Advertisement

ನಮ್ಮ ಅಪ್ಪಾಜಿ ಕ್ಯಾಂಟೀನ್‌ಗೆ ಕಾರ್ಯಾರಂಭ

11:45 AM Aug 03, 2017 | Team Udayavani |

ಬೆಂಗಳೂರು: ಹನುಮಂತನಗರದಲ್ಲಿ ನೂತನವಾಗಿ ಆರಂಭವಾಗಿರುವ “ನಮ್ಮ ಅಪ್ಪಾಜಿ ಕ್ಯಾಂಟೀನ್‌’ಗೆ ಸ್ಪಟಿಕಪುರಿ ಮಠದ ನಂಜಾಧೂತ ಸ್ವಾಮೀಜಿ ಬುಧವಾರ ಚಾಲನೆ ನೀಡಿದರು. ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಅವರು ಆರಂಭಿಸಿರುವ ಕ್ಯಾಂಟೀನ್‌ನಲ್ಲಿ 5 ರೂ. ದರದಲ್ಲಿ ಇಡ್ಲಿ- ವಡೆ, ಖಾರಾಬಾತ್‌, ಕೇಸರಿಬಾತ್‌, 3 ರೂ.ಗೆ ಕಾಫಿ- ಟೀ, 10 ರೂ.ಗೆ ಮುದ್ದೆ- ಬಸ್ಸಾರು, ಅನ್ನ- ಸಾಂಬಾರು ಹಾಗೂ ರೈಸ್‌ಬಾತ್‌ ವಿತರಿಸಲಾಗುತ್ತದೆ.

Advertisement

“ನಮ್ಮ ಅಪ್ಪಾಜಿ ಕ್ಯಾಂಟೀನ್‌’ಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಪತ್ನಿ ಚೆನ್ನಮ್ಮ, ಮಾಜಿ ಸಚಿವ ಬಸವರಾಜ ಹೊರಟ್ಟಿ, ಉಪಮೇಯರ್‌ ಆನಂದ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next