Advertisement

250 ಬೆಡ್‌ ಸಾಮರ್ಥ್ಯದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ

04:03 PM May 07, 2021 | Team Udayavani |

ಮೈಸೂರು: ನಗರದ ಕೆಆರ್‌ಎಸ್‌ ರಸ್ತೆಯಲ್ಲಿರುವ ಪಿಕೆಟಿವಿ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ250 ಹಾಸಿಗೆ ಸಾಮರ್ಥ್ಯದ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಟಿ.ಸೋಮಶೇಖರ್‌ ಗುರುವಾರ ಉದ್ಘಾಟಿಸಿದರು.

Advertisement

ಬಳಿಕ ಮಾತನಾಡಿದ ಅವರು,ಸೂಪರ್‌ ಸ್ಪೆಷಾಲಿಟಿಯಲ್ಲಿ ಈ 40ಆಕ್ಸಿಜನೇಟೆಡ್‌ ಬೆಡ್‌ಗಳ ವ್ಯವಸ್ಥೆ ಮಾಡಿಚಾಲನೆ ನೀಡಿದ್ದು, ಇನ್ನು 4 ರಿಂದ 5ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚುಮಾಡಲಾಗುತ್ತದೆ ಎಂದರು.

ಗುರುವಾರ ಬೆಳಗ್ಗೆ ತುಳಸಿದಾಸ್‌ಆಸ್ಪತ್ರೆಯನ್ನೂ ಸಹ ಉದ್ಘಾಟಿಸಲಾಗಿದ್ದು ,ಆ ಆಸ್ಪತ್ರೆಯನ್ನು ಸಹ 100 ಆಕ್ಸಿಜನೈಟೆಡ್‌ಬೆಡ್‌ಗಳನ್ನಾಗಿ ಮಾಡಲಾಗುತ್ತದೆ.ಮೈಸೂರು ಜಿಲ್ಲೆಯಲ್ಲಿ ಕೋವಿಡ್‌ಪ್ರಕರಣಗಳು ಹೆಚ್ಚಾಗುತ್ತಿರುವಹಿನ್ನೆಲೆಯಲ್ಲಿ ಆಕ್ಸಿಜನೈ ಟೆಡ್‌ ಬೆಡ್‌ಗಳಅವಶ್ಯಕತೆ ಹೆಚ್ಚಿದೆ ಎಂದರು.ಎನ್‌.ಆರ್‌. ಕ್ಷೇತ್ರದ ಬೀಡಿ ಕಾಲೋನಿಯ ಆಸ್ಪತ್ರೆಯನ್ನು ಬಳಸಿಕೊಂಡು ಆಆಸ್ಪತ್ರೆಗೂ ಮುಡಾ ಸಹಯೋಗದಲ್ಲಿ100 ಆಕ್ಸಿಜನೈಟೆಡ್‌ ಬೆಡ್‌ ಕಲ್ಪಿಸಲುಚಿಂತಿಸಲಾಗಿದೆ ಎಂದರು.

ಆಸ್ಪತ್ರೆಗೆ ಅವಶ್ಯಕತೆ ಇರುವ ವೈದ್ಯರನ್ನುಹಾಗೂ ನರ್ಸ್‌ಗಳು ಹಾಗೂ ಸ್ಪೆಷಲಿಸ್ಟ್‌ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಮೂಲಕ ಕೋವಿಡ್‌ ರೋಗಿಗಳಿಗೆ ಎಲ್ಲಾ ಸೌಲಭ್ಯ ಒದಗಿಸಲುಜಿÇÉಾಡಳಿತ ಸಿದ್ದವಿದೆ ಎಂದು ಹೇಳಿದರು.ಸೂಪರ್‌ ಸ್ಪೆಷಲಿಟಿ ಆಸ್ಪತ್ರೆಯನ್ನುಮುಖ್ಯಮಂತ್ರಿಯವರು ಉದ್ಘಾಟಿಸಬೇಕಾಗಿತ್ತು.

ಇದು ಶಾಸಕ ನಾಗೇಂದ್ರ ಕನಸಾಗಿತ್ತು. ಆದರೆ ಈ ಸಂದರ್ಭದಲ್ಲಿಮುಖ್ಯಮಂತ್ರಿಗಳು ಉದ್ಘಾಟನೆಮಾಡಲು ಸಾಧ್ಯವಾಗುವುದಿಲ್ಲ ಎಂದರು.ಈ ವೇಳೆ ಸಂಸದ ಪ್ರತಾಪ್‌ ಸಿಂಹ,ಶಾಸಕರಾದ ಎಲ್.ನಾಗೇಂದ್ರ, ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ರೋಹಿಣಿಸಿಂಧೂರಿ, ಡಾ.ನಂಜರಾಜ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next