ್ಯುತ್‌ ಗುತ್ತಿಗೆದಾರ ಸಂಘ ಕಾರ್ಕಳ, ಇದರ ವಾರ್ಷಿಕ ಮಹಾಸಭೆಯನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಗುಣಮಟ್ಟದ ಸೇವೆ ಮತ್ತು ವ್ಯಾವಹಾರಿಕ ಪ್ರಾಮಾಣಿಕತೆಯಿಂದ ಅಪವಾದವಿಲ್ಲದಂತೆ ಸದ್ದಿಲ್ಲದೇ ಗುತ್ತಿಗೆದಾರರು ಸುದ್ದಿಯಾಗಿದ್ದಾರೆ. ಗುತ್ತಿಗೆದಾರ ಸಂಘಟನೆ ನಿಜ ಅರ್ಥದಲ್ಲಿ ಒಂದು ಸೇವಾ ಸಂಘಟನೆಯಾಗಿ ಕ್ರಿಯಾಶೀಲವಾಗಿದೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮೆಸ್ಕಾಂ ಸಹ ಕಾರ್ಯ ನಿರ್ವಾಹಕ ಅಭಿಯಂತರ ನಾರಾಯಣ ನಾಯ್ಕ, ಸಹಾಯಕ ಎಂಜಿನಿಯರ್‌ ಶಿಲ್ಪಾ ಎಸ್‌.ಶೆಟ್ಟಿ ,ಜಿಲ್ಲಾ ಗುತ್ತಿಗೆದಾರ ಸಂಘದ ಉಪಾಧ್ಯಕ್ಷ ಶ್ರೀಕಾಂತ್‌ ಶೆಣೆ„, ಜಿಲ್ಲಾ ಜೊತೆ ಕಾರ್ಯದರ್ಶಿ ರಮಾನಂದ ಪೂಜಾರಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಉದಯ್‌ ಕುಮಾರ್‌ ಶುಭ ಹಾರೈಸಿದರು.

Advertisement

ಕಾರ್ಕಳ ತಾ|ಸಮಿತಿಯ ಅಧ್ಯಕ್ಷ ರಿಚಾರ್ಡ್‌ ಮಿರಾಂಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಮಾಜಿ ಅಧ್ಯಕ್ಷರುಗಳು ಸಮಾಜ ಸೇವಾ ಚಟುವಟಿಕೆಗಳ ಮುಖಾಂತರ ಸಂಘಕ್ಕೆ ಉತ್ತಮ ಹೆಸರು ತಂದು ಕೊಟ್ಟಿದ್ದಾರೆ. ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಪ್ರಾಮಾಣಿಕ ರಾಗಿ ನಿರ್ವಹಿಸಲಾಗುವುದು ಎಂದರು.

ತಾಲೂಕು ಉಪಾಧ್ಯಕ್ಷ ಸುರೇಶ್‌ ಶೆಟ್ಟಿ, ಕಾರ್ಯದರ್ಶಿ ಅನಿಲ್‌ ಎಸ್‌ ಪೂಜಾರಿ, ಕೋಶಾಧಿಕಾರಿ ಅಶೋಕ್‌ ಸುವರ್ಣ, ಜೊತೆ ಕಾರ್ಯದರ್ಶಿ ಸತ್ಯ ಕುಮಾರ್‌ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಗುತ್ತಿಗೆದಾರ ಶುಭಕರ ಕೆ. ಅವರನ್ನು ಸಮ್ಮಾನಿಸಲಾಯಿತು.

ತಾಲೂಕಿನ 12 ಅತ್ಯಂತ ಬಡ ಕುಟುಂಬ ಗಳನ್ನು ಗುರುತಿಸಿ, ಅವರ ಮನೆಗಳಿಗೆ ಉಚಿತ ವಿದ್ಯುತ್‌ ಸಂಪರ್ಕ ಕಲ್ಪಿಸಲಾಯಿತು. 

ಎಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯುತ್‌ ಗುತ್ತಿಗೆದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರದೊಂದಿಗೆ ಸಮ್ಮಾನಿಸಲಾಯಿತು. ದಿನೇಶ್‌ ನಾಯಕ್‌ ಕಡ್ತಲ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next