Advertisement

Live; 53 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಆರಂಭ: ಎಲ್ಲಿ, ಯಾರಿಗೆ ಗದ್ದುಗೆ ?

04:25 PM Jan 04, 2020 | Team Udayavani |

ಲಕ್ನೋ/ಕೊಚ್ಚಿ: 17 ರಾಜ್ಯಗಳಲ್ಲಿರುವ 51 ವಿಧಾನಸಭಾ ಸ್ಥಾನಗಳಿಗೆ, ಎರಡು ಲೋಕಸಭಾ ಕ್ಷೇತ್ರಗಳಿಗೆ ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ನಡೆಯುತ್ತಿದೆ.

Advertisement

ಉಪಚುನಾವಣೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳಿಗೆ ಪ್ರತಿಕ್ಷೆಯ ಕಣವಾಗಿದೆ . ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿರುವ ರಾಜ್ಯದಲ್ಲಿ, ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಸ್ಥಾನಗಳಿಗೆ ಅಂದರೆ 11 ಸ್ಥಾನಗಳಿಗೆ ಮತಎಣಿಕೆ ನಡೆಯುತ್ತಿದೆ. ಗುಜರಾತ್ ನಲ್ಲಿ 6 ಕ್ಷೇತ್ರ, ಬಿಹಾರ್ ದಲ್ಲಿ 5 ಕ್ಷೇತ್ರ, ಅಸ್ಸಾಂ ನಲ್ಲಿ 4 ಕ್ಷೇತ್ರ, ಹಿಮಾಚಲ ಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ  ಎರಡು ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ.

ಉಪಚುನಾವಣೆ ಮತ ಎಣಿಕೆ ನಡೆಯುತ್ತಿರುವ ಇತರ ರಾಜ್ಯಗಳೆಂದರೆ ಪಂಜಾಬ್ (4 ಕ್ಷೇತ್ರ) , ಕೇರಳ (5 ಕ್ಷೇತ್ರ), ಸಿಕ್ಕಿಂ (3 ಕ್ಷೇತ್ರ), ರಾಜಸ್ಥಾನ (2 ಕ್ಷೇತ್ರ) ಮತ್ತು ಅರುಣಾಚಲ್ ಪ್ರದೇಶ, ಮಧ್ಯಪ್ರದೇಶ,ಒಡಿಶಾ, ಛತ್ತಿಸ್ ಗಡ, ಪುದುಚೇರಿ, ಮೇಘಾಲಯ, ತೆಲಂಗಾಣ.

ಲೋಕಸಭಾ ಕ್ಷೇತ್ರವಾದ ಸತಾರ (ಉತ್ತರಪ್ರದೇಶ) ಮತ್ತು ಸಮಾಸ್ತಿಪುರ್ (ಬಿಹಾರ್ ) ನಲ್ಲೂ ಮತ ಎಣಿಕೆ ನಡೆಯುತ್ತಿದೆ.ಇವೆರಡನ್ನೂ ಕೂಡ ಎನ್ ಸಿ ಪಿ ಮತ್ತು ಎಲ್ ಜೆ ಪಿ ಪಕ್ಷಗಳು ಕ್ರಮವಾಗಿ ಪ್ರತಿನಿಧಿಸುತ್ತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next