Advertisement
ಪುಲ್ವಾಮಾ ದಾಳಿಯ ಹೊಣೆ ಹೊತ್ತ ಜೈಶ್ ಎ ಮೊಹಮ್ಮದ್ ಉಗ್ರರ ನೆಲೆಗಳನ್ನು ವಾಯುಪಡೆಯ ಮಿರೇಜ್ 2000 ಯುದ್ಧ ವಿಮಾನಗಳು ಉಡಾಯಿಸಿದ್ದವು. ಈ ದಾಳಿ ನಡೆಸುವುದಕ್ಕಾಗಿ ವಾಯುಪಡೆ ಯುದ್ಧ ವಿಮಾನಗಳು ಭಾರತ ಪಾಕಿಸ್ಥಾನ ಗಡಿಯನ್ನು ದಾಟಿ ಪಾಕಿಸ್ಥಾನದ ಭಾಗಕ್ಕೆ ತೆರಳಿದ್ದವು. ಇಸ್ರೇಲ್ ನಿರ್ಮಿತ ಸ್ಪೈಸ್ ಕ್ಷಿಪಣಿಗಳನ್ನು ಉಗ್ರರ ನೆಲೆ ಉಡಾವಣೆ ಮಾಡಲು ಬಳಸಲಾಗಿತ್ತು. ಅದರ ಮರುದಿನ ನಡೆದ ಕದನದಲ್ಲಿ ಭಾರತದ ಮಿಗ್ ವಿಮಾನ ಹಾಗೂ ಪಾಕಿಸ್ಥಾನದ ಎಫ್ 16 ಯುದ್ಧ ವಿಮಾನವನ್ನು ಪರಸ್ಪರ ದೇಶಗಳು ಹೊಡೆದುರುಳಿಸಿದ್ದವು.
ಉರಿ ಸೇನಾ ನೆಲೆಯ ಮೇಲೆ ಉಗ್ರರು ನಡೆಸಿದ ದಾಳಿಗೆ ಭದ್ರತಾ ವೈಫಲ್ಯವೇ ಕಾರಣ ಎಂದು ಕಂಡುಕೊಂಡಿರುವ ರಕ್ಷಣಾ ಇಲಾಖೆ ಈ ಸೇನಾ ನೆಲೆಯ ಕಮಾಂಡರ್ ಅನ್ನು ಮನೆಗೆ ಕಳುಹಿ ಸಲು ನಿರ್ಧರಿಸಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಜಮ್ಮು ಕಾಶ್ಮೀರದ ಸುಂಜುವಾನ್ ಮತ್ತು ನಗ್ರೋಟಾ ಸೇನಾ ಕ್ಯಾಂಪ್‌ನ ಕಮಾಂಡರ್‌ಗಳನ್ನೂ ಹೊಸ ಸರಕಾರ ಅಸ್ತಿತ್ವಕ್ಕೆ ಬರುತ್ತಿ ದ್ದಂತೆಯೇ ಮನೆಗೆ ಕಳುಹಿಸಲು ಸೂಚಿಸ ಲಾಗಿದೆ. ಈ ಸಂಬಂಧ ಸರಕಾರ ತನ್ನ ವರದಿಯನ್ನು ಸೇನೆಗೆ ರವಾನಿಸಿದೆ. ಇವರಿಗೆ ಕಡ್ಡಾಯ ನಿವೃತ್ತಿ ವಿಧಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 2016ರಲ್ಲಿ ಉರಿ, ಸುಂಜುವಾನ್ ಹಾಗೂ ನಗ್ರೋಟಾದಲ್ಲಿ ನಡೆದ ದಾಳಿಯಲ್ಲಿ ಒಟ್ಟು 36 ಯೋಧರು ಹುತಾತ್ಮರಾಗಿದ್ದರು.