ನವದೆಹಲಿ: 18 ನೇಪಾಳ ಪ್ರಜೆಗಳು ಸೇರಿದಂತೆ 286 ಪ್ರಯಾಣಿಕರೊಂದಿಗೆ ಟೆಲ್ ಅವಿವ್‌ನಿಂದ ಸ್ಪೈಸ್‌ಜೆಟ್ ವಿಮಾನ ಮಂಗಳವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
ಉಗ್ರಗಾಮಿ ಗುಂಪು ಹಮಾಸ್‌ನೊಂದಿಗೆ ತೀವ್ರ ಸಂಘರ್ಷ ನಡೆಸುತ್ತಿರುವ ಇಸ್ರೇಲ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಉದ್ದೇಶದಿಂದ ಆಪರೇಷನ್ ಅಜಯ್ ಕಾರ್ಯಾಚರಣೆಯನ್ನು ಭಾರತ ಮಾಡಿತ್ತು ಇದರ ಅಡಿಯಲ್ಲಿ ಇಸ್ರೇಲ್ ನೊಂದ ಭಾರತೀಯರನ್ನು ಹೊತ್ತ ಐದನೇ ವಿಮಾನ ದೆಹಲಿಗೆ ಬಂದಿದೆ.
ಟ್ವಿಟರ್ ‘X’ ನಲ್ಲಿ ತ್ವಯೇತ್ ಮಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಆಪರೇಷನ್ ಅಜಯ್ ಅಡಿಯಲ್ಲಿ ಐದನೇ ವಿಮಾನದಲ್ಲಿ 18 ನೇಪಾಳದ ಪ್ರಜೆಗಳು ಸೇರಿದಂತೆ 286 ಪ್ರಯಾಣಿಕರು ಆಗಮಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Kundara Johny: ಹೃದಯಾಘಾತದಿಂದ ಮಲಯಾಳಂ ನಟ ಕುಂದರ ಜಾನಿ ನಿಧನ