ಮುಂಬಯಿ, ನ. 25: ಮೀರಾರೋಡ್ ಪೂರ್ವದ ಗೀತಾನಗರ ಪರಿಸರದ ಮಹಿಳೆಯರು ಸ್ಥಾಪಿಸಿದ ಶ್ರೀ ರಾಮ ಭಜನ ಮಂಡಳಿಯನಾಮಕರಣ ಅನಾವರಣವು ನ. 23ರಂದು ಸಂಜೆಮೀರಾರೋಡ್ ಪೂರ್ವದ ಭಾರತಿ ಪಾರ್ಕಿನ ಎ. 1 ಯುನಿಟಿ ಕಟ್ಟಡದಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ಭಜನ ಸಮಿತಿಯ ಸಭಾಗೃಹದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀ ಅಯ್ಯಪ್ಪ ಭಕ್ತ ಮಂಡಳಿಯ ಗುರುಸ್ವಾಮಿ ಜಯ ಶೀಲ ತಿಂಗಳಾಯ ಅವರು ಮಾತನಾಡಿ, ಭಜನೆ ಸನಾತನ ಸಂಸ್ಕೃತಿ, ಸಂಪ್ರದಾಯವನ್ನು ತಿಳಿಸುವಸುಲಭದ ಮಾಧ್ಯಮವಾಗಿದೆ. ಲಯಬದ್ಧವಾದ ತಾಳ, ಸ್ವರ ಮಾಧುರ್ಯದಿಂದ ಅನೇಕ ಒತ್ತಡ ಗಳು ದೂರವಾಗುತ್ತದೆ. ಮಾನಸಿಕ ನೆಮ್ಮದಿ,
ಸಂಘಟನಾತ್ಮಕ ಬೆಳವಣಿಗೆ ಇದು ಮೂಲಾಧಾರ ವಾಗಿದೆ ಎಂದು ಹೇಳಿದ ಅವರು ನೂತನವಾಗಿ ಅಸ್ವಿತ್ವಕ್ಕೆ ಬಂದಿರುವ ಶ್ರೀ ರಾಮ ಭಜನ ಮಂಡಳಿಗೆಕಲಿಯುಗದ ಭಗವಂತ ಶ್ರೀ ಆಯ್ಯಪ್ಪ ಸ್ವಾಮಿ ಹಾಗೂ ಸ್ಥಳದ ಆರಾಧ್ಯ ದೇವರಾದ ಶ್ರೀ ಲಕ್ಷೀನಾರಾಯಣ ದೇವರು ಸುಖ, ಶಾಂತಿ,ನೆಮ್ಮದಿಯನ್ನು ಕರುಣಿಸಲೆಂದು ಪ್ರಾರ್ಥಿಸಿ ಶ್ರೀಸನ್ನಿಧಿಯ ಪ್ರಸಾದ ನೀಡಿ ಗೌರವಿಸಿದರು.
ನೂತನ ಮಂಡಳಿಯ ಲೋಲಾಕ್ಷೀ ಕೋಟ್ಯಾನ್,ಲತಾ ಪುತ್ರನ್, ಜಯಶ್ರೀ ಶೆಟ್ಟಿ, ಸುನೀತಾ ಶೆಟ್ಟಿ, ಗೀತಾ ಶೆಟ್ಟಿ, ಯಶೋಧಾ ಬಂಗೇರ, ಶ್ರೀ ಲಕ್ಷ್ಮೀನಾರಾಯಣ ಭಜನ ಸಮಿತಿಯಸದಸ್ಯರು, ಶ್ರೀ ಅಯ್ಯಪ್ಪ ಭಕ್ತ ಮಂಡಳಿಯ ಶಿಬಿರದ ವ್ರತಧಾರಿ ಸ್ವಾಮಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಡಿಪೂಜೆ ಹಾಗೂ ಪ್ರಸಾಧ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು.
–ಚಿತ್ರ-ವರದಿ: ರಮೇಶ್ ಅಮೀನ್