ಬೆಂಗಳೂರು: ಸಾಂಪ್ರದಾಯಿಕ ಧೋತಿ, ಶರ್ಟು ಮತ್ತಿತರ ಉಡುಪುಗಳನ್ನು ತಯಾರಿಸಿ, ಮಾರಾಟ ಮಾಡುತ್ತಿರುವ ರಾಮರಾಜ್ ಕಾಟನ್, ಅಪ್ಪಟ ಅರಳೆ ಬಟ್ಟೆಗಳ ಮಾರಾಟದ ಜತೆಯಲ್ಲಿ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸೇವೆಯನ್ನೂ ಮಾಡುತ್ತಿದೆ ಎಂದು ಇಸ್ಕಾನ್ ಟೆಂಪಲ್ ಸಂಪನ್ಮೂಲ ಕ್ರೋಡೀಕರಣ ವಿಭಾಗದ ನಿರ್ದೇಶಕ ಶ್ರೀಧಾಮ ಕೃಷ್ಣ ದಾಸ ಅವರು ತಿಳಿಸಿದ್ದಾರೆ.
ಯಶವಂತಪುರ 1ನೇ ಮುಖ್ಯ ರಸ್ತೆ, ಗೋಕುಲ್ 1ನೇ ಹಂತದಲ್ಲಿ ರಾಮರಾಜ್ ಕಾಟನ್‌ನ 10ನೇ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂಸ್ಥೆಯ ಮಾಲೀಕರು ಬಟ್ಟೆ ವ್ಯಾಪಾರದ ಉದ್ಯಮದ ಜತೆಯಲ್ಲಿ ಬಹಳಷ್ಟು ಸಾಮಾಜಿಕ ಸೇವೆ ಮಾಡುತ್ತಿದ್ದಾರೆ.
ನಮ್ಮ ದೇಶದ ಸಂಪ್ರದಾಯ ಮತ್ತು ಸಂಸ್ಕೃತಿಯ ಗುರುತಾದ ಪಂಚೆ, ಜುಬ್ಟಾ, ಟವಲು ಮತ್ತಿತರ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಸಾಮಾಜಿಕ ಬದಲಾವಣೆಯತ್ತ ಸಾಗಿದ್ದಾರೆ. ರಸ್ತೆಗೊಂದರಂತೆ ರಾಮರಾಜ್ ಕಾಟನ್ ಶೋರೂಂ ತೆರೆದಲ್ಲಿ, ಪ್ಯಾಂಟ್‌ಗಳು ಹೋಗಿ ಸಾಂಪ್ರದಾಯಿಕ ಉಡುಪುಗಳ ಟ್ರೆಂಡ್ ಬರಲು ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀಧಾಮ ಕೃಷ್ಣದಾಸ ಅವರಿಂದ ಮೊದಲ ಉತ್ಪನ್ನ ಖರೀದಿಸಿದ ಡಬುÉಎಸ್‌ಸಿ (ಕರ್ನಾಟಕ) ಅಧ್ಯಕ್ಷ ಡಾ. ಪಿ. ಧನಪತಿ ಮಾತನಾಡಿ, ಗುಣಮಟ್ಟದ ಉಡುಪುಗಳನ್ನು ತಯಾರು ಮಾಡಿ ಸಾಮಾನ್ಯ ಜನರಿಗೂ ತಲುಪಬೇಕೆಂದು ಯೋಚಿಸಿರುವ ಸಂಸ್ಥೆಯ ಅಧ್ಯಕ್ಷ ನಾಗರಾಜ್ ಅವರದ್ದು ಇದೊಂದು ವಿಶಿಷ್ಟ ರೀತಿ ಸೇವೆಯಾಗಿದೆ. ಅವರು ಒಬ್ಬ ಉದ್ಯಮಿ ಮಾತ್ರವಲ್ಲ ಆಧ್ಯಾತ್ಮಿಕ ಸೇವಕ ಕೂಡ ಆಗಿದ್ದಾರೆ ಎಂದರು.
ಕರ್ನಾಟಕದ 21ನೇ ಶೋರೂಂ: ರಾಮ್ ರಾಜ್ ಕಾಟನ್ ಕರ್ನಾಟಕ ವಲಯದ ಬಿಸಿನೆಸ್ ಮ್ಯಾನೇಜರ್ ರಾಜೇಶ್ ಮಾತನಾಡಿ, ಸಾಂಪ್ರದಾಯಿಕ ಬಟ್ಟೆಗಳ ಬ್ರ್ಯಾಂಡ್ ನಮ್ಮದು. ಇದು ಬೆಂಗಳೂರಿನ 10ನೇ ಮಳಿಗೆಯಾಗಿದ್ದು, ಕರ್ನಾಟಕದ 21ನೇ ಹಾಗೂ ದಕ್ಷಿಣ ಭಾರತದ 137ನೇ ಶೋರೂಮ್ ಆಗಿದೆ.
ರಾಮ್ ರಾಜ್ ಕಾಟನ್‌ನಲ್ಲಿ ಸಾಂಪ್ರದಾಯಿಕ ಪಂಚೆ, ಶಲ್ಯ, ಶರ್ಟು ಮತ್ತಿತರ ಬಟ್ಟೆಗಳ ಜತೆಯಲ್ಲಿ ಬಾರ್ಡರ್, ಸ್ಟೈಗಾರ್ಡ್, ಪರ್‌ಫ್ಯೂಮ್ಡ್, ರಿಂಕಲ್ ರಹಿತ, ಶುಭಮುಹೂರ್ತ, ಎಂಬ್ರಾಯಿಡರಿ, ಮೆಯಿಲ್ಕನ್ ಧೋತಿಗಳು ಹಾಗೂ ಡಿಸೈನರ್, ಸಿಲ್ಕ್, ಕೂಲ್ ಕಾಟನ್, ಅಲ್ಟಿಮೇಟ್, ಲಿನೆನ್, ಬಾರ್ಡರ್ ಮ್ಯಾಚಿಂಗ್ ಮುಂತಾದ ಶರ್ಟುಗಳು ದೊರೆಯುತ್ತವೆ. ಮಕ್ಕಳ ಸಾಂಪ್ರದಾಯಿಕ ಬಟ್ಟೆಗಳನ್ನೂ ಸಹ ಮಾರಾಟ ಮಾಡುತ್ತೇವೆ ಎಂದು ವಿವರಿಸಿದರು.