Advertisement

ಕಾಳಗಿಯಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

09:03 PM Jun 20, 2021 | Girisha |

ಮುದ್ದೇಬಿಹಾಳ: ರಕ್ತದಾನ ಶಿಬಿರದಲ್ಲಿ ಸಂಗ್ರಹಗೊಂಡ ದಾನಿಗಳ ರಕ್ತವನ್ನು ಕೊರೊನಾ ವಾರಿಯರ್ಸ್ಗಳಿಗೆ ಸಮರ್ಪಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ಹುಸೇನ್‌ ಮುಲ್ಲಾ ಹೇಳಿದರು.

Advertisement

ತಾಲೂಕಿನ ಕಾಳಗಿ ಗ್ರಾಮದಲ್ಲಿಸುವ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)ದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ, ರಾಜ್ಯ ಯುವ ಸಂಘಗಳ ಒಕ್ಕೂಟದ ಮುದ್ದೇಬಿಹಾಳ ತಾಲೂಕು ಘಟಕ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಗ್ರಾಮದ ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ರಕ್ತದಾನ ಶ್ರೇಷ್ಠ ದಾನವಾಗಿದೆ.

ಆರೋಗ್ಯವಂತ ರೆಲ್ಲರೂ ರಕ್ತದಾನ ಮಾಡಬಹುದು. ಕೋವಿಡ್‌-19 ಪರಿಸ್ಥಿತಿಯಲ್ಲಿ ಲಸಿಕೆ ಪಡೆದುಕೊಳ್ಳುವುದಕ್ಕೂ ಮೊದಲೇ ರಕ್ತದಾನ ಮಾಡುವುದು ಉತ್ತಮ ನಿರ್ಧಾರ ಎಂದು ಅಧ್ಯಕ್ಷತೆ ವಹಿಸಿದ್ದ ಸಿಎಚ್‌ಸಿಯ ಆಡಳಿತ ವೈದ್ಯಾಧಿ ಕಾರಿ ಡಾ| ರಂಗನಾಥ ವೈದ್ಯ ಹೇಳಿದರು. ರಕ್ತದಾನ ಮಾಡುವ ಮೂಲಕ ಅಸಹಾಯಕರು, ರೋಗಿಗಳ ಜೀವ ಉಳಿಸಲು ಮುಂದಾಗಿರುವ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದು ವಿಜಯಪುರ ರಕ್ತನಿಧಿ  ಕೇಂದ್ರದ ವೈದ್ಯಾ ಧಿಕಾರಿ ಡಾ| ಸುಮಾ ಮಮದಾಪುರ ಹೇಳಿದರು.

ಆಸ್ಪತ್ರೆಯ ಭೂದಾನಿ ಜಿ.ಎಸ್‌.ಸಜ್ಜನ ಸಸಿಗೆ ನೀರು ಹಾಕಿ ಶಿಬಿರ ಉದ್ಘಾಟಿಸಿದರು. ಪಿ.ಎಸ್‌. ತುಪ್ಪದ, ಬಿ.ಕೆ.ವಸ್ತ್ರದ, ಡಾ| ಅಭಿಷೇಕ, ಜಂಗಮ ಸಮಾಜದ ಹಿರಿಯರಾದ ಪ್ರಕಾಶ ತುಪ್ಪದ, ಸಂಘಟನೆಗಳ ಯುವಕರಾದ ಸುನೀಲ ದೊಡಮನಿ, ಸಾಬುದಿನ್‌ ಮ್ಯಾಗೇರಿ, ಶ್ರೀಶೆ„ಲ ಅಳ್ಳದ, ಸಿದ್ದು ಮನಗೂಳಿ, ರಾಮು ಮನಗೂಳಿ, ಲಕ್ಷ್ಮಣ ನಾಶಿ, ರಾಹುಲ್‌ ಸಿಂಹಾಸನ ಇದ್ದರು. ಒಟ್ಟು 36 ಜನರು ರಕ್ತದಾನ ಮಾಡಿದರು. ಇವರೆಲ್ಲರಿಗೂ ಜಿಲ್ಲಾ ರಕ್ತನಿ ಧಿ ಕೇಂದ್ರದಿಂದ ಪ್ರಮಾಣ ಪತ್ರ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next