Advertisement

ಉಡುಪಿ ನಗರ ನಿಷೇಧಿತ ಪ್ಲಾಸ್ಟಿಕ್‌ ಮಾರಾಟ ವಿರುದ್ಧ ಕಾರ್ಯಾಚರಣೆ

10:10 AM Sep 27, 2019 | sudhir |

ಉಡುಪಿ: ನಿಷೇಧಿತ ಪ್ಲಾಸ್ಟಿಕ್‌ ಪರಿಕರಗಳ ಮಾರಾಟ ವಿರುದ್ಧ ಉಡುಪಿ ನಗರಸಭೆಯ ಆಯುಕ್ತರ ಆನಂದ ಸಿ. ಕಲ್ಲೋಳಿಕರ್‌ ಅವರ ನೇತೃತ್ವದಲ್ಲಿ ಅಧಿಕಾರಿಗಳು ಬುಧವಾರ ಕಾರ್ಯಾಚರಣೆ ಆರಂಭಿಸಿದ್ದಾರೆ.

Advertisement

ಆದಿಉಡುಪಿ ಸಂತೆ ಮಾರ್ಕೆಟ್‌, ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಸಮೀಪದ ರಖಂ ಮಾರಾಟ ಅಂಗಡಿ, ಹೂವಿನ ಅಂಗಡಿ ಸೇರಿದಂತೆ ಹಲವೆಡೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಸುಮಾರು 190 ಕೆಜಿ ನಿಷೇಧಿತ
ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡಿದೆ. ಇದರಲ್ಲಿ ಕ್ಯಾರಿಬ್ಯಾಗ್‌, ಸ್ಟ್ರಾ, ಪ್ಲಾಸ್ಟಿಕ್‌ ಚಮಚ ಮೊದಲಾದವು ಸೇರಿವೆ.

ಅ.2ರಿಂದ ದಂಡ
“ಸದ್ಯ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು ಎಚ್ಚರಿಕೆ, ತಿಳಿವಳಿಕೆ ನೀಡುತ್ತಿದ್ದೇವೆ. ಅ.2ರ ಅನಂತರ ದಂಡ ವಸೂಲಿ ಆರಂಭಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಆರೋಗ್ಯ ಅಧಿಕಾರಿ ಕರುಣಾಕರ್‌, ಆರೋಗ್ಯ ನಿರೀಕ್ಷಕ ಪಾಂಡುರಂಗ, ಕಂದಾಯ ನಿರೀಕ್ಷಕ ಧನಂಜಯ್‌, ಅಧಿಕಾರಿಗಳಾದ ಆನಂದ್‌, ಪ್ರಸನ್ನ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next