Advertisement
ಲಾಭಗಳೇನು?ಆನ್‌ಲೈನ್ ಶಿಕ್ಷಣ ಬಂದ ಅನಂತರದಿಂದ ವಿದ್ಯಾರ್ಥಿಗಳು ಸಂದರ್ಭಕ್ಕೆ ತಕ್ಕಂತೆ ಅಪ್‌ಡೇಟ್ ಆಗಿರುತ್ತಾರೆ. ತಮ್ಮ ಪಠ್ಯದ ಸಂಗತಿಗಳನ್ನು ವಿದ್ಯಾರ್ಥಿಗಳು ವಿವಿಧ ಇಂಟರ್‌ನೆಟ್ ಸಂಪನ್ಮೂಲಗಳಿಂದ ಓದಿ ತಿಳಿಯುತ್ತಾರೆ. ಈ ‘ಫರ್ದರ್ ರೆಫರೆನ್ಸ್’ ಅಥವ ಹೆಚ್ಚಿನ ಓದಿಗಾಗಿ ನಾಳೆ ಉಪನ್ಯಾಸಕರು ಬೋಧನೆ ಮಾಡಬಹುದಾದ ವಿಷಯವನ್ನು ಹೋಂ ವರ್ಕ್ ಮಾಡುವ ಅವಕಾಶಗಳೂ ಇದು ಲಭ್ಯವಿವೆೆ. ಇದು ಎಳವೆಯಲ್ಲಿ ಇಂಟರ್‌ನೆಟ್ ಜ್ಞಾನವನ್ನು ನೀಡಲು ಸಹಕಾರಿಯಾಗುತ್ತದೆ.
ಮಾಹಿತಿಗಳು ಅಂತರ್ಜಾಲದಲ್ಲಿ ಸುಲಭವಾಗಿ ಸಿಗುವುದರಿಂದ 2 ಅಂಶಗಳಲ್ಲಿ ಶಿಕ್ಷಕರಿಗೆ ಲಾಭವಾಗಿದೆ. ಪ್ರಥಮವಾಗಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥ ಮಾಡಿಸಬಹುದು. ಎರಡನೆದಾಗಿ ತಮಗೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಶಿಕ್ಷಕರು ಸರಿಯಾಗಿ ಹೋಮ್ ವರ್ಕ್ ಮಾಡದೇ ತರಗತಿಯಲ್ಲಿ ಹೋಗಿ ಯಾವುದೋ ವಿಷಯದ ಕುರಿತು ಉಪನ್ಯಾಸ ನೀಡಿದರೆ ಮುಜುಗರಕ್ಕೆ ಈಡಾಗುವ ಅಪಾಯವೂ ಇದೆ. ಏಕೆಂದರೆ ವಿದ್ಯಾರ್ಥಿಗಳು ಶಿಕ್ಷಕರಿಗಿಂತ ಹೆಚ್ಚು ತಿಳಿದುಕೊಂಡಿರುವ ಸಾಧ್ಯತೆಗಳೂ ಇವೆ. ವೈಟ್ ಸ್ಕ್ರೀನ್ ಟೀಚಿಂಗ್
ಈಗಾಗಲೇ ಕೆಲವು ಕಡೆಗಳಲ್ಲಿ ಪಾಠಗಳು, ಬೋಧನೆಗಳು ಆನ್‌ಲೈನ್ ಮೂಲಕ ನಡೆಯುತ್ತಿವೆ. ಶಿಕ್ಷಕ ಅಥವ ಸಂಪನ್ಮೂಲ ವ್ಯಕ್ತಿ ಒಂದು ಕಡೆಯಿಂದ ಅನಂತ ದೂರದಲ್ಲಿರುವ ವಿದ್ಯಾರ್ಥಿ ಸಮೂಹಕ್ಕೆ ಬೋಧಿಸುತ್ತಾರೆ. ಶಾಲೆಗಳು ಅಥವ ‘ಬ್ಲ್ಯಾಕ್ ಬೋರ್ಡ್ ಎಜುಕೇಶನ್’ ವ್ಯವಸ್ಥೆ ‘ವೈಟ್ ಸ್ಕ್ರೀನ್’ ವ್ಯವಸ್ಥೆಯಾಗಿ ಬದಲಾಗಲಿವೆ. ಈಗಾಗಲೇ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಅವಕಾಶವನ್ನು ತೆರೆಯಲಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಣೆಯಾಗಲಿದೆ.
Related Articles
ಸಹಜವಾಗಿ ಇಂಟರ್‌ನೆಟ್ ಅಂದಾಗ ಮನೆಗಳಲ್ಲಿ ಒಂದು ಬಗೆಯ ನಕಾರಾತ್ಮಕತೆ ಉಂಟಾಗುತ್ತದೆ. ಇದು ಬದಲಾಗಬೇಕು. ಮನೆಯಲ್ಲಿ ಕಂಪ್ಯೂಟರ್ ಅಥವ ಲ್ಯಾಪ್‌ಟಾಪ್‌ಗ್ಳಿದ್ದರೆ ಓಪನ್ ಆ್ಯಕ್ಸೆಸ್ ಆಗಿ ಇರಿಸಿಕೊಳ್ಳಿ. ಮಗ ಅಥವ ಮಗಳಿಗಾಗಿ ಪ್ರತ್ಯೇಕ ಕೊಠಡಿಯನ್ನು ಇದಕ್ಕಾಗಿ ಮೀಸಲಿಡಬೇಕಾಗಿಲ್ಲ.
Advertisement
•ಕಾರ್ತಿಕ್ ಅಮೈ